ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಷ್ಟದಲ್ಲಿದ್ದ ನಮ್ಮ ಮೆಟ್ರೋಗೆ ವರವಾದ ವಿದ್ಯಾರ್ಥಿಗಳು

|
Google Oneindia Kannada News

ಬೆಂಗಳೂರು, ಜನವರಿ 19: ಕೊರೊನಾ ಲಾಕ್‌ಡೌನ್ ಬಳಿಕ ನಮ್ಮ ಮೆಟ್ರೋ ಸಂಚಾರ ಆರಂಭವಾಗಿ ತಿಂಗಳುಗಳೇ ಕಳೆದಿದ್ದರೂ ಪ್ರಯಾಣಿಕರು ಅಷ್ಟಾಗಿ ಬರುತ್ತಿರಲಿಲ್ಲ.

ಇದೀಗ ಹತ್ತನೇ ತರಗತಿ ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ತರಗತಿಗಳು ಆರಂಭವಾದಾಗಿನಿಂದ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.

 2022ರ ಮಧ್ಯದಲ್ಲಿ ಚೀನಾದಿಂದ ಬೆಂಗಳೂರಿಗೆ ಬರಲಿವೆ ಮೆಟ್ರೋ ಬೋಗಿಗಳು 2022ರ ಮಧ್ಯದಲ್ಲಿ ಚೀನಾದಿಂದ ಬೆಂಗಳೂರಿಗೆ ಬರಲಿವೆ ಮೆಟ್ರೋ ಬೋಗಿಗಳು

ಸೆಪ್ಟೆಂಬರ್ 7 ರಿಂದ ನಮ್ಮ ಮೆಟ್ರೋ ಪುನರಾರಂಭಗೊಂಡಿತ್ತು, ದಿನದಲ್ಲಿ ಒಂದು ಲಕ್ಷ ಪ್ರಯಾಣಿಕರು ಮೆಟ್ರೋ ಹತ್ತುವುದು ಕಷ್ಟವಾಗಿತ್ತು. ಇದೀಗ ನಿತ್ಯ 1.25 ಲಕ್ಷ ಮಂದಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾರೆ.

Namma Metro Ridership Imroves Because Of Students

ಶಾಲಾ ಕಾಲೇಜು ಮಕ್ಕಳು ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುತ್ತಾರೆ ಎನ್ನುವ ಭರವಸೆ ಇದೆ ಹೀಗಾಗಿಯೇ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆಯಾಗಿದೆ.
ಜನವರಿ 15 ರಂದು ಒಟ್ಟು 1,22,250 ಮಂದಿ ಪ್ರಯಾಣಿಸಿದ್ದರು, ನೇರಳೆ ಮಾರ್ಗದಲ್ಲಿ 46435, ಹಸಿರು ಮಾರ್ಗದಲ್ಲಿ 47002 ಮಂದಿ ಪ್ರಯಾಣಿಸಿದ್ದರು.

ವರ್ಕ್ ಫ್ರಂ ಹೋಂ ನೀಡಿರುವುದು ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖವಾಗಲು ಕಾರಣವಾಗಿದೆ.ಶೀಘ್ರವೇ ಪೇಟಿಎಂ ಮೂಲಕ ನಮ್ಮ ಮೆಟ್ರೋ ಸ್ಮಾರ್ಟ್ ಕಾರ್ಡ್ ರೀಚಾರ್ಜ್ ಮಾಡುವ ಅವಕಾಶವನ್ನು ಬಿಎಂಆರ್‌ಸಿಎಲ್ ಕಲ್ಪಿಸಿಕೊಡಲಿದೆ.

ಮೆಟ್ರೋ ನಿಗಮದ ವೆಬ್‌ಸೈಟ್, ಅಥವಾ ನಿಲ್ದಾಣದಲ್ಲಿ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಮೂಲಕ, ನಿಗಮದ ಅಪ್ಲಿಕೇಷನ್ ಮೂಲಕ ರೀಚಾರ್ಜ್ ಮಾಡಿಕೊಳ್ಳುವ ಅವಕಾಶ ನೀಡಲಾಗಿತ್ತು.

ಆದರೆ ಸಾಕಷ್ಟು ಮಂದಿ ಕಾರ್ಡ್ ಬಳಸುತ್ತಿರಲಿಲ್ಲ, ಟೋಕನ್ ಮೂಲಕವೇ ಸಂಚರಿಸುತ್ತಿದ್ದರು, ಆದರೆ ಕೊರೊನಾ ನಂತರ ಕೇವಲ ಕಾರ್ಡ್ ಹೋಮದಿದವರು ಮಾತ್ರ ಮೆಟ್ರೋದಲ್ಲಿ ಪ್ರಯಾಣಿಸಬಹುದು ಎಂದು ಹೇಳಲಾಗಿದೆ.

Recommended Video

ಇದನ್ನ ನಾವು ಒಪ್ಪಲ್ಲ ಯಡಿಯೂರಪ್ಪ & ದಿನೇಶ್ ಗುಂಡು ರಾವ್ ಟ್ವೀಟ್ !! | Oneindia Kannada

ಹಾಗಾಗಿ ಎಲ್ಲರೂ ಮೆಟ್ರೋ ಕಾರ್ಡ್ ಪಡೆಯುತ್ತಿದ್ದಾರೆ, ಆದರೆ ನಿಲ್ದಾಣದಲ್ಲಿ ನಿಂತು ರೀಚಾರ್ಜ್ ಮಾಡುವುದು ಕಷ್ಟವಾಗಿದೆ. ಹೀಗಾಗಿ ಪೇಟಿಎಂ ಮೂಲಕ ರೀಚಾರ್ಜ್ ಮಾಡಲು ಅವಕಾಶ ನೀಡಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದರು.

English summary
The commencement of offline classes since January 1 for students of Class X and IInd year PUC in Bengaluru has brought in a bit of good news for Namma Metro.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X