ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಮನ್ ಮೊಬಿಲಿಟಿ ಕಾರ್ಡ್ ಅನುಷ್ಠಾನಕ್ಕೆ ನಮ್ಮ ಮೆಟ್ರೋ ಸಿದ್ಧತೆ

|
Google Oneindia Kannada News

ಬೆಂಗಳೂರು, ಜನವರಿ 30: ಕಾಮನ್ ಮೊಬಿಲಿಟಿ ಕಾರ್ಡ್ ಜಾರಿಗೆ ತರಲು ನಮ್ಮ ಮೆಟ್ರೋ ಸಿದ್ಧತೆ ನಡೆಸಿದೆ.

ದೆಹಲಿ ಮೆಟ್ರೋ ಹಾಗೂ ಸರ್ಕಾರಿ ಬಸ್‌ಗಳಲ್ಲಿ ಪ್ರಾಯೋಗಿಕವಾಗಿ ಬಳಕೆಯಲ್ಲಿರುವ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡನ್ನು ನಮ್ಮ ಮೆಟ್ರೋದಲ್ಲೂ ಅನುಷ್ಠಾನಕ್ಕೆ ತರಲು ಬಿಎಂಆರ್‌ಸಿಎಲ್ ಸಿದ್ಧತೆ ಆರಂಭಿಸಿದೆ.

ಬೆಂಗಳೂರಲ್ಲಿರುವ 150 ವರ್ಷದ ಆಂಜನೇಯ ದೇವಾಲಯ ನೆಲಸಮಬೆಂಗಳೂರಲ್ಲಿರುವ 150 ವರ್ಷದ ಆಂಜನೇಯ ದೇವಾಲಯ ನೆಲಸಮ

ಎನ್‌ಸಿಎಂಸಿ ಕಾರ್ಡ್ ಒಮ್ಮೆ ಬಳಕೆಗೆ ಬಂದರೆ ಪ್ರಯಾಣಿಕರು ದೆಹಲಿ, ಚೆನ್ನೈ, ಸೇರಿದಂತೆ ಯಾವುದೇ ಮೆಟ್ರೋದಲ್ಲಿ ಈ ಕಾರ್ಡ್ ಬಳಸಬಹುದಾಗಿದೆ.

Namma Metro Prepare For Common Mobility Card Implementation

ಎನ್‌ಸಿಎಂಸಿ ಕಾರ್ಡ್ ಬಳಕೆಗೆ ಅನುಕೂಲವಾಗುವಂತೆ ಏಕೀಕೃತ ದರ ಸಂಗ್ರಹ ದ್ವಾರಗಳನ್ನು ಅಳವಡಿಸಲಾಗಿದೆ. ಈ ಮೂಲಕ ಮುಂದಿನ ಎರಡು ತಿಂಗಳಲ್ಲಿ ನಮ್ಮ ಮೆಟ್ರೋಲದಲ್ಲಿ ಎನ್‌ಸಿಎಂಸಿ ಕಾರ್ಡ್ ಬಳಕೆ ಆರಂಭಿಸಲಾಗುತ್ತದೆ.

ಒಂದು ವೇಳೆ ಬಿಎಂಟಿಸಿ ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡರೆ , ಬಿಎಂಟಿಸಿ ಪ್ರಯಾಣಿಕರು ಕೂಡ ಎನ್‌ಸಿಎಂಸಿ ಕಾರ್ಡ್ ಮೂಲಕ ಪ್ರಯಾಣಿಸಬಹುದು. ಒನ್-ನೇಷನ್ ಒನ್ ಕಾರ್ಡ್ ಘೋಷಣೆಯೊಂದಿಗೆ ಕೇಂದ್ರ ಸರ್ಕಾರ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ಬಿಡುಗಡೆಗೊಳಿಸಿತ್ತು.

ನವದೆಹಲಿಯಲ್ಲಿ ಮೆಟ್ರೋ ಮತ್ತು ಸರ್ಕಾರಿ ಬಸ್‌ಗಳಲ್ಲಿ ಈ ಕಾರ್ಡ್‌ಗಳನ್ನು ಪ್ರಾಯೋಗಿಕವಾಗಿ ಬಳಕೆ ಮಾಡಲಾಗಿತ್ತು. ಇದೀಗ ಬಿಎಂಆರ್‌ಸಿಎಲ್ ನಮ್ಮ ಮೆಟ್ರೋದ ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ ಸ್ವಾಗತ್ ಹೆಸರಿನ ಏಕೀಕೃತ ದರ ಸಂಗ್ರಹ ದ್ವಾರವನ್ನು ಅಳವಡಿಸಿದೆ.

English summary
Namma Metro is set to implement the Common Mobility Card.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X