ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋ: ಅಂಜನಾಪುರದಿಂದ ಯಲಚೇನಹಳ್ಳಿಗೆ ಕೇವಲ ಹತ್ತೇ ನಿಮಿಷ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 22: ಎಲ್ಲವೂ ಅಂದುಕೊಂಡಂತೆ ಆದರೆ ನವೆಂಬರ್‌ ಒಂದರಿಂದ ಯಲಚೇನಹಳ್ಳಿ ಅಂಜನಾಪುರ ನಡುವೆ ನಮ್ಮ ಮೆಟ್ರೋ ಸಂಚರಿಸಲಿದೆ.

ಅಂಜನಾಪುರಿಂದ ಹೊರಟ ರೈಲು ಕೇವಲ ಹತ್ತು ನಿಮಿಷಗಳಲ್ಲಿ ಯಲಚೇನಹಳ್ಳಿ ತಲುಪಲಿದೆ. ಟಿಕೆಟ್ ಶುಲ್ಕ 20 ರೂ ಇರಲಿದೆ ಎಂದು ಬಿಎಂಆರ್‌ಸಿಎಲ್ ಎಂಡಿ ಅಜಯ್ ಸೇಠ್ ತಿಳಿಸಿದ್ದಾರೆ.

ಯಲಚೇನಹಳ್ಳಿ-ಅಂಜನಾಪುರ; ನ.1ರಿಂದ ಮೆಟ್ರೋ ಸಂಚಾರಯಲಚೇನಹಳ್ಳಿ-ಅಂಜನಾಪುರ; ನ.1ರಿಂದ ಮೆಟ್ರೋ ಸಂಚಾರ

ಯಲಚೇನಹಳ್ಳಿ-ಅಂಜನಾಪುರ ನಡುವಿನ ಮಾರ್ಗ ನಮ್ಮ ಮೆಟ್ರೋ ಯೋಜನೆ 2ನೇ ಹಂತದ ಮೊದಲ ವಿಸ್ತರಿತ ಮಾರ್ಗ ಇದಾಗಿದೆ. ರೀಚ್ 4ಬಿ ಮಾರ್ಗ 6.29 ಕಿ. ಮೀ. ಉದ್ದವಿದ್ದು, 5 ನಿಲ್ದಾಣಗಳನ್ನು ಒಳಗೊಂಡಿದೆ. ನವೆಂಬರ್ 1ರ ಕನ್ನಡ ರಾಜ್ಯೋತ್ಸವದ ದಿನದಂದು ಮಾರ್ಗವನ್ನು ವಾಣಿಜ್ಯ ಸಂಚಾರಕ್ಕೆ ಮುಕ್ತಗೊಳಿಸಲು ಬಿಎಂಆರ್‌ಸಿಎಲ್ ಬಯಸಿದೆ. ಮಾರ್ಗ ಸಂಚಾರಕ್ಕೆ ಮುಕ್ತವಾದರೆ ನಾಗಸಂದ್ರದಿಂದ ಹೊರಡುವ ರೈಲು ಕನಕಪುರ ರಸ್ತೆಯ ಅಂಜನಾಪುರದ ತನಕ ಸಂಚಾರ ನಡೆಸಲಿದೆ.

Namma Metro: Anjanapura To Yelachenahalli In 10 Min At RS 20 From Next Month

ನಮ್ಮ ಮೆಟ್ರೋ ಯೋಜನೆ 2ನೇ ಹಂತದ ಮೊದಲ ವಿಸ್ತರಿತ ಮಾರ್ಗವನ್ನು ನಿರ್ಮಾಣ ಮಾಡಲು 2011ರಲ್ಲಿ ತೀರ್ಮಾನಿಸಲಾಯಿತು. 2016ರಲ್ಲಿ ಮಾರ್ಗವನ್ನು ಪೂರ್ಣಗೊಳಿಸುವ ಗಡುವು ಇತ್ತು. ಆದರೆ, ಬೇರೆ-ಬೇರೆ ಸಂಸ್ಥೆಗಳ ಒಪ್ಪಿಗೆ, ಅನುದಾನದ ಕೊರತೆ ಕಾರಣ ಯೋಜನೆ ವಿಳಂಬವಾಯಿತು. 2016ರ ಜನವರಿಯಲ್ಲಿ ನಾಗಾರ್ಜುನ ಕನ್‌ಸ್ಟ್ರಕ್ಷನ್ ಕಂಪನಿ 508 ಕೋಟಿ ರೂ. ಟೆಂಡರ್‌ ಪಡೆದುಕೊಂಡಿತು. ಇವರಲ್ಲಿ 5 ನಿಲ್ದಾಣಗಳ ಕಾಮಗಾರಿಗಳು ಸಹ ಸೇರಿವೆ.

ಇತ್ತ ನಾಗಸಂದ್ರದಿಂದ ಮಾದಾವರ (ಬಿಐಇಸಿ) ವರೆಗೆ ಹಸಿರು ಮಾರ್ಗದ ವಿಸ್ತರಿತ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದ್ದು ಸುಮಾರು 3.03 ಕಿ.ಮೀ ಉದ್ದವಿದೆ. ಇದರಲ್ಲಿಯೂ ಮಂಜುನಾಥನಗರ, ಚಿಕ್ಕಬಿದರಕಲ್ಲು, ಮಾದಾವರ ಎಂಬ ಎಲಿವೇಟೆಡ್ ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ.

Recommended Video

CSK ತಂಡದ DJ Bravo ಇನ್ನುಳಿದ ಪಂದ್ಯದಲ್ಲಿ ಆಗೋದಿಲ್ಲ , ಏಕೆ | Oneindia Kannada

English summary
If all goes as per plan, Metro passengers can travel between Anjanapura And Yelachenahalli in 10 Minutes at Rs 20 From next month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X