ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋ 'ಮಳೆನೀರು ಕೊಯ್ಲು'- ಪರಿಣಾಮಕಾರಿ ಅನುಷ್ಠಾನ ಹೇಗೆ?

|
Google Oneindia Kannada News

ಬೆಂಗಳೂರು, ಜೂನ್ 7: ಬೆಂಗಳೂರಿನಲ್ಲಿ ಸ್ವಲ್ಪ ಮಳೆಯಾದರೂ ಸಾಕು ಪ್ರವಾಹದ ಪರಿಸ್ಥಿತಿ ತಲೆದೂರುತ್ತದೆ. ರಾಜಧಾನಿಗೆ ಬೇಕಾದ ಅಪಾರ ಪ್ರಮಾಣದ ನೀರನ್ನು ಪೂರೈಸಲು ಕಾವೇರಿ ನೀರು ತರಲಾಗಿದೆ, ಈಗ ಮೇಕೆದಾಟು ಯೋಜನೆಗಾಗಿ ಹೋರಾಟ ಶುರುವಾಗಿದೆ.

ಸಾವಿರಾರು ಕೋಟಿ ರುಪಾಯಿ ವೆಚ್ಚದ ಯೋಜನೆಗಳಿಂದ ಬೆಂಗಳೂರಿಗೆ ಕುಡಿಯುವ ನೀರಿನ ಸೌಲಭ್ಯವೇನೋ ದೊರೆಯುತ್ತದೆ. ಆದರೆ ರಾಜಧಾನಿಯಲ್ಲಿ ಮಳೆಗಾಲದಲ್ಲಿ ವ್ಯರ್ಥವಾಗಿ ಹೋಗುವ ಮಳೆ ನೀರನ್ನು ಸಮರ್ಪಕವಾಗಿ ಸಂಗ್ರಹಸಿದರೆ, ಅಂತರ್ಜಲದ ಮೇಲಿನ ಒತ್ತಡವನ್ನು ಸಾಕಷ್ಟು ಕಡಿಮೆ ಮಾಡಬಹುದಾಗಿದೆ.

ನಮ್ಮ ಮೆಟ್ರೋ ಪಾರ್ಕಿಂಗ್ ಗುತ್ತಿಗೆದಾರರಿಂದ ಕಿರುಕುಳ, ದೂರುನಮ್ಮ ಮೆಟ್ರೋ ಪಾರ್ಕಿಂಗ್ ಗುತ್ತಿಗೆದಾರರಿಂದ ಕಿರುಕುಳ, ದೂರು

ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ನೀರನ್ನು ಪಡೆಯಬಹುದಾಗಿದೆ. ಅದ್ಯಾಕೋ ಸಾವಿರಾರು ಕೋಟಿ ರುಪಾಯಿ ವೆಚ್ಚದ ನೀರಾವರಿ ಯೋಜನೆಗಳಿಗೆ ತೋರಿಸುವ ಆಸಕ್ತಿಯನ್ನು ಸರ್ಕಾರವಾಗಲಿ, ರಾಜಕಾರಣಿಗಳಾಗಲಿ ಮಳೆನೀರು ಕೊಯ್ಲು ವಿಚಾರದಲ್ಲಿ ತೋರಿಸುತ್ತಿಲ್ಲ ಎನ್ನುವುದಂತೂ ನಿಜ, ಆದರೆ ಇದೆಲ್ಲದರ ನಡುವೆಯೇ ನಮ್ಮ ಮೆಟ್ರೋ ಸಂಸ್ಥೆ ಮಳೆನೀರು ಕೊಯ್ಲು ಬಗ್ಗೆ ಕಾಳಜಿ ವಹಿಸಿರುವುದು ನಿಜಕ್ಕೂ ಮೆಚ್ಚುಗೆಯ ಸಂಗತಿ.

ಮಳೆನೀರು ಸಂಗ್ರಹ ವ್ಯವಸ್ಥೆಯಲ್ಲಿ ಲೋಪದೋಷಗಳಿದ್ದರೂ, ಸಮಸ್ಯೆ ಸರಿಪಡಿಸಿದರೆ ಮೆಟ್ರೋ ಸಂಚಾರ ಮಾರ್ಗದಲ್ಲಿ ಮಳೆ ನೀರು ಸಂಗ್ರಹ ಬೆಂಗಳೂರಿಗೆ ಸಾಕಷ್ಟು ಉಪಯೋಗವಾಗುವ ಸಾಧ್ಯತೆ ಇದೆ.

 ನಮ್ಮ ಮೆಟ್ರೋ ಮಳೆ ನೀರು ಕೊಯ್ಲು ವ್ಯವಸ್ಥೆ

ನಮ್ಮ ಮೆಟ್ರೋ ಮಳೆ ನೀರು ಕೊಯ್ಲು ವ್ಯವಸ್ಥೆ

ನಗರದ ಎಂಜಿ ರಸ್ತೆ ಮತ್ತು ಬೈಯಪ್ಪನಹಳ್ಳಿ ನಡುವಿನ 6.7 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಮೂಲಸೌಕರ್ಯ ಕೊರತೆಗಳ ನಡುವೆಯೂ ಮಳೆನೀರು ಕೊಯ್ಲು ವ್ಯವಸ್ಥೆ ಮಾಡಲಾಗಿದೆ. ಮೆಟ್ರೋ ನೆಟ್‌ವರ್ಕ್‌ನ ಸಂಪೂರ್ಣ ಮಾರ್ಗಗಳಲ್ಲಿ ಮಳೆನೀರು ಕೊಯ್ಲು ವ್ಯವಸ್ಥೆ ಕಾರ್ಯಗತಗೊಳಿಸುವ ಅಗತ್ಯವನ್ನು ಇದು ಸಾಬೀತು ಮಾಡಿದೆ.

ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಶನ್ ಲಿಮಿಟೆಡ್‌ನ (BMRCL) ಮಳೆನೀರು ಕೊಯ್ಲು ವ್ಯವಸ್ಥೆಯು ಎತ್ತರಿಸಿದ ಟ್ಯ್ರಾಕ್‌ ಮೇಲೆ ಬೀಳುವ ಮಳೆ ನೀರನ್ನು ಕಂಬಗಳ ನಡುವಿನ ಹೊಂಡಗಳಿಗೆ ಸಾಗಿಸುವ ಪೈಪ್ ಅನ್ನು ಹಾಕಲಾಗಿದೆ.

ರೀಚ್ 1 ನಿಲ್ದಾಣಗಳ ನಡುವಿನ 156 ಪಿಲ್ಲರ್ ಗಳ ಮಳೆನೀರು ಕೊಯ್ಲು ಮೂಲ ಸೌಕರ್ಯವನ್ನು ಸ್ವಯಂ ಸೇವಕರು ಸಮೀಕ್ಷೆ ಮಾಡಿದ್ದಾರೆ. ಕೆಲವೆಡೆ ದುರಸ್ಥಿ ಮತ್ತು ನವೀಕರಣ ಮಾಡಬೇಕಾಗಿದೆ ಎಂದು ಹೇಳಿದ್ದಾರೆ.

ಎಂಟು ಪಿಲ್ಲರ್ ಗಳಲ್ಲಿ ಪೈಪ್‌ಗಳು ಒಡೆದಿರುವುದು, ನಾಲ್ಕು ಕಡೆಗಳಲ್ಲಿ 300 ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್‌ಗಳು ಮುಚ್ಚಿಹೋಗಿರುವುದು, ಮತ್ತು ಏಳು ಕಡೆ ಕಸ ತುಂಬಿಕೊಂಡಿರುವುದನ್ನು ಗುರುತಿಸಲಾಗಿದೆ. ಐದು ಕಡೆಗಳಲ್ಲಿ ಟ್ಯಾಂಕ್ ಮುಚ್ಚಳಗಳು ಮುರಿದಿದ್ದರೆ. 14 ಕಡೆ ನೀರಿನ ಟ್ಯಾಂಕ್‌ಗಳ ಮುಚ್ಚಳ ಕಾಣೆಯಾಗಿದೆ.

ಈ ಸಮಸ್ಯೆಗಳನ್ನು ಸರಿಪಡಿಸಿದರೆ ಮಳೆ ನೀರು ಕೊಯ್ಲು ವ್ಯವಸ್ಥೆಯನ್ನು ನಿರ್ಮಿಸುವ ಮೆಟ್ರೋ ಪ್ರಯತ್ನ ಸಾರ್ಥಕವಾದಂತಾಗುತ್ತದೆ. ಮಳೆ ನೀರು ಕೊಯ್ಲು ಸಂಪೂರ್ಣ ಪ್ರಯೋಜನವನ್ನು ಪಡೆಯಬಹುದಾಗಿದೆ.

 ಮಳೆಗಾಲಕ್ಕೂ ಮೊದಲೆ ಸಮಸ್ಯೆ ಸರಿಪಡಿಸಬೇಕಿದೆ

ಮಳೆಗಾಲಕ್ಕೂ ಮೊದಲೆ ಸಮಸ್ಯೆ ಸರಿಪಡಿಸಬೇಕಿದೆ

ಕಸ ತುಂಬಿಕೊಂಡಿರುವುದನ್ನು ತೆರವುಗೊಳಿಸುವುದ ಜೊತೆಗೆ, ಮತ್ತೆ ಕಸ ತುಂಬಿಕೊಳ್ಳದಂತೆ ತಡೆಯಲು ಸ್ಟೀಲ್ ಮೆಶ್ ಅಳವಡಿಸುವುದು, ಒಡೆದಿರುವ ಪೈಪ್‌ಗಳನ್ನು ಸರಿಪಡಿಸಬೇಕು ಎಂದು ಸಮೀಕ್ಷೆ ಮಾಡಿದವರು ಹೇಳಿದ್ದಾರೆ.

"ಮಳೆನೀರು ಕೊಯ್ಲು ನಿಯಮಿತವಾಗಿ ನಿರ್ವಹಣೆಯ ಅಗತ್ಯವಿದೆ, ವಿಶೇಷವಾಗಿ ಮುಂಗಾರು ಆರಂಭಕ್ಕೆ ಕನಿಷ್ಠ ಒಂದು ತಿಂಗಳ ಮೊದಲು. ಪೈಪ್‌ಗಳು, ಹೊಂಡಗಳು ಮತ್ತು ನೀರಿನ ತೊಟ್ಟಿಗಳನ್ನು ಪರಿಶೀಲಿಸಿ, ದೋಷಗಳನ್ನು ಸರಿಪಡಿಸಿದರೆ ಮಳೆನೀರು ಕೊಯ್ಲು ರಚನೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ" ಎಂದು ಸಮೀಕ್ಷಕರ ತಂಡ ಹೇಳಿದೆ.

 ಸಮಸ್ಯೆ ಸರಿಪಡಿಸುತ್ತೇವೆ ಎಂದ ಅಧಿಕಾರಿಗಳು

ಸಮಸ್ಯೆ ಸರಿಪಡಿಸುತ್ತೇವೆ ಎಂದ ಅಧಿಕಾರಿಗಳು

ಮೆಟ್ರೋ ಅಧಿಕಾರಿಗಳು ಮಳೆ ನೀರು ಸಂಗ್ರಹ ವ್ಯವಸ್ಥೆಯಲ್ಲಿನ ಲೋಪದೋಷಗಳ ಬಗ್ಗೆ ಒಪ್ಪಿಕೊಂಡಿದ್ದು, ಸಮಸ್ಯೆ ಸರಿಪಡಿಸುವ ಭರವಸೆ ನೀಡಿದ್ದಾರೆ.

ಮೈಸೂರು ರಸ್ತೆ, ನಾಗಸಂದ್ರ, ಯಲಚೇನಹಳ್ಳಿ ಮೆಟ್ರೋ ಮಾರ್ಗದ ಹಲವೆಡೆ ಗಟ್ಟಿಯಾದ ಕಲ್ಲು ಕಂಡುಬಂದ ಕಾರಣ ಹಲವು ಕಡೆ ಮಳೆ ನೀರು ಸಂಗ್ರಹ ಮಾಡಲು ಹೊಂಡಗಳನ್ನು ಅಗೆದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೆಲಸವನ್ನು ಹತ್ತಿರದಿಂದ ನೋಡಿದ ಇನ್ನೊಬ್ಬ ಅಧಿಕಾರಿ, ರೀಚ್ 1 ನಲ್ಲಿ ಮಳೆನೀರು ಕೊಯ್ಲು ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ನಿರ್ಮಿಸಲಾಗಿದೆ ಎಂದು ಒಪ್ಪಿಕೊಂಡರು.

 ಬಿಎಂಆರ್ ಸಿಎಲ್ ಹಣ ಮೀಸಲಿಡಲಿ

ಬಿಎಂಆರ್ ಸಿಎಲ್ ಹಣ ಮೀಸಲಿಡಲಿ

ಅತಿ ಶೀಘ್ರದಲ್ಲೇ ಬೆಂಗಳೂರು 100 ಕಿಲೋ ಮೀಟರ್ ಮೆಟ್ರೋ ಸಂಚಾರ ಮಾರ್ಗವನ್ನು ಹೊಂದಲಿದೆ. ಸಂಪೂರ್ಣ ಮೆಟ್ರೋ ಮಾರ್ಗ, ನಿಲ್ದಾಣಗಳಲ್ಲಿ ಮಳೆ ನೀರು ಕೊಯ್ಲು ಸಂಗ್ರಹ ವ್ಯವಸ್ಥೆ ಮಾಡಿದರೆ. ನಗರದ ನೀರಿನ ಭದ್ರತೆಗೆ ಸಾಕಷ್ಟು ಸಹಾಯ ಮಾಡಿದಂತಾಗುತ್ತದೆ.

ಬೆಂಗಳೂರಿನಲ್ಲಿ ಅಂತರ್ಜಲ ಮಟ್ಟ ಕಡಿಮೆಯಾಗುತ್ತಿದೆ. ಕಾವೇರಿ ನೀರಿನ ಮೇಲೆ ಅವಲಂಬನೆ ಹೆಚ್ಚಾಗಿದೆ. 4ನೇ ಹಂತದ ಪೈಪ್‌ಲೈನ್ ಕಾಮಗಾರಿ ಮುಗಿದರೂ ಕಾವೇರಿಯಿಂದ ಬೆಂಗಳೂರಿನ ನೀರಿನ ಅಗತ್ಯತೆಯನ್ನು ಪೂರೈಸಲಾಗಿಲ್ಲ. ನಗರದಲ್ಲಿ ಕಾಂಕ್ರಿಟ್ ರಸ್ತೆಗಳ ನಿರ್ಮಾಣದಿಂದ ಮಳೆ ನೀರು ಇಂಗಲೂ ಸಮಸ್ಯೆಯಾಗುತ್ತಿದೆ. ಮಾತ್ರವಲ್ಲದೆ ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಸಲೂ ಇದು ಕಾರಣವಾಗಿದೆ.

ಬಿಎಂಆರ್ ಸಿಎಲ್ ಮಳೆ ನೀರು ಸಂಗ್ರಹಕ್ಕೆ ಹಣ ಮೀಸಲಿಡಬೇಕು, ಸಂಗ್ರಹಿಸಿದ ನೀರಿನ ಪ್ರಮಾಣ, ಬಳಕೆ ಬಗ್ಗೆ ಮಾಹಿತಿ ನೀಡಬೇಕು ಎನ್ನುವ ಒತ್ತಾಯ ಕೇಳಿಬಂದಿದೆ.

(ಒನ್ಇಂಡಿಯಾ ಸುದ್ದಿ)

English summary
Rainwater harvesting is being carried out amid a shortage of infrastructure in the 6.7 Kilometer stretch between the MG Road and Byappanahalli. This has proven the need to implement rainwater harvesting systems across the entire Metro network.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X