ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಟ್ರೋ ರೈಲು: ನೇರಳೆ-ಹಸಿರು ಮಾರ್ಗದಲ್ಲಿ ರೈಲು ಸಂಚಾರ ಹೆಚ್ಚಳ

|
Google Oneindia Kannada News

ಬೆಂಗಳೂರು, ಜನವರಿ 2 : ಪ್ರಯಾಣಿಕರ ದಟ್ಟಣೆ ಹೆಚ್ಚಿರುವ ಮಾರ್ಗದಲ್ಲಿ ಸಂಚಾರ ನಡುವಿನ ಅವಧಿ ಇಳಿಕೆ ಮಾಡಿ ಹೊಸ ವರ್ಷಕ್ಕೆ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಶುಭ ಸುದ್ದಿ ನೀಡಿದೆ.

ಪ್ರಯಾಣಿಕರ ದಟ್ಟಣೆ ಹೆಚ್ಚು ಇರುವ ಅವಧಿಯಲ್ಲಿ ನೇರಳೆ ಮಾರ್ಗದಲ್ಲಿ ಪ್ರತಿ ಎರಡು ರೈಲುಗಳ ಸಂಚಾರ ನಡುವಿನ ಅಂತರವನ್ನು4 ನಿಮಿಷ ಬದಲಾಗಿ 3.5 ನಿಮಿಷಕ್ಕೆ ಇಳಿಸಲಾಗಿದೆ. ಹಸಿರು ಮಾರ್ಗದಲ್ಲಿ ಪ್ರತಿ 6 ನಿಮಿಷಕ್ಕೊಂದು ರೈಲು ಸಂಚರಿಸುವ ಅವಧಿಯನ್ನು ವಿಸ್ತರಿಸಲಾಗಿದೆ.

ಹೊಸ ವರ್ಷಾಚರಣೆ ವೇಳೆ 3.25 ಲಕ್ಷ ಪ್ರಯಾಣಿಕರಿಂದ ಮೆಟ್ರೋ ಬಳಕೆಹೊಸ ವರ್ಷಾಚರಣೆ ವೇಳೆ 3.25 ಲಕ್ಷ ಪ್ರಯಾಣಿಕರಿಂದ ಮೆಟ್ರೋ ಬಳಕೆ

ಮಂಗಳವಾರದಿಂದಲೇ ಹೊಸ ವೇಳಾಪಟ್ಟಿ ಜಾರಿಗೆ ಬಂದಿದ್ದು, ಇದರಿಂದಾಗಿ ನೇರಳೆ ಮಾರ್ಗದಲ್ಲಿ ದಿನದಲ್ಲಿ 10 ರೈಲುಗಳು ಹಾಗೂ ಹಸಿರು ಮಾರ್ಗದಲ್ಲಿ ಮೂರು ರೈಲುಗಳು ಹೆಚ್ಚುವರಿಯಾಗಿ ಸಂಚರಿಸಲಿವೆ.

Namma Metro increases service in Purple and Green Lane

ಮೊದಲ ಹಂತ ಪೂರ್ಣಗೊಂಡ ಬಳಿಕ ನೇರಳೆ ಹಾಗೂ ಹಸಿರು ಮಾರ್ಗಗಳೆರಡರಲ್ಲೂ ಪ್ರಯಾಣಿಕರ ಸಂಖ್ಯೆ
ಹೆಚ್ಚಾಗುತ್ತಿದೆ. ಬೆಳಗ್ಗೆ 8.30 ರಿಂದ 10.30 ರ ನಡುವೆ ಹಾಗೂ ಸಂಜೆ 5.30 ರಿಂದ 5 ಗಂಟೆಯ ನಡುವೆ
ರೈಲುಗಳಲ್ಲಿ ಕಾಲಿಡಲೂ ಸಾದ್ಯವಾಗದಷ್ಟು ದಟ್ಟಣೆ ಇರುತ್ತದೆ.

ಪ್ರಯಾಣಿಕರ ದಟ್ಟಣೆ ಹೆಚ್ಚಿರುವ ಅವಧಿಯಲ್ಲಿ ನೇರಳೆ ಮಾರ್ಗದಲ್ಲಿ ಬೆಳಗ್ಗೆ8.50 ರಿಂದ10.10 ರ ನಡುವೆ ಹಾಗೂ ಸಂಜೆ5.58 ರಿಂದ 7.42 ರ ನಡುವೆ ಪ್ರತಿ 4 ನಿಮಿಷಕ್ಕೊಂದು ರೈಲು ಸಂಚರಿಸುತ್ತದೆ. ಆದರೂ ಪರಿಸ್ಥಿತಿ ಸುಧಾರಿಸಿಲ್ಲ.

ಹಸಿರು ಮಾರ್ಗದಲ್ಲಿ ಬೆಳಿಗ್ಗೆ 8.53ರಿಂದ 10.17ರ ನಡುವೆ ಹಾಗೂ ಸಂಜೆ ಪ್ರತಿ 6 ನಿಮಿಷಕ್ಕೊಂದು ರೈಲು
ಸಂಚರಿಸುತ್ತಿದೆ. ಆದರೂ, ನಿಲ್ದಾಣಗಳಲ್ಲಿ ರೈಲಿನಿಂದ ಇಳಿಯಲು ಹಾಗೂ ಹತ್ತಲು ಕಷ್ಟಪಡಬೇಕಾದ ಸ್ಥಿತಿ ಇದೆ. ದಟ್ಟಣೆ ಅವಧಿಯಲ್ಲಿ ರೈಲುಗಳ ಟ್ರಿಪ್‌ ಸಂಖ್ಯೆ ಹೆಚ್ಚಿಸಿದರೆ ಪರಿಸ್ಥಿತಿ ತಕ್ಕಮಟ್ಟಿಗೆ ಸುಧಾರಣೆ ಆಗಲಿದೆ.

'ನಮ್ಮ ಮೆಟ್ರೋ' ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ'ನಮ್ಮ ಮೆಟ್ರೋ' ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ

ಇನ್ನೊಂದೆಡೆ, ದಟ್ಟಣೆ ಸಮಸ್ಯೆ ನಿವಾರಿಸಲು ಡಿ.ತಿಂಗಳಿಂದ ಬೋಗಿಗಳ ಸಂಖ್ಯೆಯನ್ನು 3ರಿಂದ 6ಕ್ಕೆ ಹೆಚ್ಚಿಸಲು ಬಿಎಂಆರ್‌ಸಿಎಲ್‌ ನಿರ್ಧರಿಸಿತ್ತು. ಬಿಎಂಇಎಲ್‌ ಸಂಸ್ಥೆ ಜೊತೆ 150 ಬೋಗಿಗಳನ್ನು ಖರೀದಿಸಲು ನಿಗಮವು ಒಪ್ಪಂದ ಮಾಡಿಕೊಂಡಿದೆ. ಬಿಎಂಇಎಲ್‌ ಇನ್ನೂ ಬೋಗಿಗಳನ್ನು ಹಸ್ತಾಂತರಿಸಿಲ್ಲ. ಬೋಗಿಗಳು ಸಿದ್ಧಗೊಳ್ಳುತ್ತಿವೆ.

ಹೊಸ ವರ್ಷದಂದು ಮೆಟ್ರೊ ಕಾರ್ಯಾಚರಣೆಯಿಂದ ನಿಗಮವು ಭಾನುವಾರ 98 ಲಕ್ಷ ರೂ .ವರಮಾನ ಗಳಿಸಿದೆ. ನೇರಳೆ ಮಾರ್ಗದಿಂದ 50.33 ಲಕ್ಷ ಹಾಗೂ ಹಸಿರು ಮಾರ್ಗದಿಂದ 48 ಲಕ್ಷ ವರಮಾನ ಬಂದಿದೆ.

English summary
BMRCL has increased frequency of Namma metro service in purple lane 4 minutes to 3.5 minutes and every six minutes in Green lane to clear the rush.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X