ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋ: ರಾತ್ರಿ ಕೆಲಸ ನಿಲ್ಲಿಸಿದ ಬಿಎಂಆರ್‌ಸಿಎಲ್

|
Google Oneindia Kannada News

ಬೆಂಗಳೂರು, ಫೆಬ್ರವರಿ 23: ಕೊರೊನಾದಿಂದಾಗಿ ನಮ್ಮ ಮೆಟ್ರೋ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿತ್ತು. ಹೀಗಾಗಿ ರಾತ್ರಿ ಹೊತ್ತು ಕೂಡ ಕೆಲಸ ಮಾಡಲಾಗುತ್ತಿತ್ತು.

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್(BMRCL) ಮೆಟ್ರೋ ಹಂತ-II ಗಾಗಿ ಡಿಸೆಂಬರ್ 2024ರ ಪರಿಷ್ಕೃತ ಗಡುವನ್ನು ಪೂರೈಸಲು ರಾತ್ರಿಯೂ ಕೆಲಸ ಮಾಡಲಾಗುತ್ತಿದ್ದು, ಇದು ಹೊರ ವರ್ತುಲ ರಸ್ತೆ ಮಾರ್ಗದಲ್ಲಿ ವಾಸಿಸುವ ನಿವಾಸಿಗಳ ನಿದ್ದೆಗೆಡಿಸಿತ್ತು.

ಸಿಲ್ಕ್‌ಬೋರ್ಡ್‌ನಿಂದ ನಮ್ಮ ಮೆಟ್ರೋ ಕಾಮಗಾರಿ ಆರಂಭಸಿಲ್ಕ್‌ಬೋರ್ಡ್‌ನಿಂದ ನಮ್ಮ ಮೆಟ್ರೋ ಕಾಮಗಾರಿ ಆರಂಭ

ರಾತ್ರಿಯ ವೇಳೆ ಕೆಲವೆಡೆ ಕೆಲಸ ಸ್ಥಗಿತಗೊಳಿಸಲಾಗಿದೆ ಎಂದು ಬಿಎಂಆರ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಅಂಜುಮ್‌ ಪರ್ವೇಜ್‌ ಅವರು ಖಚಿತಪಡಿಸಿದ್ದಾರೆ.

Namma Metro: BMRCL Stops Night Work After Residents Complain

ನಿವಾಸಿಗಳಿಂದ ದೂರುಗಳನ್ನು ಸ್ವೀಕರಿಸಿದ ಪ್ರದೇಶಗಳಲ್ಲಿ ನಿರ್ಮಾಣ ಕಾರ್ಯ ಸ್ಥಗಿತಗೊಳಿಸಲಾಗಿದೆ. ಸಾರ್ವಜನಿಕರು, ವಿಶೇಷವಾಗಿ ಹಿರಿಯ ನಾಗರಿಕರ ನಿದ್ದೆಯ ಮೇಲಾಗುವ ಪರಿಣಾಮವನ್ನು BMRCL ಅರ್ಥಮಾಡಿಕೊಂಡಿದೆ ಎಂದು ಅವರು ಹೇಳಿದ್ದಾರೆ.

ಇಲ್ಲಿನ ನಿವಾಸಿಗಳು ರಾತ್ರಿ 10 ಗಂಟೆಯ ನಂತರ ನಿರ್ಮಾಣ ಕಾರ್ಯ ನಿಲ್ಲಿಸುವಂತೆ ಬಿಎಂಆರ್ ಸಿಎಲ್‌ಗೆ ಒತ್ತಾಯಿಸಿದ್ದರು.

ಕೊನೆಗೂ ಹೊರ ವರ್ತುಲ ರಸ್ತೆಯ ನಿವಾಸಿಗಳ ಒತ್ತಡಕ್ಕೆ ಮಣಿದ ಬಿಎಂಆರ್ ಸಿಎಲ್ ರಾತ್ರಿ ಕೆಲಸವನ್ನು ಸ್ಥಗಿತಗೊಳಿಸಿದೆ.
ಪೈಲಿಂಗ್ ಕೆಲಸದಿಂದ ಉಂಟಾಗುವ ಶಬ್ದವು ಭಯಾನಕವಾಗಿದೆ ಮತ್ತು ರಸ್ತೆಗಳಲ್ಲಿ ವಾಹನ ಮತ್ತು ಇತರ ಶಬ್ದಗಳು ಇಲ್ಲದಿರುವುದರಿಂದ ಡೆಸಿಬಲ್ ಮಟ್ಟವು ಹೆಚ್ಚಾಗಿರುತ್ತದೆ, "ಎಂದು ಅವರು ಹೇಳಿದ್ದಾರೆ.

18.2-ಕಿಮೀ ಓಆರ್‌ಆರ್‌ ಲೈನ್ (ಹಂತ 2 ಎ) ಕೆಆರ್ ಪುರಂನಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ಲೈನ್ ವರೆಗೆ ಸಾಗುತ್ತದೆ ಮತ್ತು ಈ ಮಾರ್ಗ 13 ನಿಲ್ದಾಣಗಳನ್ನು ಒಳಗೊಂಡಿದೆ. ಎರಡು ಪ್ಯಾಕೇಜ್‌ಗಳಲ್ಲಿ ಟೆಂಡರ್‌ ನೀಡಲಾಗಿದೆ.

ಸಿಲ್ಕ್ ಬೋರ್ಡ್‌ನಿಂದ ಕಾಡುಬೀಸನಹಳ್ಳಿವರೆಗಿನ 9.8 ಕಿ.ಮೀ ಮೊದಲ ಓಟವನ್ನು 785 ಕೋಟಿ ರೂ. ವೆಚ್ಚದಲ್ಲಿ ನೀಡಲಾಗಿದ್ದು, 623 ಕೋಟಿ ರೂ. ವೆಚ್ಚದಲ್ಲಿ ನೀಡಲಾದ ಎರಡನೆಯದು ಕೋಡಿಬಿಸನಹಳ್ಳಿಯಿಂದ ಕೆ.ಆರ್.ಪುರಂ ವರೆಗೆ ಸಾಗುತ್ತದೆ.

ಎಚ್‌ಎಸ್‌ಆರ್ ಲೇಔಟ್ ಮತ್ತು ಬೆಳ್ಳಂದೂರು ಪ್ರದೇಶದ ನಿವಾಸಿಗಳು ಈ ಹಾದಿಯಲ್ಲಿ ನಡೆಯುತ್ತಿರುವ 24 ಗಂಟೆಗಳ ಕೆಲಸದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲಾಗಿತ್ತು. "ಓಆರ್‌ಆರ್‌ ಲೈನ್‌ನ ಪ್ಯಾಕೇಜ್ ಒಂದರ ಅಡಿಯಲ್ಲಿ ಇಲ್ಲಿ ಕೆಲಸ ನಡೆಯುತ್ತಿದೆ. ಈ ಕುರಿತು ಲಿಖಿತ ದೂರು ನೀಡಿದ್ದು, ತಡರಾತ್ರಿ ಕಾಮಗಾರಿ ಸ್ಥಗಿತಗೊಳಿಸಲಾಗಿದೆ ಎಂದು ಬೆಳವಣಿಗೆಗಳ ಬಗ್ಗೆ ತಿಳಿದಿರುವ ವ್ಯಕ್ತಿಯೊಬ್ಬರು ಈ ತಿಳಿಸಿದ್ದಾರೆ.

ಮೆಟ್ರೋ ಕಾಮಗಾರಿಗೆ 5,227 ಕೋಟಿ ರೂ. ವೆಚ್ಚ ತಗುಲಲಿದೆ. ಅಫ್ಕೋನ್ಸ್ ಇನ್‌ಫ್ರಾಸ್ಟ್ರಕ್ಚರ್ ಮತ್ತು ಶಂಕರನಾರಾಯಣ ಕನ್‌ಸ್ಟ್ರಕ್ಷನ್ ಕಾಮಗಾರಿ ನಡೆಸಲಿದೆ. ಕೆಆರ್ ಪುರಂ, ಮಹದೇವಪುರ, ಡಿಆರ್‌ಡಿಒ, ಕ್ರೀಡಾ ಸಂಕೀರ್ಣ, ದೊಡ್ಡನೆಕ್ಕುಂದಿ, ಇಸ್ರೋ, ಮಾರತ್‌ಹಳ್ಳಿ, ಕಾಡು ಬೀಸನಹಳ್ಳಿ-ಬೆಳ್ಳಂದೂರು, ಇಬ್ಬಲೂರು, ಆಗರ ಕೆರೆ, ಎಚ್‌ಎಸ್‌ಆರ್ ಬಡಾವಣೆ, ಸಿಲ್ಕ್‌ಬೋರ್ಡ್ ನಿಲ್ದಾಣಗಳು ಇರಲಿವೆ.

Recommended Video

ಬುರ್ಖಾ ಧರಿಸಿದ್ದವರ ಮೇಲೆ ಕರ್ನಾಟಕ ಪೊಲೀಸ್ ಲಾಠಿ ಚಾರ್ಜ್ ಮಾಡಿದ್ದು ನಿಜಾನಾ? | Oneindia Kannada

English summary
Even as the Bangalore Metro Rail Corporation Limited (BMRCL) races against time to meet the revised deadline of December 2024 for Metro Phase-II, a section of residents residing along Outer Ring Road Line have asked the agency to stop construction work by 10pm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X