ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋದಿಂದ ಸಮಯ ಉಳಿಸಿ ಅಂಕ ಗಳಿಸಿದ ಜೆಇಇ ಟಾಪರ್

|
Google Oneindia Kannada News

ಬೆಂಗಳೂರು, ಜನವರಿ 21: ಐಐಟಿಗಳಿಗೆ ಪ್ರವೇಶ ಕಲ್ಪಿಸುವ 2019ನೇ ಸಾಲಿನ ಜೆಇಇ ಮುಖ್ಯ ಪರೀಕ್ಷೆ ಫಲಿತಾಂಶ ಶನಿವಾರ ಪ್ರಕಟವಾಗಿದೆ. ಅದರಲ್ಲಿ ಬೆಂಗಳೂರಿನ ಕೆವಿನ್ ಮಾರ್ಟಿನ್, ಭೋಪಾಲದ ಧ್ರುವ ಅರೋರಾ ಸೇರಿ 15 ವಿದ್ಯಾರ್ಥಿಗಳು ಶೇ.100 ರಷ್ಟು ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ.

ಅವರ ಸಾಧನೆಗೆ ಒಂದು ಕಾರಣವನ್ನು ಮಾರ್ಟಿನ್ ಹೇಳಿಕೊಂಡಿದ್ದಾರೆ. ನನ್ನ ಸಾಧನೆಯ ಹಿಂದೆ ಮೆಟ್ರೋ ಕೂಡ ಇದೆ, ಇಂದಿರಾನಗರದಲ್ಲಿರುವ ಕೆಲವಿನ್ ನಿವಾಸದಿಂದ ಜಯನಗರದಲ್ಲಿರುವ ಆತನ ಶಾಲೆಗೆ ಬಸ್ ಮೂಲಕ ಪ್ರಯಾಣಿಸಿದ್ದರೆ, ಗಂಟೆಗಳಷ್ಟು ಸಮಯ ವ್ಯರ್ಥವಾಗುತ್ತಿತ್ತು. ಆದರೆ, ನಮ್ಮ ಮೆಟ್ರೋ ಪ್ರಯಾಣ ಆತನ ಬಹುತೇಕ ಸಮಯವನ್ನು ಉಳಿಸಿದೆ.

ಬೆಂಗಳೂರಿನ ಮಾರ್ಟಿನ್ ಜೆಇಇ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಬೆಂಗಳೂರಿನ ಮಾರ್ಟಿನ್ ಜೆಇಇ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ

ಮೆಟ್ರೋಯಿಂದಾಗಿ ಕೇವಲ ಅರ್ಧ ಗಂಟೆಯಲ್ಲಿ ಮನೆಯಿಂದ ಶಾಲೆಗೆ ತಲುಪಬಹುದಾಗಿತ್ತು. ಹೀಗಾಗಿ ಸಮಯ ಸಾಕಷ್ಟು ಉಳಿತಾಯವಾಗಿ ಅದನ್ನು ಓದಲು ವಿನಿಯೋಗಿಸಿದೆ ಎಂದು ಅವರು ತಿಳಿಸಿದ್ದಾರೆ.

Namma Metro has helped me save time: JEE topper

ನ್ಯಾಷನಲ್‌ ಟೆಸ್ಟಿಂಗ್‌ ಏಜೆನ್ಸಿ ಜನವರಿ 9ರಿಂದ 12ರವರೆಗೆ 258 ನಗರಗಳ 467 ಕೇಂದ್ರಗಳಲ್ಲಿ ದಿನಕ್ಕೆ ಎರಡು ಪಾಳಿಯಂತೆ ಪರೀಕ್ಷೆಯನ್ನು ನಡೆಸಿತ್ತು. ಒಟ್ಟು 9,29,198 ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದರು. ಅದರಲ್ಲಿ 8,74,469 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ನಿಗದಿತ ದಿನಾಂಕಕ್ಕೆ 12 ದಿನ ಮೊದಲೇ ನ್ಯಾಷನಲ್‌ ಟೆಸ್ಟಿಂಗ್‌ ಏಜೆನ್ಸಿ (ಎನ್‌ಟಿಎ) ಫಲಿತಾಂಶ ಪ್ರಕಟಿಸಿದ್ದು ವಿಶೇಷವಾಗಿದೆ. ಮೊಬೈಲ್ ಇಂದ ಸಾಮಾಜಿಕ ಜಾಲತಾಣಗಳಿಂದ ದೂರ ಇದ್ದೆ, ನನ್ನ ಪೋಷಕರ ಒತ್ತಾಯದ ಮೇರೆಗೆ ಅಲ್ಲ ನನ್ನ ಸ್ವಿಚ್ಛೆಯಿಂದ ಎಂದು ವಿದ್ಯಾರ್ಥಿ ಹೇಳಿಕೊಂಡಿದ್ದಾರೆ.

English summary
Kevin Martin, 17, who is among 15 candidates who scored 100 percent in the JEE main paper said Namma metro contributed to his success.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X