ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋ 3ನೇ ಹಂತ: ವ್ಯಾಪ್ತಿ ಹಾಗೂ ನಿಲ್ದಾಣಗಳ ಬಗ್ಗೆ ಮಾಹಿತಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 27: ಬೆಂಗಳೂರು ನಮ್ಮ ಮೆಟ್ರೋದ 3ನೇ ಹಂತದ ಯೋಜನೆಯನ್ನು ಅಂತಿಮಗೊಳಿಸಲಾಗಿದೆ.

42 ಕಿ.ಮೀ ಉದ್ದದ ಯೋಜನೆ ಇದಾಗಿರಲಿದೆ, ಈ ಯೋಜನೆಯಲ್ಲಿ ಉಪನಗರ ರೈಲು, ಬಸ್‌ ಡಿಪೋಗಳು ಸೇರಿದಂತೆ 9 ಕಡೆಗಳಲ್ಲಿ ಸಂಪರ್ಕ ಕಲ್ಪಿಸುತ್ತದೆ. ಇದು ತಡೆ ರಹಿತ ಸಂಪರ್ಕಕ್ಕೆ ಸಹಾಯ ಮಾಡುತ್ತದೆ. ಯೋಜನೆಯು 2027-28ಕ್ಕೆ ಕಾರ್ಯಾರಂಭಗೊಳ್ಳಲಿದೆ.

ನಮ್ಮ ಮೆಟ್ರೋ ಸೇವೆ ಶುರುವಾಗಿ 10 ವರ್ಷ: ರೈಲಿನಲ್ಲಿ ಪ್ರಯಾಣಿಸಿದವರೆಷ್ಟು?ನಮ್ಮ ಮೆಟ್ರೋ ಸೇವೆ ಶುರುವಾಗಿ 10 ವರ್ಷ: ರೈಲಿನಲ್ಲಿ ಪ್ರಯಾಣಿಸಿದವರೆಷ್ಟು?

ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ಸಿದ್ಧಪಡಿಸಿರುವ ವರದಿ ಪ್ರಕಾರ, ಹಂತ-3 ಎರಡು ಮೆಟ್ರೋ ಕಾರಿಡಾರ್‌ಗಳನ್ನು ಹೊಂದಿರುತ್ತದೆ. ಕಾರಿಡಾರ್ 1 ಹೊರ ವರ್ತುಲ ರಸ್ತೆಯಲ್ಲಿ ಜೆಪಿನಗರದಿಂದ ಹೆಬ್ಬಾಳದವರೆಗೆ 31 ಕಿ.ಮೀ ಸಾಗಲಿದೆ.

Bengaluru : Namma Metro Phase 3 To Cover 42 km, Have 31 Stations

ಮತ್ತು ಕಾರಿಡಾರ್ 2 ಹೊಸಹಳ್ಳಿ ಟೋಲ್‌ನಿಂದ ಕಡಬಗೆರೆವರೆಗೆ 11 ಕಿ.ಮೀ ಸಾಗಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಒಆರ್‌ಆರ್‌ ಉದ್ದಕ್ಕೂ ಇರುವ ಮಾರ್ಗವು ಜೆಪಿನಗರದಲ್ಲಿ ಮೂರು ಸೇರಿದಂತೆ 22 ನಿಲ್ದಾಣಗಳನ್ನು ಹೊಂದಿರಲಿದೆ.

ಹಾಗೂ ಎರಡನೇ ಕಾರಿಡಾರ್‌ನಲ್ಲಿ 9 ನಿಲ್ದಾಣಗಳು ಇರಲಿವೆ. ಸೋಮನಹಳ್ಳಿ ಕ್ರಾಸ್ ಇಂಟರ್‌ಚೇಂಜ್ ನಿಲ್ದಾಣವಾಗಿ ಕಾರ್ಯನಿರ್ವಹಿಸಲಿದೆ. ಹೆಬ್ಬಾಳದಲ್ಲಿ ಕೊನೆಗೊಳ್ಳುವ ಮೊದಲ ಕಾರಿಡಾರ್ ಏರ್‌ಪೋರ್ಟ್‌ ಲೈನ್‌ನ ಹಂತ 2Bಯೊಂದಿಗೆ ಛೇದಿಸುತ್ತದೆ ಇದು ಕೆಆರ್‌ಪುರಂನಿಂದ ಹೆಬ್ಬಾಳ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಚಲಿಸುತ್ತದೆ.

ಹೀಗಾಗಿ ಒಆರ್‌ಆರ್‌ ರಸ್ತೆಯನ್ನು ಸಂಪೂರ್ಣವಾಗಿ ಸಂಪರ್ಕಿಸುತ್ತದೆ. ಜೆಪಿನಗರದ V ನಿಲ್ದಾಣವು ಹಂತ 1ರ ಹಸಿರು ಮಾರ್ಗದ ಜೆಪಿನಗರ ನಿಲ್ದಾಣ,ಕಾಮಾಕ್ಯ ಮೆಟ್ರೋ, ನೇರಳೆ ಮಾರ್ಗದ ಮೈಸೂರು ರಸ್ತೆ ನಿಲ್ದಾಣ, ಸುಮನಹಳ್ಳಿ ಕ್ರಾಸ್ ಎರಡೂ ಹೊಸ ಕಾರಿಡಾರ್‌ಗಳಿಗೆ ವಿನಿಮಯ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ.

ಹಸಿರು ಮಾರ್ಗದ ಪೀಣ್ಯ, ಲೊಟ್ಟಗಹಳ್ಳಿ ಉದ್ದೇಶಿತ ಉಪನಗರ ರೈಲು ಕಾರಿಡಾರ್‌ಗೆ ಸಂಪರ್ಕ ಕಲ್ಪಿಸುತ್ತದೆ. ಮುಂಬರುವ ಉಪನಗರ ರೈಲು ನಿಲ್ದಾಣದೊಂದಿಗೆ ಹೆಬ್ಬಾಳ, ರೈಲು ನಿಲ್ದಾಣ, ಬಿಎಂಟಿಸಿ ಡಿಪೋವನ್ನು ಸಂಪರ್ಕಿಸುತ್ತದೆ.

ಕಾರಿಡಾರ್ 1ರಲ್ಲಿ ಬರುವ ನಿಲ್ದಾಣಗಳು: ಜೆಪಿನಗರ 4ನೇ ಹಂತ, ಜೆಪಿನಗರ 5ನೇ ಹಂತ, ಜೆಪಿನಗರ, ಕದಿರೇನಹಳ್ಳಿ, ಕಾಮಾಕ್ಯ ಬಸ್ ನಿಲ್ದಾಣ, ಹೊಸಕೆರೆಹಳ್ಳಿ ಕ್ರಾಸ್, ಪಿಇಎಸ್ ಕಾಲೇಜು, ಮೈಸೂರು ರಸ್ತೆ ನಾಗರಭಾವಿ ವೃತ್ತ, ವಿನಾಯಕ ಲೇಔಟ್ ಹಾಗೂ ಇತರೆ ನಿಲ್ದಾಣಗಳು ಬರಲಿವೆ.

ಅಂಬೇಡ್ಕರ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್: ಬಿಡಿಎ ಕಾಂಪ್ಲೆಕ್ಸ್, ಸುಮನಹಳ್ಳಿ ಕ್ರಾಸ್, ಚೌಡೇಶ್ವರಿನಗರ, ಫ್ರೀಂಡಂ ಫೈಟರ್ ಕ್ರಾಸ್, ಕಂಠೀರವ ಸ್ಟೇಡಿಯಂ, ಪೀಣ್ಯ, ಬಾಹುಬಲಿ ನಗರ, ಬಿಇಎಲ್ ವೃತ್ತ, ಪಟೇಲಪ್ಪ ಲೇಔಟ್, ಹೆಬ್ಬಾಳ, ಕೆಂಪಾಪುರ ನಿಲ್ದಾಣಗಳಿರಲಿವೆ.

ಕಾರಿಡಾರ್ 2ರಲ್ಲಿ ಬರುವ ನಿಲ್ದಾಣಗಳು: ಹೊಸಹಳ್ಳಿ, ಕೆಎಚ್‌ಬಿ ಕಾಲೊನಿ, ವಿನಾಯಕನಗರ, ಸುಮನಹಳ್ಳಿ ಕ್ರಾಸ್, ಸುಂಕದಕಟ್ಟೆ, ಹೇರೋಹಳ್ಳಿ, ಬ್ಯಾಡರಹಳ್ಳಿ,ಫಾರೆಸ್ಟ್‌ ಗೇಟ್, ಕಡಬಗೆರೆ ನಿಲ್ದಾಣಗಳು ಇರಲಿವೆ.

ಕಳೆದ ಆಗಸ್ಟ್ 29ರಂದು ನಾಯಂಡನಹಳ್ಳಿಯಿಂದ ಕೆಂಗೇರಿವರೆಗಿನ ಮೆಟ್ರೋ ರೈಲು ಸಂಚಾರ ಉದ್ಘಾಟನೆ ಮಾಡುವ ಮೂಲಕ ಈ ಮಾರ್ಗದಲ್ಲಿ ಓಡಾಡುವ ಸಾವಿರಾರು ಜನರಿಗೆ ಅನುಕೂಲ ಮಾಡಿಕೊಡಲಾಗಿತ್ತು. ಮೈಸೂರು ರಸ್ತೆ ಮೆಟ್ರೋ ನಿಲ್ದಾಣದಿಂದ ಕೆಂಗೇರಿವರೆಗಿನ ಒಟ್ಟು 7.5 ಕಿ.ಮಿ. ಉದ್ದದ 6 ನಿಲ್ದಾಣಗಳಿರುವ ಮೆಟ್ರೋ ಸಂಚಾರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹಸಿರು ನಿಶಾನೆ ತೋರಿಸುವ ಮೂಲಕ ಮೆಟ್ರೋ ಮಾರ್ಗ ಉದ್ಘಾಟನೆ ಮಾಡಿದ್ದರು.

ಕೊರೊನಾ ಹಿನ್ನೆಲೆಯಲ್ಲಿ ಮೆಟ್ರೋ ಸಂಚಾರ ಅವಧಿಯನ್ನು ಬೆಳಗ್ಗೆ 7 ರಿಂದ ರಾತ್ರಿ 8ರ ವರೆಗೆ ಮಾತ್ರ ಸೀಮಿತಗೊಳಿಸಲಾಗಿತ್ತು. ಈಗ ಸೋಂಕು ಇಳಿಕೆಯಾದ ಹಿನ್ನೆಲೆ ಬೆಳಗ್ಗೆ 6 ರಿಂದ‌ ರಾತ್ರಿ 9.30ಕ್ಕೆ ಸಮಯ ವಿಸ್ತರಣೆ ಮಾಡಲಾಗಿದೆ. ಬೆಳಗ್ಗೆ ಒಂದು ತಾಸು ಹೆಚ್ಚಳ ಹಾಗೂ ರಾತ್ರಿ ಎರಡು ತಾಸು ತಡವಾಗಿ ನಮ್ಮ ಮೆಟ್ರೋ ಸೇವೆ ಲಭ್ಯವಾಗಲಿದೆ. ಎಲ್ಲಾ ನಮ್ಮ ಮೆಟ್ರೋ ಟರ್ಮಿನಲ್ ನಿಂದ ಕೊನೆ ರೈಲು 9:30ಕ್ಕೆ ಇರಲಿದೆ. ಈ ಸಮಯದವರೆಗೆ ಮೆಟ್ರೋ ರೈಲು ಈ ಸೇವೆ ಒದಗಿಸಲಿವೆ. ಕೊರೊನಾಗೂ ಮೊದಲು ಬೆಳಗ್ಗೆ 6 ರಿಂದ ರಾತ್ರಿ 11ರ ವರೆಗೆ ನಮ್ಮ ಮೆಟ್ರೋ ಸೇವೆ ಒದಗಿಸುತ್ತಿತ್ತು.

Recommended Video

ಭಾರತದ ಮುಸಲ್ಮಾನರಿಂದ ಪಾಕಿಸ್ತಾನ ತಂಡಕ್ಕೆ ಸಿಕ್ಕಿತ್ತಂತೆ ಬೆಂಬಲ | Oneindia Kannada

English summary
The alignment of Bengaluru Metro Phase-III project has just been finalised. The 42-km line will integrate with other Metro lines, suburban rail or bus depots at nine points that will help in seamless connectivity, say top officials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X