ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಮೆಟ್ರೋ ಹಂತ-3: ಕೆಂಪಾಪುರದವರೆಗೆ 2 ಕಿಮೀ ವಿಸ್ತರಣೆ

|
Google Oneindia Kannada News

ಬೆಂಗಳೂರು, ಮೇ 02: ಬೆಂಗಳೂರು ನಮ್ಮ ಮೆಟ್ರೋದ ಹಂತ-3 ಅನ್ನು ಕೆಂಪಾಪುರದವರೆಗೆ ಸುಮಾರು 2 ಕಿಮೀ ವಿಸ್ತರಿಸಲು ನಿರ್ಧರಿಸಲಾಗಿದೆ. ಈ ಹಂತಕ್ಕೆ ಸಂಬಂಧಿಸಿದ DPRನ ಕರಡನ್ನು ರೈಲ್ವೇ ಸಚಿವಾಲಯದ ಉದ್ಯಮವಾದ ರೈಲ್ ಇಂಡಿಯಾ ಟೆಕ್ನಿಕಲ್ ಅಂಡ್ ಎಕನಾಮಿಕ್ ಸರ್ವೀಸ್ (RITES) ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಶನ್ ಲಿಮಿಟೆಡ್ (BMRCL)ಗೆ ಸಲ್ಲಿಸಿದೆ.

ನಮ್ಮ ಮೆಟ್ರೋದ ಹಂತ-3 ಯೋಜನೆಗೆ ಅಂದಾಜು 13,500 ಕೋಟಿ ರೂ. ವೆಚ್ಚವಾಗಲಿದ್ದು, ಈಗ ಇದು 44.65 ಕಿಮೀವರೆಗೆ ಚಲಿಸುತ್ತದೆ ಮತ್ತು ಒಟ್ಟು 31 ಮೆಟ್ರೋ ನಿಲ್ದಾಣಗಳೊಂದಿಗೆ ಎರಡು ಎಲಿವೇಟೆಡ್ ಕಾರಿಡಾರ್‌ಗಳನ್ನು ಒಳಗೊಂಡಿರುತ್ತದೆ. ಐದು ನಿಲ್ದಾಣಗಳಲ್ಲಿ ಇತರ ಮೆಟ್ರೋ ಮಾರ್ಗಗಳೊಂದಿಗೆ ಛೇದಕಗಳು ಇರುತ್ತವೆ.

ವೀಕೆಂಡ್ ಕರ್ಫ್ಯೂ: ನಮ್ಮ ಮೆಟ್ರೋ ಸಂಚಾರದ ಬಗ್ಗೆ ಮಾಹಿತಿವೀಕೆಂಡ್ ಕರ್ಫ್ಯೂ: ನಮ್ಮ ಮೆಟ್ರೋ ಸಂಚಾರದ ಬಗ್ಗೆ ಮಾಹಿತಿ

ಕಾರಿಡಾರ್ ಒಂದನ್ನು ಹೊರ ವರ್ತುಲ ರಸ್ತೆಯ ಪಶ್ಚಿಮದಲ್ಲಿ ಜೆ.ಪಿ. ನಗರ 4ನೇ ಹಂತದಿಂದ ಕೆಂಪಾಪುರವರೆಗೆ 22 ನಿಲ್ದಾಣಗಳೊಂದಿಗೆ 32.15 ಕಿ.ಮೀ ಇರಲಿದೆ. ""ಹಿಂದಿನ ಯೋಜನೆಯ ಪ್ರಕಾರ, ಇದನ್ನು ಹೆಬ್ಬಾಳ ರೈಲು ನಿಲ್ದಾಣದಲ್ಲಿ ಕೊನೆಗೊಳಿಸಬೇಕಾಗಿತ್ತು. ಆದರೆ ಈಗ ಅದನ್ನು ಕೆಂಪಾಪುರದವರೆಗೆ ಹೆಚ್ಚುವರಿ 2 ಕಿ.ಮೀ ವಿಸ್ತರಿಸಲು ನಿರ್ಧರಿಸಿದ್ದೇವೆ, ಇದರಿಂದ ವಿಮಾನ ನಿಲ್ದಾಣ ಮಾರ್ಗ (ಹಂತ 2ಎ, 2ಬಿ)ಗೆ ಸಂಪರ್ಕ ಕಲ್ಪಿಸಬಹುದು,'' ಎಂದು ಹೇಳಿದೆ.

Bengaluru Namma Metro’s Phase-3 To Be Extended by 2 km Up To Kempapura

ಮಾಗಡಿ ರಸ್ತೆಯಲ್ಲಿ ಹೊಸಹಳ್ಳಿಯಿಂದ ಕಡಬಗೆರೆವರೆಗಿನ ಕಾರಿಡಾರ್ ಎರಡು 9 ನಿಲ್ದಾಣಗಳೊಂದಿಗೆ 12.5 ಕಿ.ಮೀ., ಸರ್ಜಾಪುರದಿಂದ ಹೆಬ್ಬಾಳದವರೆಗಿನ ಹೆಚ್ಚುವರಿ ಮಾರ್ಗವನ್ನೂ ಹಂತ-3ಕ್ಕೆ ಸೇರ್ಪಡೆಗೊಳಿಸಲಾಗಿದೆ ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಇನ್ನೊಂದು ಮೂಲವು, "ಕರಡನ್ನು RITES ನಿಂದ BMRCLಗೆ ಸಲ್ಲಿಸಲಾಗಿದೆ. ನಾವು ನಮ್ಮ ಇನ್‌ಪುಟ್‌ಗಳನ್ನು ಶೀಘ್ರದಲ್ಲೇ ಕಳುಹಿಸುತ್ತೇವೆ ಮತ್ತು ಅವರು ಅಂತಿಮ ಡಿಪಿಆರ್ (DPR) ಅನ್ನು 15 ರಿಂದ 20 ದಿನಗಳಲ್ಲಿ ಸಲ್ಲಿಸಬಹುದು. ಅವರು ವರದಿಯನ್ನು ಓದಿರುವುದರಿಂದ ಹೆಚ್ಚಿನ ಬದಲಾವಣೆಗಳಿಲ್ಲದಿರಬಹುದು ಎಂದಿದೆ.

Bengaluru Namma Metro’s Phase-3 To Be Extended by 2 km Up To Kempapura

ಅಂತಿಮ ಡಿಪಿಆರ್ ಅನ್ನು ಬಿಎಂಆರ್‌ಸಿಎಲ್‌ಗೆ ಸಲ್ಲಿಸಿದ ನಂತರ ಅದನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ನಂತರ ರಾಜ್ಯವು ಅದನ್ನು ಕೇಂದ್ರಕ್ಕೆ ಅನುಮತಿಗಾಗಿ ಕಳುಹಿಸುತ್ತದೆ ಎಂದು ತಿಳಿಸಿದೆ.

ಸರ್ಜಾಪುರ- ಹೆಬ್ಬಾಳ ಮಾರ್ಗಕ್ಕೆ ಬಿಡ್ ಪೂರ್ವ ಸಭೆ
ಸರ್ಜಾಪುರದಿಂದ ಅಗರ, ಕೋರಮಂಗಲ ಮತ್ತು ಡೈರಿ ಸರ್ಕಲ್ ಮೂಲಕ ಹೆಬ್ಬಾಳದವರೆಗೆ ಹಂತ-3ರ ಅಡಿಯಲ್ಲಿ ಪ್ರಸ್ತಾಪಿಸಲಾದ ಹೊಸ 37 ಕಿಮೀ ಮೆಟ್ರೋ ಮಾರ್ಗದ ವಿವರವಾದ ಯೋಜನಾ ವರದಿಯನ್ನು ತಯಾರಿಸಲು ಕನಿಷ್ಠ 14 ಬಿಡ್‌ದಾರರು ಟೆಂಡರ್‌ನಲ್ಲಿ ಭಾಗವಹಿಸಲು ಆಸಕ್ತಿ ತೋರಿಸಿದ್ದಾರೆ. ಟೆಂಡರ್‌ಗೆ ಸಂಬಂಧಿಸಿದಂತೆ ಪೂರ್ವಭಾವಿ ಸಭೆಯನ್ನು ಬಿಎಂಆರ್‌ಸಿಎಲ್ ಏಪ್ರಿಲ್ 25ರಂದು ನಡೆಸಿದೆ.

English summary
Bengaluru Metro’s Phase-3 is set to be extended by nearly 2 km, thanks to a new extension up to Kempapura.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X