ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ; ಮತ್ತೆ ಬರಲಿದೆ ಟೋಕನ್

|
Google Oneindia Kannada News

ಬೆಂಗಳೂರು, ಜೂನ್ 22; ಲಾಕ್‌ಡೌನ್ ಬಳಿಕ ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೋ ರೈಲುಗಳ ಸಂಚಾರ ಸೋಮವಾರ ಆರಂಭವಾಗಿದೆ. ಮೊದಲ ದಿನ 24,602 ಜನರು ಸಂಚಾರವನ್ನು ನಡೆಸಿದ್ದಾರೆ.

ಪ್ರಸ್ತುತ ಬೆಳಗ್ಗೆ 7 ರಿಂದ 11 ಮತ್ತು ಮಧ್ಯಾಹ್ನ 3 ರಿಂದ 6 ಗಂಟೆಯ ತನಕ ಮಾತ್ರ ನಮ್ಮ ಮೆಟ್ರೋ ರೈಲು ಸಂಚಾರ ನಡೆಸುತ್ತಿದೆ. ಅಲ್ಲದೇ ಸ್ಮಾರ್ಟ್‌ ಕಾರ್ಡ್ ಇರುವ ಪ್ರಯಾಣಿಕರು ಮಾತ್ರ ಸಂಚಾರ ನಡೆಸಬೇಕು. ಟೋಕನ್ ಪಡೆದು ಪ್ರಯಾಣಿಸಲು ಅವಕಾಶವಿಲ್ಲ.

ಅನ್‌ಲಾಕ್; ಮೊದಲ ದಿನ ಮೆಟ್ರೋ ಎಷ್ಟು ಜನರ ಸಂಚಾರ? ಅನ್‌ಲಾಕ್; ಮೊದಲ ದಿನ ಮೆಟ್ರೋ ಎಷ್ಟು ಜನರ ಸಂಚಾರ?

ಕೋವಿಡ್ ಮೊದಲ ಅಲೆ ಲಾಕ್‌ಡೌನ್ ಬಳಿಕ ನಮ್ಮ ಮೆಟ್ರೋ ಸ್ಮಾರ್ಟ್‌ ಕಾರ್ಡ್ ಹೊಂದಿರುವ ಪ್ರಯಾಣಿಕರಿಗೆ ಮಾತ್ರ ಸಂಚಾರ ನಡೆಸಲು ಅವಕಾಶ ನೀಡಿದೆ. ರೈಲು ನಿಲ್ದಾಣದಲ್ಲಿ ಜಾರಿಯಲ್ಲಿದ್ದ ಟೋಕನ್ ವ್ಯವಸ್ಥೆ ರದ್ದು ಮಾಡಿದೆ. ಇದರಿಂದಾಗಿ ಹಲವಾರು ಜನರಿಗೆ ತೊಂದರೆಯಾಗುತ್ತಿದೆ.

ಕೆಂಗೇರಿವರೆಗೆ ನಮ್ಮ ಮೆಟ್ರೋ ಸಂಚಾರ ಯಾವಾಗ, ದರ ಎಷ್ಟು?, ನಿಲ್ದಾಣಗಳ ಮಾಹಿತಿಕೆಂಗೇರಿವರೆಗೆ ನಮ್ಮ ಮೆಟ್ರೋ ಸಂಚಾರ ಯಾವಾಗ, ದರ ಎಷ್ಟು?, ನಿಲ್ದಾಣಗಳ ಮಾಹಿತಿ

ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲು ಬಿಎಂಆರ್‌ಸಿಎಲ್ ಮತ್ತೆ ಟೋಕನ್ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ. ಜೂನ್ 28ರಿಂದ ಅಥವ ಜುಲೈ 1ರಿಂದಲೇ ಟೋಕನ್ ವ್ಯವಸ್ಥೆ ಪುನರ್ ಪರಿಚಯಿಸಲಾಗುತ್ತದೆ ಎಂಬ ಸುದ್ದಿಗಳು ಹಬ್ಬಿವೆ.

ಜಯನಗರ ಮೆಟ್ರೋ ನಿಲ್ದಾಣಕ್ಕೆ ಎಚ್.ಎಸ್ ದೊರೆಸ್ವಾಮಿ ಹೆಸರನ್ನಿಡಲು ಆಗ್ರಹಜಯನಗರ ಮೆಟ್ರೋ ನಿಲ್ದಾಣಕ್ಕೆ ಎಚ್.ಎಸ್ ದೊರೆಸ್ವಾಮಿ ಹೆಸರನ್ನಿಡಲು ಆಗ್ರಹ

ಒಂದು ವರ್ಷದಿಂದ ಟೋಕನ್ ಇಲ್ಲ

ಒಂದು ವರ್ಷದಿಂದ ಟೋಕನ್ ಇಲ್ಲ

ಕೋವಿಡ್ ಮೊದಲ ಅಲೆ ಸಂದರ್ಭದಲ್ಲಿ ಲಾಕ್‌ಡೌನ್ ಘೋಷಣೆ ಮಾಡಿದ ಬಳಿಕ ಟೋಕನ್ ವ್ಯವಸ್ಥೆ ರದ್ದುಗೊಳಿಸಲಾಗಿದೆ. ಇದರಿಂದಾಗಿ ಸ್ಮಾರ್ಟ್‌ ಕಾರ್ಡ್‌ ಇರುವವರು ಮಾತ್ರ ಮೆಟ್ರೋದಲ್ಲಿ ಸಂಚಾರ ನಡೆಸಬೇಕಿದೆ. ಸುಮಾರು ಒಂದು ವರ್ಷದ ಬಳಿಕ ಬಿಎಂಆರ್‌ಸಿಎಲ್ ಟೋಕನ್ ಸಿಸ್ಟಮ್ ಮತ್ತೆ ಪರಿಚಯಿಸಲಿದೆ.

ಹಲವಾರು ಜನರಿಗೆ ಉಪಯೋಗ

ಹಲವಾರು ಜನರಿಗೆ ಉಪಯೋಗ

ಟೋಕನ್ ವ್ಯವಸ್ಥೆ ರದ್ದುಗೊಂಡ ಬಳಿಕ ಬೇರೆ ಊರುಗಳಿಂದ ಬರುವವರು, ತುರ್ತಾಗಿ ಸಂಚಾರ ನಡೆಸಲು ಮೆಟ್ರೋ ಏರುವವರು ಸೇರಿದಂತೆ ಹಲವಾರು ಜನರಿಗೆ ತೊಂದರೆ ಉಂಟಾಗಿತ್ತು. ಈಗ ಪ್ರಯಾಣಿಕರ ಅನುಕೂಲಕ್ಕಾಗಿ ಮೆಟ್ರೋದಲ್ಲಿ ಮತ್ತೆ ಟೋಕನ್ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ.

ಪ್ರಯಾಣಿಕರ ಸಂಖ್ಯೆ ಕುಸಿತ

ಪ್ರಯಾಣಿಕರ ಸಂಖ್ಯೆ ಕುಸಿತ

ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಮೆಟ್ರೋ ಸೇವೆ ಪುನಃ ಆರಂಭವಾಯಿತು. ಆಗ ಸ್ಮಾರ್ಟ್‌ ಕಾರ್ಡ್‌ ಹೊಂದಿರುವ ಪ್ರಯಾಣಿಕರು ಮಾತ್ರ ಸಂಚಾರ ನಡೆಸಲು ಅನುಮತಿ ನೀಡಲಾಯಿತು. ಪ್ರತಿದಿನ ಮೆಟ್ರೋದಲ್ಲಿ ಸಂಚಾರ ನಡೆಸುವ ಪ್ರಯಾಣಿಕರ ಸಂಖ್ಯೆ 50 ಸಾವಿರದಿಂದ ಆರಂಭವಾಗಿ ಫೆಬ್ರವರಿ ಮತ್ತು ಮಾರ್ಚ್ ವೇಳೆಗೆ 1.5 ಲಕ್ಷಕ್ಕೆ ಮುಟ್ಟಿತು. ಆದರೆ ಕೋವಿಡ್ ಪರಿಸ್ಥಿತಿಗೂ ಮೊದಲು ಪ್ರತಿದಿನ 4.5 ಲಕ್ಷ ಜನರು ಪ್ರತಿದಿನ ಮೆಟ್ರೋದಲ್ಲಿ ಸಂಚಾರ ನಡೆಸುತ್ತಿದ್ದರು.

Recommended Video

WTC final ಪಂದ್ಯ ನಮ್ಮ ನಾಡಲ್ಲಿ ನಡೆಯಬಾರದಿತ್ತು ಎಂದ ಇಂಗ್ಲಿಷ್ ಆಟಗಾರ | Oneindia Kannada
ಮತ್ತೆ ಟೋಕನ್ ವ್ಯವಸ್ಥೆ

ಮತ್ತೆ ಟೋಕನ್ ವ್ಯವಸ್ಥೆ

ಮುಂದಿನ ಸೋಮವಾರ ಅಥವ ಜುಲೈ 1ರಿಂದ ಟೋಕನ್ ವ್ಯವಸ್ಥೆ ಪುನಃ ಆರಂಭಿಸಲು ಬಿಎಂಆರ್‌ಸಿಎಲ್ ಮುಂದಾಗಿದೆ. ಜುಲೈ 5ರ ಬಳಿಕ ಅನ್‌ಲಾಕ್ ಮಾರ್ಗಸೂಚಿ ಬದಲಾವಣೆಯಾಗಲಿದ್ದು, ಹೆಚ್ಚು ಸಂಪೂರ್ಣವಾಗಿ ಮೆಟ್ರೋ ಸಂಚಾರಕ್ಕೆ ಅವಕಾಶ ಸಿಗುವ ನಿರೀಕ್ಷೆಯೂ ಇದೆ. ಪ್ರಸ್ತುತ ಶೇ 50ರಷ್ಟು ಜನರು ಮಾತ್ರ ಸಂಚಾರ ನಡೆಸಬೇಕು ಎಂದು ಸರ್ಕಾರ ಹೇಳಿದೆ.

English summary
Bengaluru Metro Rail Corporation Limited (BMRCL) will reintroduce token system for travel in train. Passengers may get token from July 1, 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X