ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋ ಪಾರ್ಕಿಂಗ್ ಗುತ್ತಿಗೆದಾರರಿಂದ ಕಿರುಕುಳ, ದೂರು

|
Google Oneindia Kannada News

ಬೆಂಗಳೂರು ಜೂನ್ 2: ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕಿಂಗ್ ಗುತ್ತಿಗೆದಾರರು ಕಿರುಕುಳ ನೀಡುತ್ತಿದ್ದಾರೆ ಎಂದು ಮೆಟ್ರೋ ಪ್ರಯಾಣಿಕರಿಂದ ದೂರುಗಳ ಮಹಾಪೂರವೇ ಹರಿದುಬಂದಿದೆ.

ವಾಹನ ನಿಲುಗಡೆಗೆ ಹೆಚ್ಚಿನ ಪಾರ್ಕಿಂಗ್ ಶುಲ್ಕ ವಿಧಿಸುವುದು, ವಾಹನ ಮಾಲೀಕರಿಗೆ ಬೆದರಿಕೆ ಹಾಕುವುದು ಸೇರಿದಂತೆ ಕಿರುಕುಳ ನೀಡುತ್ತಿರುವ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮಕ್ಕೆ ಅನೇಕ ಮೆಟ್ರೋ ಪ್ರಯಾಣಿಕರು ಆಗ್ರಹಿಸಿದ್ದಾರೆ.

ಅರ್ಕಾವತಿ ಬಡಾವಣೆ: ಮೂಲೆ ನಿವೇಶನ ಹರಾಜಿಗೆ ಹೈಕೋರ್ಟ್ ಬ್ರೇಕ್ಅರ್ಕಾವತಿ ಬಡಾವಣೆ: ಮೂಲೆ ನಿವೇಶನ ಹರಾಜಿಗೆ ಹೈಕೋರ್ಟ್ ಬ್ರೇಕ್

ಈ ಬಗ್ಗೆ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಮೆಟ್ರೋ ಪ್ರಯಾಣಿಕ ಸಂದೀಪ್ ನಾರಾಯಣ್, "ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕಿಂಗ್ ಹಗರಣಗಳ ಬಗ್ಗೆ ಎಚ್ಚರಿಕೆಯಿಂದಿರಿ. ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದ ಬೈಕ್ ಪಾರ್ಕಿಂಗ್‌ನಲ್ಲಿ ನನಗೆ ಆದ ಅನುಭವ ಹೀಗಿದೆ. ನೀವು ನಿಮ್ಮ ಬೈಕ್ ಅನ್ನು ಪಾರ್ಕಿಂಗ್ ಸ್ಥಳದಿಂದ ವಾಪಾಸು ತೆಗೆದುಕೊಂಡು ಹೋಗುವಾಗ ಅಲ್ಲಿನ ಸಿಬ್ಬಂದಿ ನಿಮ್ಮ ಟಿಕೆಟ್ ನೋಡುತ್ತಾರೆ. ಹಾಗೇ ಸುಮ್ಮನೆ ತಲೆಯಲ್ಲೇ ಲೆಕ್ಕ ಹಾಕಿ 30 ರೂ. ಅಥವಾ 40 ರೂ. ನೀಡುವಂತೆ ಹೇಳುತ್ತಾರೆ. ಹೆಚ್ಚಿನ ಜನರು ಕೂಲಂಕುಶವಾಗಿ ಗಮನಿಸದೇ ಅವರು ಹೇಳಿದ ಮೊತ್ತ ನೀಡಿ ಹೊರಡುತ್ತಾರೆ,'' ಎಂದು ಹೇಳಿದ್ದಾರೆ.

ಖಾದಿ ಭಂಡಾರ್‌ನಲ್ಲಿ 30 ಪಂಚೆ ಖರೀದಿಸಿದ ಸಿದ್ದರಾಮಯ್ಯಖಾದಿ ಭಂಡಾರ್‌ನಲ್ಲಿ 30 ಪಂಚೆ ಖರೀದಿಸಿದ ಸಿದ್ದರಾಮಯ್ಯ

 ಪ್ರಯಾಣಿಕರಿಂದ ಡಬಲ್ ಶುಲ್ಕ ವಸೂಲಿ

ಪ್ರಯಾಣಿಕರಿಂದ ಡಬಲ್ ಶುಲ್ಕ ವಸೂಲಿ

"ಇದೇ ರೀತಿ ನಾನು ಸುಮ್ಮನೇ ಅವರು ಹೇಳಿದ ಮೊತ್ತವನ್ನು ನೀಡುತ್ತಾ ಹೋಗುತ್ತಿದೆ. ಒಂದು ದಿನ ಅನುಮಾನದಿಂದ ಟಿಕೆಟ್ ಪ್ರಿಂಟ್ ಮಾಡಲು ಹೇಳಿದೆ. ಆಗ ನನಗೆ ಆಘಾತವಾಯಿತು. ನಾನು 3 ಗಂಟೆ 3 ನಿಮಿಷಗಳ ಕಾಲ ವಾಹನ ಪಾರ್ಕಿಂಗ್ ಮಾಡಲು ಪಾವತಿಸಬೇಕಾಗಿದ್ದ ಹಣ 15 ರು. ಮಾತ್ರ. ಆದರೆ ಪಾರ್ಕಿಂಗ್ ಸಿಬ್ಬಂದಿ ಪ್ರತಿಯೊಬ್ಬ ವಾಹನ ಚಾಲಕನಿಂದ ಕನಿಷ್ಠ ಶೇ. 100 ಪ್ರತಿಶತ ಹೆಚ್ಚುವರಿ ಶುಲ್ಕವನ್ನು ಪಡೆಯುತ್ತಿದ್ದಾರೆ. ಅಲ್ಲದೇ ಲೆಕ್ಕವಿಲ್ಲದ ಈ ಹಣವನ್ನು ತಮ್ಮ ಜೇಬಿಗೆ ಇಳಿಸಿಕೊಳ್ಳುತ್ತಿದ್ದಾರೆ,'' ಎಂದು ಸಂದೀಪ್ ನಾರಾಯಣ್ ಆರೋಪಿಸಿದ್ದಾರೆ.

 ವಾಹನಗಳಿಗೆ ಲಾಕ್ ಮಾಡದಂತೆ ಒತ್ತಾಯ

ವಾಹನಗಳಿಗೆ ಲಾಕ್ ಮಾಡದಂತೆ ಒತ್ತಾಯ

"ರಾಜರಾಜೇಶ್ವರಿ ನಗರ ಮೆಟ್ರೋ ನಿಲ್ದಾಣದ ಪಾರ್ಕಿಂಗ್ ಸಿಬ್ಬಂದಿ ನಾವು ವಾಹನಗಳನ್ನು ಪಾರ್ಕ್ ಮಾಡುವಾಗ ನಮ್ಮ ವಾಹನವನ್ನು ಲಾಕ್ ಮಾಡದಿರಿ ಎಂದು ಒತ್ತಾಯಿಸುತ್ತಾರೆ. ಹಾಗೇ ಮಾಡಲು ನಿರಾಕರಿಸಿದ ಪ್ರಯಾಣಿಕರನ್ನು ನಿಂದಿಸುತ್ತಾರೆ. ಜತೆಗೆ ಬೆದರಿಕೆ ಕೂಡ ಹಾಕುತ್ತಾರೆ. ಮೆಟ್ರೋ ನಿಲ್ದಾಣದ ಮುಂದಿನ ರಸ್ತೆಗಳ ದುಸ್ಥಿತಿಯನ್ನು ನೀವು ಗಮನಿಸಿರಬಹುದು. ಈ ಅಂಶಗಳ ಬಗ್ಗೆ ನಾನು ಮೆಟ್ರೋ ಉನ್ನತ ಅಧಿಕಾರಿಗಳಿಗೆ ದೂರು ನೀಡಿದ್ದೇನೆ. ಆದರೆ ಅವರು ಈ ಬಗ್ಗೆ ಇನ್ನೂ ಸ್ಪಂದಿಸಿಲ್ಲ. ರಾಜ್ಯದಲ್ಲಿ ಸರಕಾರಿ ಆಡಳಿತ ಎಂಬುದು ಇದೆಯೇ ಎಂಬ ಅನುಮಾನ ಮೂಡಿದೆ,'' ಎಂದು ಮೆಟ್ರೋ ಪ್ರಯಾಣಿಕ ಅಮಿತ್ ಪಲ್ಲವೂರ್ ತಮ್ಮ ಫೇಸ್‌ಬುಕ್ ಪೇಜ್ ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

 ಏಕರೂಪ ಪಾರ್ಕಿಂಗ್ ಶುಲ್ಕ ಬೋರ್ಡ್ ಅಳವಡಿಕೆ

ಏಕರೂಪ ಪಾರ್ಕಿಂಗ್ ಶುಲ್ಕ ಬೋರ್ಡ್ ಅಳವಡಿಕೆ

ದೂರುಗಳ ಬಗ್ಗೆ ಪ್ರತಿಕ್ರಿಯಿಸಿದ ಬಿಎಂಆರ್‌ಸಿಎಲ್ ಹಿರಿಯ ಅಧಿಕಾರಿಯೊಬ್ಬರು, "ಪ್ರಯಾಣಿಕರ ದೂರುಗಳ ಆಧಾರದ ಮೇಲೆ ನಾವು ತಪ್ಪಿತಸ್ಥ ಗುತ್ತಿಗೆದಾರರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಏಕರೂಪ ಪಾರ್ಕಿಂಗ್ ಶುಲ್ಕದ ಬೋರ್ಡ್ ಗಳನ್ನು ಎಲ್ಲಾ ಮೆಟ್ರೋ ನಿಲ್ದಾಣಗಳ ಪಾರ್ಕಿಂಗ್ ಸ್ಥಳಗಳಲ್ಲಿ ಪ್ರದರ್ಶಿಸಲು ನಾವು ನಿರ್ಧರಿಸಿದ್ದೇವೆ. ಬಳಕೆದಾರರು ಪಾರ್ಕಿಂಗ್ ಶುಲ್ಕ ಪಾವತಿಸುವಾಗ ಬಿಲ್ ನೀಡುವಂತೆ ಒತ್ತಾಯಿಸಬೇಕು,'' ಎಂದು ಭರವಸೆ ನೀಡಿದರು.

 ಎನ್ ಸಿಎಂಸಿ ಜಾರಿಗೆ ಒತ್ತಾಯ

ಎನ್ ಸಿಎಂಸಿ ಜಾರಿಗೆ ಒತ್ತಾಯ

ಬಿಎಂಆರ್‌ಸಿಎಲ್ ಸ್ಮಾರ್ಟ್ ಕಾರ್ಡ್ ಆಧಾರಿತ ಪಾರ್ಕಿಂಗ್ ಶುಲ್ಕ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎಂದು ಹಲವು ಪ್ರಯಾಣಿಕರು ಒತ್ತಾಯಿಸಿದ್ದಾರೆ. "ಬಿಎಂಆರ್ ಸಿಎಲ್ ಯಾವುದೇ ವಿಳಂಬ ಮಾಡದೇ ರಾಷ್ಟ್ರೀಯ ಸಮಾನ್ಯ ಮೊಬಿಲಿಟಿ ಕಾರ್ಡ್ (ಎನ್ ಸಿಎಂಸಿ) ಅನ್ನು ಪ್ರಯಾಣಿಕರ ಬಳಕೆಗೆ ಜಾರಿಗೊಳಿಸಬೇಕು. ಇದರಿಂದ ಪ್ರಯಾಣಿಕರು ಮೆಟ್ರೋ ಪ್ರಯಾಣದ ಶುಲ್ಕ ಮತ್ತು ಪಾರ್ಕಿಂಗ್ ಶುಲ್ಕವನ್ನು ಒಂದೇ ಸ್ಮಾರ್ಟ್ ಕಾರ್ಡ್ ಮೂಲಕ ಪಾವತಿಸಲು ಸಾಧ್ಯವಾಗುತ್ತದೆ. ಅದೇ ಕಾರ್ಡ್ ಅನ್ನು ಬಿಎಂಟಿಸಿ ಬಸ್ ಟಿಕೆಟ್ ದರ ಪಾವತಿಸಲು ಸಹ ಸಾಧ್ಯವಾಗುತ್ತದೆ,'' ಎಂದು ಮಟ್ರೋ ಪ್ರಯಾಣಿಕ ಕೆ. ರಾಜೇಶ್ ಹೇಳಿದರು.

"ಪಾರ್ಕಿಂಗ್ ಶುಲ್ಕ ಪಾವತಿಸಲು ಮೆಟ್ರೋ ಸ್ಮಾರ್ಟ್ ಕಾರ್ಡ್ ಬಳಕೆ ವ್ಯವಸ್ಥೆ ಜಾರಿಗೆ ತರಲು ಸ್ವಲ್ಪ ಸಮಯ ಬೇಕಾಗುತ್ತದೆ,'' ಎಂದು ಬಿಎಂಆರ್ ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

 ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕಿಂಗ್ ಶುಲ್ಕ ಇಂತಿದೆ

ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕಿಂಗ್ ಶುಲ್ಕ ಇಂತಿದೆ

ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್ ಶುಲ್ಕ ಮೊದಲ ನಾಲ್ಕು ಗಂಟೆಗೆ 15 ರು. ಮತ್ತು ಪ್ರತಿ ಹೆಚ್ಚುವರಿ ಗಂಟೆಗೆ 5 ರು. ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್ ಶುಲ್ಕ ದಿನಕ್ಕೆ ಗರಿಷ್ಠ 30 ರು. ಆಗಿದೆ. ಕಾರುಗಳಿಗೆ ಪಾರ್ಕಿಂಗ್ ಶುಲ್ಕ ಮೊದಲ ನಾಲ್ಕು ಗಂಟೆಗೆ 30 ರು. ಮತ್ತು ಪ್ರತಿ ಹೆಚ್ಚುವರಿ ಗಂಟೆಗೆ 10 ರು. ಕಾರುಗಳಿಗೆ ಪಾರ್ಕಿಂಗ್ ಶುಲ್ಕ ದಿನಕ್ಕೆ ಗರಿಷ್ಠ 60 ರು. ಆಗಿದೆ. ಸೈಕಲ್ ಗಳಿಗೆ ಪಾರ್ಕಿಂಗ್ ಶುಲ್ಕ ಗಂಟೆಗೆ 1 ರು. ಹಾಗೂ ದಿನಕ್ಕೆ ಗರಿಷ್ಠ 10 ರು. ಆಗಿದೆ.

ಪಾರ್ಕಿಂಗ್ ಗುತ್ತಿಗೆದಾರರ ವಿರುದ್ಧ ದೂರುಗಳಿಗೆ ಟೋಲ್-ಫ್ರೀ ಸಹಾಯವಾಣಿ: 1800-425-12345 ಅಥವಾ 080-251910191 ಅನ್ನು ಸಂಪರ್ಕಿಸುವಂತೆ ಬಿಎಂಆರ್ ಸಿಎಲ್ ಪ್ರಯಾಣಿಕರನ್ನು ಮನವಿ ಮಾಡಿದೆ.

Recommended Video

Worldcup ಬಿಟ್ಟರೆ IPL ಸಾಕು ಎಂದ Ravi Shastri | OneIndia Kannada

English summary
Complaint by Namma Metro passengers about harassment on parking issue. People upset with contractors at Namma metro stations at Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X