ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗ್ಗೆ-ರಾತ್ರಿ: 20 ನಿಮಿಷ ಬದಲು 15 ನಿಮಿಷಕ್ಕೊಂದು ಮೆಟ್ರೋ

|
Google Oneindia Kannada News

ಬೆಂಗಳೂರು ಆಗಸ್ಟ್ 06: ಮೆಟ್ರೋ ನಿಲ್ದಾಣಗಳಲ್ಲಿ ಪ್ರತಿನಿತ್ಯ ಜನ ಸಂಚಾರ ಹೆಚ್ಚಿರುವ (ಪೀಕ್ ಹವರ್ಸ್) ಬೆಳಗ್ಗೆ ಹಾಗೂ ರಾತ್ರಿ ಸಮಯದಲ್ಲಿ ನಿಲ್ದಾಣಕ್ಕೆ ಆಗಮಿಸುವ ಮೆಟ್ರೋ ರೈಲಿನ ಸಮಯವನ್ನು ಕಡಿಮೆ ಮಾಡಿದ್ದು, ಈ ಹೊಸ ನಿಯಮ ಸೋಮವಾರದಿಂದ ಜಾರಿಗೆ ಬರಲಿದೆ ಎಂದು ಬೆಂಗಳೂರು ಮೆಟ್ರೋ ರೈಲ್ ಕಾಪೋರೇಷನ್ (ಬಿಎಂಆರ್‌ಸಿಎಲ್) ತಿಳಿಸಿದೆ.

ಸೋಮವಾರದಿಂದ ಬೆಳಗ್ಗೆ 5ಗಂಟೆಯಿಂದ 6ಗಂಟೆವರೆಗೆ ಹಾಗೂ ರಾತ್ರಿ 10 ಗಂಟೆಯಿಂದ 11ರವರೆಗೆ ಮೆಟ್ರೋ ನಿಲ್ದಾಣಕ್ಕೆ ಆಗಮಿಸುತ್ತಿದ್ದ ರೈಲು ಇನ್ನುಮುಂದೆ 15ನಿಮಿಷಕ್ಕೆ ಒಂದಂತೆ ಆಗಮಿಸಲಿವೆ. ಈ ಮೊದಲು ಇದೇ ಅವಧಿಯಲ್ಲಿ ಮೆಟ್ರೋ ರೈಲುಗಳು 20 ನಿಮಿಷಗಳ ಅಂತರದಲ್ಲಿ ನಿಲ್ದಾಣ ಪ್ರವೇಶಿಸುತ್ತಿದ್ದವು. ಪ್ರಯಾಣಿಕರ ಅನೂಕೂಲಕ್ಕಾಗಿ ಸೋಮವಾರ ಬೆಳಗ್ಗೆಯಿಂದ ಈ ಹೊಸ ನಿಯಮ ಜಾರಿಗೆ ಬರುವಂತೆ ಬೆಂಗಳೂರು ಮೆಟ್ರೋ ರೈಲ್ ಕಾಪೋರೇಷನ್ (ಬಿಎಂಆರ್‌ಸಿಎಲ್) ಅಧಿಕಾರಿಗಳು ತಿಳಿಸಿದ್ದಾರೆ.

Metro time reduced In the peak hours from Monday

ಜನ ಸಂಚಾರ ಹೆಚ್ಚಿರುವ (ಪಿಕ್ ಹವರ್ಸ್) ಹೊರತು ಪಡಿಸಿ ಉಳಿದ ಸಮಯದಲ್ಲಿ ಎಂದಿನಂತೆ ಮೆಟ್ರೋ ರೈಲುಗಳು ನಿಲ್ದಾಣಕ್ಕೆ ಆಗಮಿಸಲಿವೆ. ಕೋರೋನಾ ಭೀತಿ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಜನರು ಹೆಚ್ಚು ಮೆಟ್ರೋ ಸಾರಿಗೆಯನ್ನೇ ಅವಲಂಬಿಸಿದ್ದಾರೆ. ಅಲ್ಲದೇ ಮಳೆಗಾಲ ಆಗಿರುವ ಕಾರಣ ಸುರಕ್ಷತೆ ದೃಷ್ಟಿಯಿಂದ ಜನರು ಮೆಟ್ರೋ ಸಂಚಾರದತ್ತ ಅಧಿಕ ಒಲವು ಹೊಂದಿದ್ದಾರೆ ಎನ್ನಲಾಗಿದೆ.

English summary
Bengaluru Metro Rail Corporation Limited (BMRCL), BMRCL news, Namma metro news, Metro rail, Metro time reduced In the peak hours from Monday, Metro rail time reduced,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X