ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Namma Metro: ನೆಲಮಂಗಲದ BIEC ವರೆಗೂ ಗ್ರೀನ್‌ ಲೈನ್‌ ವಿಸ್ತರಣೆ- ಆಸ್ತಿ ಖರೀದಿದಾರರಿಗೆ ಸ್ಪರ್ಗ ಸೃಷ್ಟಿ, ಯಾರ‍್ಯಾರಿಗೆ ಲಾಭ?

ಮಂಜುನಾಥ್ ನಗರ ಮತ್ತು ಮಾದಾವರ (BIEC) ನಡುವಿನ ಗ್ರೀನ್‌ ಲೈನ್ ವಿಸ್ತರಣೆಗೆ BMRCL ನಿರ್ಧರಿಸಿದೆ. ಇದು ಆಸ್ತಿ ಖರೀದಿದಾರರಿಗೆ ಸ್ಪರ್ಗ ಸೃಷ್ಟಿ ಮಾಡಲಿದೆ. ಇದರಿಂದ ಯಾರ‍್ಯಾರಿಗೆ ಲಾಭವಾಗಲಿದೆ? ಯಾವ ಯಾವ ಪ್ರದೇಶಗಳನ್ನು ಸಂಪರ್ಕಿಸುತ್ತದೆ? ಎಂಬುದನ್ನು ತಿಳಿಯಿರಿ.

|
Google Oneindia Kannada News

ಬೆಂಗಳೂರು, ಫೆಬ್ರವರಿ 03: ಮಂಜುನಾಥ್ ನಗರ ಮತ್ತು ಮಾದಾವರ (BIEC) ನಡುವಿನ ಗ್ರೀನ್‌ ಲೈನ್ ವಿಸ್ತರಣೆಗೆ BMRCL ನಿರ್ಧರಿಸಿದೆ. ಈ ಮೂಲಕ ನೆಲಮಂಗಲ ಹಾಗೂ ಮೈಸೂರು ರಸ್ತೆಗಳಲ್ಲಿನ ಸಮೂಹ ಸಾರಿಗೆ ಸಂಪರ್ಕವು ದೊಡ್ಡ ಉತ್ತೇಜನವನ್ನು ಪಡೆಯಲಿದೆ. ಈ ಮಾರ್ಗದ ಕಾಮಗಾರಿ ಪೂರ್ಣಗೊಂಡ ಬಳಿಕ ಹಸಿರು ಮಾರ್ಗದ ಮೆಟ್ರೋ ಜಾಲವನ್ನು ನಾಗಸಂದ್ರದಿಂದ ಬಿಐಇಸಿವರೆಗೆ ವಿಸ್ತರಿಸಲಾಗುವುದು. ಸದ್ಯ ನೆಲಮಂಗಲದ ನಿವಾಸಿಗಳು ಮೆಟ್ರೋ ಹಿಡಿಯಲು ನಾಗಸಂದ್ರದವರೆಗೆ ಸಂಚರಿಸಬೇಕಾಗಿದೆ. ವಾಸ್ತವವಾಗಿ, ಆಸ್ತಿಗಳು ಕೈಗೆಟುಕುವ ಬೆಲೆಯಲ್ಲಿ ಸಿಗುವುದರಿಂದ ಹೆಚ್ಚಿನ ಸಂಖ್ಯೆಯ ಜನರು ನಗರದಿಂದ ನೆಲಮಂಗಲಕ್ಕೆ ಸ್ಥಳಾಂತರಗೊಳ್ಳುತ್ತಿದ್ದಾರೆ. ಅವರಿಗೆ ಪ್ರಯಾಣ ಮಾತ್ರ ಸಮಸ್ಯೆಯಾಗಿತ್ತು. ಹಸಿರು ಮಾರ್ಗದ ಮೆಟ್ರೋ ವಿಸ್ತರಣೆಯೊಂದಿಗೆ ನಗರದ ವಿವಿಧ ಭಾಗಗಳನ್ನು ಸುಲಭವಾಗಿ ಅಲ್ಲಿನ ಜನರು ತಲುಪಬಹುದು.

Namma Metro: ಆರಂಭವಾಗಲಿರುವ ಕೆ.ಆರ್. ಪುರಂ - ವೈಟ್‌ಫೀಲ್ಡ್ ನಡುವೆ 10 ನಿಮಿಷಕ್ಕೆ ಒಂದು ಮೆಟ್ರೋ Namma Metro: ಆರಂಭವಾಗಲಿರುವ ಕೆ.ಆರ್. ಪುರಂ - ವೈಟ್‌ಫೀಲ್ಡ್ ನಡುವೆ 10 ನಿಮಿಷಕ್ಕೆ ಒಂದು ಮೆಟ್ರೋ

 NICE ರಸ್ತೆ ಮೂಲಕ ಪ್ರಯಾಣಿಸುವವರಿಗೆ

NICE ರಸ್ತೆ ಮೂಲಕ ಪ್ರಯಾಣಿಸುವವರಿಗೆ

BIEC ನೈಸ್‌ ರಸ್ತೆಯ ಜಂಕ್ಷನ್‌ನಲ್ಲಿರುವುದರಿಂದ, NICE ರಸ್ತೆಯ ಮೂಲಕ ಪ್ರಯಾಣಿಸುವವರು ಸಹ ಮೆಟ್ರೋದಲ್ಲಿ ಪ್ರಯಾಣ ಮಾಡಲು ತಮ್ಮ ವಾಹನಗಳನ್ನು ಪಾರ್ಕ್‌ ಮಾಡಿ ಹೋಗಬಹುದು. ಆಸ್ತಿಗಳನ್ನು ಖರೀದಿಸಲು ಇಚ್ಛಿಸುವವರು ಈಗ ನೆಲಮಂಗಲ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ನೋಡುತ್ತಿದ್ದಾರೆ. ಏಕೆಂದರೆ ಅಲ್ಲಿಗೆ ತಲುಪುವುದು ಇನ್ನು ಮುಂದೆ ಸುಲಭವಾಗಲಿದೆ.

 ನೆಲಮಂಗಲ ಎಕ್ಸ್‌ಪ್ರೆಸ್‌ವೇ

ನೆಲಮಂಗಲ ಎಕ್ಸ್‌ಪ್ರೆಸ್‌ವೇ

ನೆಲಮಂಗಲ ಎಕ್ಸ್‌ಪ್ರೆಸ್‌ವೇಯನ್ನು ಆರು ಪಥದ ಪ್ರವೇಶ ನಿಯಂತ್ರಿತ ರಸ್ತೆಯನ್ನಾಗಿ ನಿರ್ಮಿಸಲಾಗಿದೆ. ಜೊತೆಗೆ ನಾಲ್ಕು ಪಥದ ಟೋಲ್ ಫ್ರೀ ಸರ್ವಿಸ್ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ. ನೆಲಮಂಗಲ ಮತ್ತು ಬೆಂಗಳೂರು ನಗರದ ಇತರ ಭಾಗಗಳ ನಡುವಿನ ಪ್ರಯಾಣವನ್ನು ಇದು ಹೆಚ್ಚು ಕಾರ್ಯಸಾಧ್ಯವಾಗಿಸಿದೆ. ಹೆಚ್ಚುವರಿಯಾಗಿ, ನೆಲಮಂಗಲವು ಬಹು ಸಂಪರ್ಕ ರಸ್ತೆಗಳನ್ನು ಹೊಂದಿದೆ. ಹಾಸನ, ತುಮಕೂರು, ವಿಮಾನ ನಿಲ್ದಾಣ (ಮಧುರೆ ಮೂಲಕ) ಮತ್ತು NICE ರಸ್ತೆಗಳ ಸಂಪರ್ಕವನ್ನು ನೆಲಮಂಗಲ ಹೊಂದಿದೆ.

 ಆಸ್ತಿ ಖರೀದಿದಾರರಿಗೆ ಪ್ಲಸ್‌ ಪಾಯಿಂಟ್‌

ಆಸ್ತಿ ಖರೀದಿದಾರರಿಗೆ ಪ್ಲಸ್‌ ಪಾಯಿಂಟ್‌

ಆಸ್ತಿ ಖರೀದಿದಾರರು ಹಾಗೂ ಡೆವೆಲಪರ್‌ಗಳು ಸಹ ಈ ಸಂಪರ್ಕವು ಪ್ರಮುಖ ಪ್ಲಸ್ ಪಾಯಿಂಟ್ ಎಂದು ಒಪ್ಪಿಕೊಳ್ಳುತ್ತಾರೆ. ಸದ್ಯ ನೆಲಮಂಗಲ ರಸ್ತೆಯಲ್ಲಿರುವ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದವರೆಗೆ (ಬಿಐಇಸಿ) ಮೆಟ್ರೊ ಸಂಪರ್ಕ ವಿಸ್ತರಿಸಲಾಗಿದ್ದು, ಮಾಗಡಿ ರಸ್ತೆಯ ಕಡಬಗೆರೆವರೆಗೆ ಮೆಟ್ರೊ ನಿರ್ಮಿಸುವ ಯೋಜನೆ ಇದೆ.

 ಆಸ್ತಿ ಖರೀದಿದಾರರ ಆಕರ್ಷಣೆ

ಆಸ್ತಿ ಖರೀದಿದಾರರ ಆಕರ್ಷಣೆ

ಒಂದು ಕಾಲದಲ್ಲಿ ಬೆಂಗಳೂರಿನ ದೂರದ ಉಪನಗರವೆಂದು ಪರಿಗಣಿಸಲ್ಪಟ್ಟಿದ್ದ ನೆಲಮಂಗಲ ಈಗ ಆಸ್ತಿ ಖರೀದಿದಾರರ ಪ್ರಮುಖ ಸ್ಥಳವಾಗಿ ಬದಲಾಗುತ್ತಿದೆ. ಸ್ವಂತ ನಿವೇಶನ ಅಥವಾ ಮನೆ ಕಟ್ಟಲು ಮುಂದಾಗಿರುವ ಹಲವು ಆಸ್ತಿ ಖರೀದಿದಾರರು ನಾನಾ ಕಾರಣಗಳಿಂದ ನೆಲಮಂಗಲದತ್ತ ಕಣ್ಣು ನೆಟ್ಟಿದ್ದಾರೆ. ನೆಲಮಂಗಲದ ರಿಯಾಲ್ಟಿ ಡೆವಲಪರ್‌ಗಳು ಬೆಂಗಳೂರಿನ ವಾಯುವ್ಯ ಭಾಗಗಳಲ್ಲಿ ಹಲವಾರು ಅನುಕೂಲಕರ ಅಂಶಗಳನ್ನು ಹೊಂದಿದ್ದು ಅದು ಆಸ್ತಿ ಖರೀದಿದಾರರನ್ನು ಆಕರ್ಷಿಸುತ್ತಿದೆ ಎಂದು ಭಾವಿಸುತ್ತಾರೆ.

 NICE ರಸ್ತೆ ಕೂಡ ಪ್ಲಸ್ ಪಾಯಿಂಟ್

NICE ರಸ್ತೆ ಕೂಡ ಪ್ಲಸ್ ಪಾಯಿಂಟ್

NICE ರಸ್ತೆ ಕೂಡ ಒಂದು ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. BMTC ಪ್ರಸ್ತುತ NICE ರಸ್ತೆಯ ಮೂಲಕ ಸೇವೆಗಳನ್ನು ನಿರ್ವಹಿಸುತ್ತಿದೆ. ಇದು ನಿವಾಸಿಗಳಿಗೆ ಎಲೆಕ್ಟ್ರಾನಿಕ್ಸ್ ಸಿಟಿ ಮತ್ತು ವೈಟ್‌ಫೀಲ್ಡ್‌ಗೆ ಹೋಗಲು ದೊಡ್ಡ ವರವಾಗಿದೆ ಮತ್ತು ಇದು ಟೆಕ್ ಕ್ಯಾಂಪಸ್‌ಗಳನ್ನು ತಲುಪಲು ನಗರದ ದಟ್ಟಣೆಯನ್ನು ತಪ್ಪಿಸಲು ಜನರಿಗೆ ಸಹಾಯ ಮಾಡುತ್ತದೆ. ನೆಲಮಂಗಲ ರಸ್ತೆಯಲ್ಲಿ ಈಗಾಗಲೇ ಮೆಟ್ರೋ ಸಂಪರ್ಕ ಅದ್ಭುತಗಳನ್ನು ಸೃಷ್ಟಿಮಾಡುತ್ತಿದೆ. ಹಸಿರು ಮಾರ್ಗ ವಿಸ್ತರಣೆಯು ರಿಯಾಲ್ಟಿ ಬೆಳವಣಿಗೆಗೆ ಮತ್ತಷ್ಟು ಸಹಾಯ ಮಾಡುತ್ತದೆ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳುತ್ತಾರೆ.

English summary
BMRCL has decided to extend Green Line between Manjunath Nagar and Madavar (BIEC). Through this, mass transport connectivity on Nelamangala and Mysore roads will get a big boost
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X