ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋ 2ನೇ ಹಂತದ ಕಾಮಗಾರಿ ವಿವರಗಳು

|
Google Oneindia Kannada News

ಬೆಂಗಳೂರು, ಮೇ 19 : ಉದ್ಯಾನ ನಗರಿ ಬೆಂಗಳೂರಿನಲ್ಲಿ ನಡೆಯುತ್ತಿರುವ ನಮ್ಮ ಮೆಟ್ರೋ ಮೊದಲನೇ ಹಂತದ ಕಾಮಗಾರಿ ಪೂರ್ಣಗೊಳ್ಳುತ್ತಾ ಬಂದಿದೆ. ಸದ್ಯ, 2ನೇ ಹಂತದ ಕಾಮಗಾರಿಯನ್ನು ಆರಂಭಿಸಲು ಬಿಎಂಆರ್‌ಸಿಎಲ್ ಸಿದ್ಧತೆ ನಡೆಸಿದೆ. ಮೈಸೂರು ರಸ್ತೆಯಲ್ಲಿ ಮೊದಲು ಕಾಮಗಾರಿ ಆರಂಭಗೊಳ್ಳಲಿದೆ.

ಮುಂದಿನ ಒಂದೆರಡು ತಿಂಗಳಿನಲ್ಲಿ 72 ಕಿ.ಮೀ ಉದ್ದದ ನಮ್ಮ ಮೆಟ್ರೋ 2ನೇ ಹಂತದ ಕಾಮಗಾರಿಗೆ ಚಾಲನೆ ದೊರೆಯಲಿದೆ. 2ನೇ ಹಂತದಲ್ಲಿ ನಾಯಂಡಹಳ್ಳಿ ಜಂಕ್ಷನ್‌ನಿಂದ ಕೆಂಗೇರಿವರೆಗಿನ 7.9 ಕಿ.ಮೀ ಉದ್ದದ ಮಾರ್ಗದ ಕಾಮಗಾರಿಯನ್ನು ಮೊದಲು ಆರಂಭಿಸಲು ಉದ್ದೇಶಿಸಲಾಗಿದೆ. [ನ್ಯಾ.ಕಾಲೇಜು-ಪುಟ್ಟೇನಹಳ್ಳಿ ನಡುವೆ ಪ್ರಾಯೋಗಿಕ ಸಂಚಾರ]

ಸಾರ್ವಜನಿಕ ಹೂಡಿಕೆ ಮಂಡಳಿ (ಪಿಐಬಿ) ಸಭೆ ನಮ್ಮ ಮೆಟ್ರೋ 2ನೇ ಹಂತದ ಕಾಮಗಾರಿಗೆ ಷರತ್ತು ಬದ್ಧ ಅನುಮತಿಯನ್ನು ನೀಡಿದೆ. 61 ನಿಲ್ದಾಣಗಳನ್ನು ಒಳಗೊಂಡ 72 ಕಿ.ಮೀ.ರೈಲು ಮಾರ್ಗ ನಿರ್ಮಾಣಕ್ಕೆ 26,405 ಕೋಟಿ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. [ಮಲ್ಲೇಶ್ವರಂ-ನಾಗಸಂದ್ರ ನಡುವೆ 25 ನಿಮಿಷದಲ್ಲಿ ಸಂಚರಿಸಿ]

ಒಂದನೇ ಹಂತದ ಯೋಜನೆ ಮಾರ್ಗಗಳನ್ನು ಬೆಸೆಯುವ ನಾಲ್ಕು ವಿಸ್ತೃತ ಮಾರ್ಗಗಳು ಮತ್ತು ಎರಡು ಹೊಸ ಮಾರ್ಗಗಳನ್ನು 2ನೇ ಹಂತದ ಯೋಜನೆ ಒಳಗೊಂಡಿದೆ. ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಬಳಿ ಸುಮಾರು 35 ಎಕರೆ ಪ್ರದೇಶದಲ್ಲಿ ಮೆಟ್ರೋ ಡಿಪೋ ಸಹ ನಿರ್ಮಾಣಗೊಳ್ಳಲಿದೆ. 2ನೇ ಹಂತದ ಕಾಮಗಾರಿಯ ವಿವರಗಳು ಇಲ್ಲಿವೆ...

72 ಕಿ.ಮೀ.ಮಾರ್ಗದ ಕಾಮಗಾರಿಗಳು

72 ಕಿ.ಮೀ.ಮಾರ್ಗದ ಕಾಮಗಾರಿಗಳು

ಮುಂದಿನ ಒಂದೆರಡು ತಿಂಗಳಿನಲ್ಲಿ 72 ಕಿ.ಮೀ ಉದ್ದದ ನಮ್ಮ ಮೆಟ್ರೋ 2ನೇ ಹಂತದ ಕಾಮಗಾರಿಗೆ ಬೆಂಗಳೂರಿನಲ್ಲಿ ಚಾಲನೆ ದೊರೆಯಲಿದೆ. ಈ ಯೋಜನೆಗೆ 26,405 ಕೋಟಿ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ.

ಮೈಸೂರು ರಸ್ತೆಯಲ್ಲಿ ಮೊದಲ ಕಾಮಗಾರಿ

ಮೈಸೂರು ರಸ್ತೆಯಲ್ಲಿ ಮೊದಲ ಕಾಮಗಾರಿ

ನಾಯಂಡಹಳ್ಳಿ ಜಂಕ್ಷನ್‌ನಿಂದ ಕೆಂಗೇರಿವರೆಗೆ 7.9 ಕಿ.ಮೀ ಉದ್ದದ ಕಾಮಗಾರಿ ಮೊದಲು ಆರಂಭವಾಗಲಿದೆ. ಎರಡು ಪ್ಯಾಕೇಜ್‌ಗಳಲ್ಲಿ ಈ ಕಾಮಗಾರಿಯನ್ನು ನಡೆಸಲಾಗುತ್ತದೆ. 3.9 ಕಿ.ಮೀ ಉದ್ದದ ಮೊದಲ ಪ್ಯಾಕೇಜ್‌ನ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ.

ಎರಡು ಹೊಸ ಮಾರ್ಗಗಳ ನಿರ್ಮಾಣ

ಎರಡು ಹೊಸ ಮಾರ್ಗಗಳ ನಿರ್ಮಾಣ

ಒಂದನೇ ಹಂತದ ಯೋಜನೆ ಮಾರ್ಗಗಳನ್ನು ಬೆಸೆಯುವ 4 ವಿಸ್ತೃತ ಮಾರ್ಗಗಳು ಮತ್ತು 2 ಹೊಸ ಮಾರ್ಗಗಳನ್ನು 2ನೇ ಹಂತದ ಯೋಜನೆ ಒಳಗೊಂಡಿದೆ. ಸಂಚಾರ ದಟ್ಟಣೆ ಹೆಚ್ಚಿರುವ ರಸ್ತೆಗಳಲ್ಲಿ ಮೊದಲು ಮೆಟ್ರೋ ರೈಲು ಓಡಿಸಬೇಕೆಂದು ಬಿಎಂಆರ್‌ಸಿಎಲ್ ನಿರ್ಧರಿಸಿದೆ. ಆದ್ದರಿಂದ ಮೈಸೂರು ರಸ್ತೆಯಲ್ಲಿ ಮೊದಲು ಕಾಮಗಾರಿ ಆರಂಭವಾಗುತ್ತಿದೆ.

35 ಎಕರೆಯಲ್ಲಿ ಡಿಪೋ ನಿರ್ಮಾಣ

35 ಎಕರೆಯಲ್ಲಿ ಡಿಪೋ ನಿರ್ಮಾಣ

2ನೇ ಹಂತದ ಕಾಮಗಾರಿಗಳಿಗಾಗಿ ಒಟ್ಟು 17 ಸಾವಿರ ಚದರ ಅಡಿ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಬೆಂಗಳೂರು ವಿವಿ ಬಳಿ 5 ಸಾವಿರ ಚದರ ಅಡಿ ಭೂಮಿ ಬೇಕಾಗಿದೆ. ಕೆಂಗೇರಿ ಬಳಿ ನಿಲ್ದಾಣ ನಿರ್ಮಾಣಕ್ಕೆ 6 ಎಕರೆ ಜಾಗದ ಅಗತ್ಯವಿದೆ. ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಬಳಿ ಸುಮಾರು 35 ಎಕರೆ ಪ್ರದೇಶದಲ್ಲಿ ಡಿಪೋ ನಿರ್ಮಿಸಲಾಗುತ್ತದೆ.

2ನೇ ಹಂತದ ಮಾರ್ಗಗಳು

2ನೇ ಹಂತದ ಮಾರ್ಗಗಳು

ನಾಯಂಡಹಳ್ಳಿ ಜಂಕ್ಷನ್ - ಕೆಂಗೇರಿ (7.9 ಕಿ.ಮೀ)
ಬೈಯಪ್ಪನಹಳ್ಳಿ - ವೈಟ್‌ಫೀಲ್ಡ್ (15.5 ಕಿ.ಮೀ)
ನಾಗಸಂದ್ರ - ಬಿಐಇಸಿ (3.7 ಕಿ.ಮೀ)
ಕೋಣನಕುಂಟೆ ಕ್ರಾಸ್ - ನೈಸ್ ರಸ್ತೆ (6.2 ಕಿ.ಮೀ)

ಹೊಸ ಮಾರ್ಗ

ಗೊಟ್ಟಿಗೆರೆ - ನಾಗವಾರ (22.2 ಕಿ.ಮೀ )
ಆರ್.ವಿ.ರಸ್ತೆ - ಬೊಮ್ಮಸಂದ್ರ ( 18.8 ಕಿ.ಮೀ)

English summary
The Bangalore Metro Rail Corporation Ltd (BMRCL) planning to begin Namma Metro phase 2 work within two months. Phase II metro project comprising 61 Stations covering the distance of 72 km.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X