ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಗೇರಿ-ನಾಯಂಡಹಳ್ಳಿ ಮೆಟ್ರೋ ಮಾರ್ಗದ ಕಾಮಗಾರಿ ಯಾವ ಹಂತದಲ್ಲಿದೆ?

|
Google Oneindia Kannada News

ಬೆಂಗಳೂರು, ಫೆಬ್ರವರಿ 12: ನಾಯಂಡಹಳ್ಳಿ-ಕೆಂಗೇರಿ ನಮ್ಮ ಮೆಟ್ರೋ ಎರಡನೇ ಹಂತದ ಕಾಮಗಾರಿ ಇದೀಗ ಪ್ರಗತಿಯಲ್ಲಿದೆ, ಕಾಮಗಾರಿ ಪೂರ್ಣ ಯಾವಾಗ, ಈಗ ಯಾವ ಹಂತದಲ್ಲಿದೆ ಎಂಬ ಮಾಹಿತಿ ಇಲ್ಲಿದೆ.

ನಾಯಂಡಹಳ್ಳಿ-ಕೆಂಗೇರಿ ಮೆಟ್ರೋ ಯೋಜನೆ ವಿಳಂಬಕ್ಕೆ ಕಾರಣ ನಾಯಂಡಹಳ್ಳಿ-ಕೆಂಗೇರಿ ಮೆಟ್ರೋ ಯೋಜನೆ ವಿಳಂಬಕ್ಕೆ ಕಾರಣ

ಕಾಮಗಾರಿ ಶೇ.81 ರಷ್ಟು ಪೂರ್ಣಗೊಂಡಿದ್ದು, ಭೂಸ್ವಾಧೀನ ಶೇ.96 ರಷ್ಟು ಮುಗಿದಿದೆ. ಎಲ್ಲ ಮಾರ್ಗಗಳ ಪೈಕಿ ಕನಕಪುರ ರಸ್ತೆಯ ಯಲಚೇನಹಳ್ಳಿ-ಅಂಜನಾಪುರ ಟೌನ್‌ಶಿಪ್ ಮಾರ್ಗದಲ್ಲಿ ಮಾತ್ರ ಭೂಸ್ವಾಧೀನ ಪ್ರಕ್ರಿಯೆ ಹಾಗೆಯೇ ಇದೆ.

ಯಲಚೇನಹಳ್ಳಿ-ಅಂಜನಾಪುರ ಮಾರ್ಗ 2021ಕ್ಕೆ ಪೂರ್ಣ

ಯಲಚೇನಹಳ್ಳಿ-ಅಂಜನಾಪುರ ಮಾರ್ಗ 2021ಕ್ಕೆ ಪೂರ್ಣ

ಯಲಚೇನಹಳ್ಳಿ-ಅಂಜನಾಪುರ ಮಾರ್ಗಗಳನ್ನು 2020-21ರ ನಡುವೆ ಸಂಚಾರಕ್ಕೆ ಮುಕ್ತಗೊಳಿಸುವ ಗುರಿ ಇದೆ. ನಾಯಂಡಹಳ್ಳಿ-ಕೆಂಗೇರಿ ಮಾರ್ಗದಲ್ಲಿ ಶೇ.81ರಷ್ಟು ಕಾಮಗಾರಿ ಮುಗಿದಿದೆ. ಭೂ ಸ್ವಾಧೀನ ಪ್ರಕ್ರಿಯೆ ಶೇ.4ರಷ್ಟು ಬಾಕಿ ಇದೆ.

ಹಸಿರು ಮಾರ್ಗದಲ್ಲಿ ಜನವರಿ 28ರಿಂದ ಆರು ಬೋಗಿಯ ಮೆಟ್ರೋ ಸಂಚಾರ ಹಸಿರು ಮಾರ್ಗದಲ್ಲಿ ಜನವರಿ 28ರಿಂದ ಆರು ಬೋಗಿಯ ಮೆಟ್ರೋ ಸಂಚಾರ

ಗುತ್ತಿಗೆ ಕಂಪನಿ ಆರ್ಥಿಕ ಸಂಕಷ್ಟದಲ್ಲಿ

ಗುತ್ತಿಗೆ ಕಂಪನಿ ಆರ್ಥಿಕ ಸಂಕಷ್ಟದಲ್ಲಿ

ಕೆಂಗೇರಿ ಮಾರ್ಗದಲ್ಲಿ ಒಂದು ಪ್ಯಾಕೇಜ್ ಗುತ್ತಿಗೆ ಪಡೆದಿದ್ದ ಕಂಪನಿ ಆರ್ಥಿಕ ಸಂಕಷ್ಟದಲ್ಲಿರುವುದರಿಂದ ಕಾಮಗಾರಿಗೆ ತೊಡಕಾಗಿದೆ. ಈ ಅಧಿಕಾರಿಗಳು ಕಂಪನಿಯ ಎಂಜಿನಿರ್‌ಗಳನ್ನು ನೇರ ಸಂಪರ್ಕ ಮಾಡಿ ನಿರ್ದೇಶನ ನೀಡುತ್ತಿದ್ದಾರೆ.

ಯಾವುದೇ ಮೆಟ್ರೋ ನಿಲ್ದಾಣದಿಂದ ಲಾಲ್ ಬಾಗ್‌ಗೆ 30 ರೂ. ಯಾವುದೇ ಮೆಟ್ರೋ ನಿಲ್ದಾಣದಿಂದ ಲಾಲ್ ಬಾಗ್‌ಗೆ 30 ರೂ.

ಯಲಚೇನಹಳ್ಳಿ-ಅಂಜನಾಪುರ ಮಾರ್ಗ ಕಾಮಗಾರಿ ಎಷ್ಟು ಬಾಕಿ ಇದೆ

ಯಲಚೇನಹಳ್ಳಿ-ಅಂಜನಾಪುರ ಮಾರ್ಗ ಕಾಮಗಾರಿ ಎಷ್ಟು ಬಾಕಿ ಇದೆ

ಯಲಚೇನಹಳ್ಳಿ-ಅಂಜನಾಪುರ ಮಾರ್ಗದಲ್ಲಿ ಭೂ ಸ್ವಾಧೀನ ಪೂರ್ಣವಾಗಿದ್ದರೂ 22,300 ಚ.ಮೀ ಕಾಮಗಾರಿ ಇನ್ನೂ ಶೇ.25 ರಷ್ಟು ಬಾಕಿ ಇದೆ.

ವೈಟ್‌ಫೀಲ್ಡ್‌ ಗೆ ಮೆಟ್ರೋ ಬೇಕೆಂಬ ಕೂಗು

ವೈಟ್‌ಫೀಲ್ಡ್‌ ಗೆ ಮೆಟ್ರೋ ಬೇಕೆಂಬ ಕೂಗು

ವೈಟ್‌ಫೀಲ್ಡ್ ಕೈಗಾರಿಕಾ ಪ್ರದೇಶಕ್ಕೆ ಮೆಟ್ರೋ ಬೇಕೆಂಬ ಆಗ್ರಹ ಇದೆ. ಇಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಸಂಚಾರ ದಟ್ಟಣೆಯ ಸಮಸ್ಯೆಯನ್ನು ಜನರು ಎದುರಿಸುತ್ತಿದ್ದಾರೆ. ಈ ಮಾರ್ಗಕ್ಕೆ ಬೇಕಿರುವ 77,900 ಚ.ಮೀ ಭೂಮಿ ಪೈಕಿ ಶೇ.97 ರಷ್ಟು ಭೂಮಿ ದೊರೆತಿದೆ.

ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕ

ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕ

ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ಆರ್‌ವಿ ರಸ್ತೆ-ಬೊಮ್ಮಸಂದ್ರ ಮಾರ್ಗಕ್ಕೆ 2,12,500 ಚ.ಮೀ ಭೂಮಿ ಬೇಕಿದ್ದು, ಶೇ.96 ರಷ್ಟು ಭೂಮಿ ಸ್ವಾಧೀನವಾಗಿದೆ. ಆದರೆ ಕಾಮಗಾರಿ ನಿಧಾನವಾಗಿದೆ. ಎರಡನೇ ಹಂತದಲ್ಲಿ ಯೋಜನೆಗೆ 323 ಎಕರೆ ಭೂಮಿ ಬೇಕಿದ್ದು, ಇದುವರೆಗೆ 200 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ.

English summary
Namma metro 2nd phase from Nayandahalli to kengari and yelachenahalli to Anjanapura works in slow mode. Despite of completion of land acquisition works are not getting speed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X