ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋ ಕಾಮಗಾರಿ; 12 ಲಕ್ಷ ಮೌಲ್ಯದ ವಸ್ತುಗಳು ಕಳವು

|
Google Oneindia Kannada News

ಬೆಂಗಳೂರು, ಜುಲೈ 10 : ನಮ್ಮ ಮೆಟ್ರೋ ಕಾಮಗಾರಿಗೆ ತಂದಿದ್ದ ವಸ್ತುಗಳನ್ನು ಕಳವು ಮಾಡಿರುವ ಎರಡು ಘಟನೆಗಳು ಬೆಂಗಳೂರು ನಗರದಲ್ಲಿ ನಡೆದಿವೆ. ಪೊಲೀಸ್ ಠಾಣೆಯಲ್ಲಿ ಟೆಂಡರ್ ಪಡೆದವರು ದೂರು ನೀಡಿದ್ದು, ತನಿಖೆ ಮುಂದುವರೆದಿದೆ.

ಕಬ್ಬನ್ ರಸ್ತೆ ಮತ್ತು ಬಿ. ವಿ. ಆರ್ ಜಂಕ್ಷನ್ ಸಮೀಪ ಮೆಟ್ರೋ ಕಾಮಗಾರಿಯ ವಸ್ತುಗಳನ್ನು ಕಳವು ಮಾಡಲಾಗಿದೆ. ಎರಡೂ ಕಡೆ ಒಂದೇ ತಂಡ ಕಳುವು ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಜುಲೈ 31ರ ತನಕ ಲಾಕ್ ಡೌನ್ ವಿಸ್ತರಣೆ; ಮೆಟ್ರೋ, ರೈಲು ಇಲ್ಲ ಜುಲೈ 31ರ ತನಕ ಲಾಕ್ ಡೌನ್ ವಿಸ್ತರಣೆ; ಮೆಟ್ರೋ, ರೈಲು ಇಲ್ಲ

ಬ್ರಾಂಚ್ ಪೈಪ್, ಟ್ರಾನ್ಸ್‌ಫಾರ್ಮರ್, ವಿಎಫ್‌ಡಿ ಬ್ರೇಕರ್ ಸೇರಿದಂತೆ ಸುಮಾರು 8 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕಬ್ಬನ್ ರಸ್ತೆಯಲ್ಲಿ ಕಳವು ಮಾಡಲಾಗಿದೆ. ಈ ಕುರಿತು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮೆಟ್ರೋ ಪ್ರಯಾಣಕ್ಕೆ ಆರೋಗ್ಯ ಸೇತು, ಮಾಸ್ಕ್ ಕಡ್ಡಾಯ ಮೆಟ್ರೋ ಪ್ರಯಾಣಕ್ಕೆ ಆರೋಗ್ಯ ಸೇತು, ಮಾಸ್ಕ್ ಕಡ್ಡಾಯ

Materials Stolen From Namma Metro Construction Site

ಜೂನ್ 26ರ ರಾತ್ರಿ ವ್ಯಾನ್‌ನಲ್ಲಿ ಆಗಮಿಸಿದ 5 ಜನರ ತಂಡ ವಸ್ತುಗಳನ್ನು ತುಂಬಿಕೊಂಡು ಹೋಗಿದೆ. ಸ್ವಲ್ಪ ದೂರದಲ್ಲಿದ್ದ ಭದ್ರತಾ ಸಿಬ್ಬಂದಿ ಐದು ಜನರು ಇದ್ದಿದ್ದನ್ನು ಗಮನಿಸಿದ್ದಾರೆ. ಮೆಟ್ರೋ ಕಾಮಗಾರಿ ಟೆಂಡರ್ ಪಡೆದಿರುವ ಸಂಸ್ಥೆಯ ಸಿಬ್ಬಂದಿ ಈ ಕುರಿತು ದೂರು ನೀಡಿದ್ದಾರೆ.

ಬೆಂಗಳೂರಿನ ಒಂದು ಮಾರ್ಗದಲ್ಲಿ ಚಾಲಕರಹಿತ ಮೆಟ್ರೋ ಸೇವೆ ಬೆಂಗಳೂರಿನ ಒಂದು ಮಾರ್ಗದಲ್ಲಿ ಚಾಲಕರಹಿತ ಮೆಟ್ರೋ ಸೇವೆ

ಬಿ. ವಿ. ಆರ್. ಜಂಕ್ಷನ್ ಸಮೀಪದ ಶಿವಾಜಿ ರಸ್ತೆಯಲ್ಲಿ 4.23 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳವು ಮಾಡಲಾಗಿದೆ ಎಂದು ದೂರು ನೀಡಲಾಗಿದೆ. ಈ ಪ್ರದೇಶದಲ್ಲಿನ ಕಾಮಗಾರಿಯ ಟೆಂಡರ್‌ ಅನ್ನು ಎಲ್&ಟಿ ಪಡೆದಿದ್ದು, ಪೊಲೀಸರಿಗೆ ದೂರು ಕೊಟ್ಟಿದೆ.

ಎರಡೂ ಕಡೆ ಒಂದೇ ತಂಡ ಕಳವು ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದು, ತನಿಖೆ ಮುಂದುವರೆದಿದೆ. ತಂಡ ವಾಹನ ಬಳಕೆ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.

English summary
Two complaints were field that unknown miscreants took away materials stored for the construction of Namma Metro. Materials stolen from Cubbon road and Shivaji road.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X