ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋ 3ನೇ ಹಂತದ ತಯಾರಿ ಶುರು

|
Google Oneindia Kannada News

ಬೆಂಗಳೂರು, ನವೆಂಬರ್ 01: ನಮ್ಮ ಮೆಟ್ರೋ ಮೂರನೇ ಹಂತದ ಕಾಮಗಾರಿ ಶುರುವಾಗಿದೆ. ಸುಮಾರು 42 ಕಿ.ಮೀ ಉದ್ದದ ಮೂರನೇ ಹಂತಕ್ಕೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ನಿಗಮ ಅನುಮತಿ ನೀಡಿದೆ.

ನಮ್ಮ ಮೆಟ್ರೋ ನಿಗಮದ ಹಿರಿಯ ಅಧಿಕಾರಿಗಳ ಅನಿಸಿಕೆ ಪ್ರಕಾರ 2028ರೊಳಗೆ ಮೂರನೇ ಹಂತದ ಯೋಜನೆಯೂ ಕಾರ್ಯಗತಗೊಳ್ಳಲಿದೆ. 2025ರೊಳಗೆ ಏರ್‌ಪೋರ್ಟ್‌ ಲೈನ್ ಸೇರಿದಂತೆ ಎರಡನೇ ಹಂತದ ಎಲ್ಲಾ ಯೋಜನೆಗಳನ್ನು ಪೂರ್ಣಗೊಳಿಸಿ ಆ ಬಳಿಕ ಮೂರನೇ ಹಂತದ ಯೋಜನೆಯನ್ನು ಮೂರು ವರ್ಷದೊಳಗೆ ಜನ ಬಳಕೆಗೆ ಲಭ್ಯವಾಗುವಂತೆ ಮಾಡುವ ಗುರಿ ಇಟ್ಟುಕೊಂಡಿದೆ.

ನಮ್ಮ ಮೆಟ್ರೋ 3ನೇ ಹಂತ: ವ್ಯಾಪ್ತಿ ಹಾಗೂ ನಿಲ್ದಾಣಗಳ ಬಗ್ಗೆ ಮಾಹಿತಿನಮ್ಮ ಮೆಟ್ರೋ 3ನೇ ಹಂತ: ವ್ಯಾಪ್ತಿ ಹಾಗೂ ನಿಲ್ದಾಣಗಳ ಬಗ್ಗೆ ಮಾಹಿತಿ

ಮೂರನೇ ಹಂತದ ಯೋಜನೆಯಲ್ಲಿ ಮೆಟ್ರೋ ಮಾರ್ಗ ಎಲ್ಲೆಲ್ಲಿ ಹೋಗುತ್ತದೆ ಎಂಬ ವಿವರವನ್ನು ಒಳಗೊಂಡ ವರದಿಯನ್ನು ಮೆಟ್ರೋ ನಿಗಮ ಸಿದ್ಧಪಡಿಸಿದೆ. ಈ ವರದಿಯ ಆಧಾರದಲ್ಲಿ ರೈಲ್ ಇಂಡಿಯಾ ಟೆಕ್ನಿಕಲ್ ಆಂಡ್ ಇಕನಾಮಿಕ್ ಸರ್ವೀಸ್‌ಗೆ ಡಿಪಿಆರ್ ಸಿದ್ಧಪಡಿಸುವಂತೆ ಕೋರಿದೆ.

ಮುಂದಿನ ವರ್ಷದ ಜೂನ್ ಒಳಗೆ ಡಿಪಿಆರ್ ಸಿದ್ಧಗೊಳ್ಳುವ ನಿರೀಕ್ಷೆಯಿದೆ. ಇದರ ಜತೆಗೆ ಟ್ರಾಫಿಕ್ ಸರ್ವೇ ಕೂಡ ನಡೆಯಲಿದೆ.

 ಮೆಟ್ರೋ ಮಾರ್ಗ

ಮೆಟ್ರೋ ಮಾರ್ಗ

ಜೆಪಿನಗರದಿಂದ ಹೆಬ್ಬಾಳ, ಹೊಸಹಳ್ಳಿ ಟೋಲ್‌ನಿಂದ ಕಡಬಗೆರೆ ಹೀಗೆ ಎರಡು ಕಾರಿಡಾರ್‌ನಲ್ಲಿ ಒಟ್ಟು 42 ಕಿ.ಮೀ ಉದ್ದದ ಮೆಟ್ರೋ ಮಾರ್ಗ ನಿರ್ಮಾಣದ ಮಾಹಿತಿಯನ್ನು ಉಲ್ಲೇಖಿಸಲಾಗಿದೆ. ಪ್ರಸ್ತಾವಿತ ಮೆಟ್ರೋ ಮಾರ್ಗವು ಒಟ್ಟು 9 ಕಡೆಗಳಲ್ಲಿ ಮೆಟ್ರೋ, ಸಬ್ ಅರ್ಬನ್ ಹಾಗೂ ಬಸ್‌ ಡಿಪೋಗಳನ್ನು ಸಂಪರ್ಕಿಸಲಿದೆ.
ಆದರೆ ಯೋಜನೆಯ ಅಂತಿಮ ಸ್ವರೂಪ ಡಿಪಿಆರ್ ಸಿದ್ಧಗೊಂಡ ಬಳಿಕವೇ ಸ್ಪಷ್ಟವಾಗಲಿದೆ ಎಂದು ಮೆಟ್ರೋದ ಅಧಿಕಾರಿಗಳು ಹೇಳುತ್ತಾರೆ.

 ಪರಿಹಾರ ಧನ ವಿತರಣೆ

ಪರಿಹಾರ ಧನ ವಿತರಣೆ

ಡೈರಿ ವೃತ್ತದಿಂದ ನಾಗವಾರದವರೆಗಿನ ಸುರಂಗಮಾರ್ಗಕ್ಕೆ ಭೂಸ್ವಾಧೀನಪಡಿಸಿಕೊಂಡ ಹಿನ್ನೆಲೆಯಲ್ಲಿ ಪರಿಹಾರಧನ ವಿತರಿಸುವ ಪ್ರಕ್ರಿಯೆ ನಡೆಯುತ್ತಿದೆ. ಹಂತ- 2ರಲ್ಲಿ 6487.74 ಕೋಟಿ ರೂ., ಹಂತ- 2ಎ 398.48 ಕೋಟಿ ರೂ. ಹಾಗೂ ಹಂತ-2ಬಿಯಲ್ಲಿ ಒಟ್ಟು 3116 ಸ್ವತ್ತುಗಳಿಗೆ 1381.71 ಕೋಟಿ ಭೂ ಪರಿಹಾರವನ್ನು ಪಾವತಿಸಲಾಗಿದೆ. ಇಲ್ಲಿಯವರೆಗೆ ಪುನರ್ವಸತಿ ಸೌಲಭ್ಯಗಳ ಕುರಿತು 755 ಭೂಮಾಲೀಕರಿಗೆ ಹಾಗೂ 2338 ಅನುಭವದಾರರಿಗೆ ಒಟ್ಟು 84.08 ಕೋಟಿ ರೂ. ಪಾವತಿ ಮಾಡಲಾಗಿದೆ.

 ಮುಂದಿನ ದಿನಗಳಲ್ಲಿ ಮತ್ತಷ್ಟು ಭೂಸ್ವಾಧೀನ

ಮುಂದಿನ ದಿನಗಳಲ್ಲಿ ಮತ್ತಷ್ಟು ಭೂಸ್ವಾಧೀನ

ಬೈಯಪ್ಪನಹಳ್ಳಿ- ವೈಟ್‌ಫೀಲ್ಡ್‌ವರೆಗೆ 15.05.ಕಿ.ಮೀ. ವ್ಯಾಪ್ತಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಇದಕ್ಕಾಗಿ 1,77,694.12 ಚ.ಮೀ. ವಿಸ್ತೀರ್ಣದ ಪ್ರದೇಶವು ವಯಾಡಕ್ಟ್ ಮತ್ತು ನಿಲ್ದಾಣಗಳಿಗೆ ಅಗತ್ಯವಾಗಿ ಬೇಕಾದ ಜಾಗದಲ್ಲಿ 1,73,786.88 ಚ.ಮೀ. ಪ್ರದೇಶವನ್ನು ಎಂಜಿನಿಯರಿಂಗ್‌ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ. ಕಾಡುಗೋಡಿ ಡಿಪೋಗೆ ಬೇಕಾದ 45 ಎಕರೆ ಅರಣ್ಯ ಭೂಮಿಯನ್ನು ಸಹ ಸ್ವಾಧೀನಪಡಿಸಿಕೊಂಡು ಹಸ್ತಾಂತರಿಸಲಾಗಿದೆ.

ಹಾಗೆಯೇ, ನಾಗಸಂದ್ರದಿಂದ ಬಿಐಇಸಿವರೆಗೆ 3 ಕಿ.ಮೀ. ವ್ಯಾಪ್ತಿಗೆ ಬೇಕಾದ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಎಂಜಿನಿಯರಿಂಗ್‌ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ. ಕೊತ್ತನೂರು ಡಿಪೋಗೆ ಅಗತ್ಯವಿರುವ 32.6 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಎಂಜಿನಿಯರಿಂಗ್‌ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ. ಜಿಂದಾಲ್‌ ಮತ್ತು ಪ್ರೆಸ್ಟೀಜ್‌ ಲೇಔಟ್‌ ಮೂಲಕ ಅಂಚೆಪಾಳ್ಯ ಮತ್ತು ಇತರ ಹಳ್ಳಿಗಳಿಂದ ಚಿಕ್ಕಬಿದರಕಲ್ಲು ಮೆಟ್ರೊ ನಿಲ್ದಾಣಕ್ಕೆ ರಸ್ತೆ ಸಂಪರ್ಕವನ್ನು ಒದಗಿಸಲು 1885.11 ಚ.ಮೀ. ಹೆಚ್ಚುವರಿ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು, ನ್ಯಾಯಾಲಯವು ರದ್ದುಗೊಳಿಸಿದೆ. ಹೀಗಾಗಿ, ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಬಿಎಂಆರ್‌ಸಿಎಲ್‌ ಮುಂದಾಗುತ್ತಿದೆ.

ಇನ್ನು ಪಾಟರಿ ಟೌನ್‌ ನಿಲ್ದಾಣಕ್ಕೆ ಬೇಕಾಗಿರುವ ಹೆಚ್ಚುವರಿ 222.90 ಚ.ಮೀ. ವಿಸ್ತೀರ್ಣಕ್ಕೆ ಹಾಗೂ ರಾಷ್ಟ್ರೀಯ ಮಿಲಿಟರಿ ಸ್ಕೂಲ್‌ ನಿಲ್ದಾಣಕ್ಕಾಗಿ ಅವಶ್ಯಕತೆ ಇರುವ 883.00 ಚ.ಮೀ. ವಿಸ್ತೀರ್ಣಕ್ಕೆ ಅಂತಿಮ ಅಧಿಸೂಚನೆಯ ಪ್ರಸ್ತಾವನೆಯನ್ನು ವಿಶೇಷ ಭೂಸ್ವಾಧೀನಾಧಿಕಾರಿಯವರಿಗೆ ಕಳುಹಿಸಲಾಗಿದೆ.

 ಮೆಟ್ರೋ ನಿಲ್ದಾಣಗಳ ಕುರಿತು ಮಾಹಿತಿ

ಮೆಟ್ರೋ ನಿಲ್ದಾಣಗಳ ಕುರಿತು ಮಾಹಿತಿ

ಕಾರಿಡಾರ್‌-1ರಲ್ಲಿ ಬರುವ ನಿಲ್ದಾಣಗಳು
ಜೆಪಿನಗರ 4ನೇ ಹಂತ, ಜೆಪಿನಗರ 5ನೇ ಹಂತ, ಜೆಪಿ ನಗರ, ಕದಿರೇನಹಳ್ಳಿ, ಕಾಮಾಕ್ಯ ಬಸ್‌ ನಿಲ್ದಾಣ, ಹೊಸಕೆರೆಹಳ್ಳಿ ಕ್ರಾಸ್‌, ಪಿಇಎಸ್‌ ಕಾಲೇಜು, ಮೈಸೂರು ರಸ್ತೆ ನಾಗರಬಾವಿ ವೃತ್ತ, ವಿನಾಯಕ ಲೇಔಟ್‌, ಅಂಬೇಡ್ಕರ್‌ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್‌, ಬಿಡಿಎ ಕಾಂಪ್ಲೆಕ್ಸ್‌, ಸುಮನಹಳ್ಳಿ ಕ್ರಾಸ್‌, ಚೌಡೇಶ್ವರಿನಗರ, ಫ್ರೀಡಂ ಫೈಟರ್‌ಕ್ರಾಸ್‌, ಕಂಠೀರವ ಸ್ಟೇಡಿಯಂ, ಪೀಣ್ಯ, ಬಾಹುಬಲಿ ನಗರ, ಬಿಇಎಲ್‌ ವೃತ್ತ, ಪಟೇಲಪ್ಪ ಲೇಔಟ್‌, ಹೆಬ್ಬಾಳ, ಕೆಂಪಾಪುರ ನಿಲ್ದಾಣಗಳಿರಲಿವೆ.

ಕಾರಿಡಾರ್‌-2ರಲ್ಲಿ ಬರುವ ನಿಲ್ದಾಣಗಳು
ಹೊಸಹಳ್ಳಿ, ಕೆಎಚ್‌ಬಿ ಕಾಲೊನಿ, ವಿನಾಯಕನಗರ, ಸುಮನಹಳ್ಳಿ ಕ್ರಾಸ್‌, ಸುಂಕದಕಟ್ಟೆ, ಹೇರೋಹಳ್ಳಿ, ಬ್ಯಾಡರಹಳ್ಳಿ, ಫಾರೆಸ್ಟ್‌ ಗೇಟ್‌, ಕಡಬಗೆರೆ ನಿಲ್ದಾಣಗಳು ಇರಲಿವೆ.

 ನಿಗದಿತ ಸಮಯಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆಯೇ?

ನಿಗದಿತ ಸಮಯಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆಯೇ?

ನಮ್ಮ ಮೆಟ್ರೋ ಎರಡನೇ ಹಂತದ ಯೋಜನೆಯ ಮುಕ್ತಾಯದ ಬಳಿಕ ಒಟ್ಟು 175 ಕಿ.ಮೀ ಉದ್ದದ ಜಾಲವನ್ನು ಮೆಟ್ರೋ ಹೊಂದಲಿದೆ. ಆದರೆ ಮೆಟ್ರೋ ಯೋಜನೆ ಆರಂಭಗೊಂಡು 15 ವರ್ಷ ಆಗುತ್ತಾ ಬಂದಿದ್ದರೂ ಈವರೆಗೆ ಕೇವಲ 56.1 ಕಿ.ಮೀ ಉದ್ದದ ಜಾಲದಲ್ಲಿ ಮಾತ್ರ ಮೆಟ್ರೋ ಕಾರ್ಯನಿರ್ವಹಿಸುತ್ತಿದೆ. ಏರ್‌ಪೋರ್ಟ್ ಮಾರ್ಗದ ಕೆಆರ್ ಪುರದಿಂದ ವಿಮಾನ ನಿಲ್ದಾಣದ ಮಾರ್ಗದ ಟೆಂಡರ್ ಬಾಕಿ ಇರುವುದು ಸೇರಿದಂತೆ ಒಟ್ಟು 120 ಕಿ.ಮೀಗೂ ಹೆಚ್ಚು ಮಾರ್ಗ ನಿರ್ಮಾಣದ ವಿವಿಧ ಹಂತದಲ್ಲಿದೆ.

Recommended Video

ಕರ್ನಾಟಕ ರಾಜ್ಯೋತ್ಸವ:ನಮ್ಮ ಭಾಷೆ ನಮ್ಮ ಹೆಮ್ಮೆ | Oneindia Kannada

English summary
Namma Metro 3rd Phase Preparations Begins. The coordination of the Bengaluru Metro Phase-III project has recently been completed. Officials said that the 42 KMs line would meet other Metro lines, subway or bus depots at nine locations to facilitate seamless communication. The project is expected to start operating in 2027-2028.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X