ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ನಮ್ಮ ಹಿರಿಯರು': ಹಿರಿ ಜೀವಗಳಿಗೆ ಬೆಂಗಳೂರು ಪೊಲೀಸರ ಶಕ್ತಿ

|
Google Oneindia Kannada News

ಬೆಂಗಳೂರು, ಮೇ 31: ''ಸಮಾಜದಲ್ಲಿರುವ ಹಿರಿಯ ನಾಗರಿಕರಿಗೆ ಸುರಕ್ಷತೆ ಮತ್ತು ಭರವಸೆ'' ಎಂಬ ಘೋಷವಾಕ್ಯದಡಿ ಬೆಂಗಳೂರು ಪೊಲೀಸರು 'ನಮ್ಮ ಹಿರಿಯರು' ಎಂಬ ಹೊಸ ಕಾರ್ಯಕ್ರಮವನ್ನು ಪ್ರಾರಂಭ ಮಾಡಿದ್ದಾರೆ.

ಬೆಂಗಳೂರು ಕಮಿಷನರ್ ಭಾಸ್ಕರ್ ರಾವ್, ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಸೆಫೆಟ್ 'ನಮ್ಮ ಹಿರಿಯರು' ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ್ದಾರೆ. ಕೆಲ ದಿನಗಳ ಹಿಂದೆ ಈ ಸೇವೆ ಪ್ರಾರಂಭವಾಗಿದ್ದು, ಹಿರಿಯ ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂದು ತಿಳಿಸಿದ್ದಾರೆ.

ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ; ಅರ್ಜಿ ಸಲ್ಲಿಕೆ ಸ್ಥಗಿತಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ; ಅರ್ಜಿ ಸಲ್ಲಿಕೆ ಸ್ಥಗಿತ

ಹಿರಿಯ ನಾಗರಿಕರ ಕಷ್ಟಗಳಿಗೆ ಸ್ಪಂದಿಸುವ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಬ್ಯಾಂಕ್, ಆರೋಗ್ಯ, ಹಣಕಾಸು, ಮೆಡಿಕಲ್ ಹೀಗೆ ಅನೇಕ ಸೇವೆಗಳಿಗೆ ಈ ಯೋಜನೆ ಮೂಲಕ ಪೊಲೀಸರು ಸಹಾಯ ಮಾಡಲಿದ್ದಾರೆ. ಹಿರಿಯ ನಾಗರಿಕ ಮೇಲೆ ಹಲ್ಲೆ ಪ್ರಕರಣಗಳು ನಗರದಲ್ಲಿ ಹೆಚ್ಚಾಗುತ್ತಿದ್ದು, ಈ ಯೋಜನೆ ರೂಪಿಸಲು ಪ್ರಮುಖ ಕಾರಣವಾಗಿದೆ.

Namma Hiriyaru A Initiative By Bengaluru South Division Police

ಬನಶಂಕರಿ, ಬಸವನಗುಡಿ, ಜೆಪಿನಗರ, ಜಯನಗರ, ಗಿರಿನಗರ, ಕುಮಾರಸ್ವಾಮಿ ಲೇ ಔಟ್ ಪೊಲೀಸ್ ಠಾಣೆಯ ಮಹಿಳಾ ಠಾಣೆ ಇನ್‌ಸ್ಪೆಕ್ಟರ್‌ಗಳನ್ನು ಈ ಯೋಜನೆಗಳನ್ನು ನೋಡಿಕೊಳ್ಳಲು ನೋಡಲ್ ಅಧಿಕಾರಿಗಳು ಎಂದು ನೇಮಿಸಲಾಗಿದೆ.

ಆನ್ ಲೈನ್‌ ಮೂಲಕ ಪೊಲೀಸರನ್ನು ಹಿರಿಯ ನಾಗರಿಕ ಸಂಪರ್ಕ ಮಾಡಬಹುದು. 8277946995 ದೂರವಾಣಿ ಸಂಖ್ಯೆಗೆ ಕರೆ ಅಥವಾ ವಾಟ್ಸ್‌ ಅಪ್ ಮೂಲಕ ಸಂಪರ್ಕ ಮಾಡಬಹುದು. ಒಮ್ಮೆ ತಮ್ಮ ಹೆಸರು ಹಾಗೂ ವಿವರಗಳನ್ನು ರಿಜಿಸ್ಟರ್ ಮಾಡಿಕೊಂಡರೆ, ವಿವರ ಪೊಲೀಸರ ಬಳಿ ಯಾವಾಗಲೂ ಇರುತ್ತದೆ.

ಹಿರಿಯ ನಾಗರಿಕರಿಗೆ ಸಹಾಯ ಆಗಬೇಕು, ಅವರಿಗೆ ಮೋಸ ಮಾಡುವ, ಹಲ್ಲೆಯ ಪ್ರಕರಣಗಳನ್ನು ತಪ್ಪಿಸುವ ದೃಷ್ಟಿಯಿಂದ ಈ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ ಏಳು ಪೊಲೀಸ್ ಠಾಣೆಯಲ್ಲಿ ಈ ಯೋಜನೆ ರೂಪಿಸಿಕೊಂಡಿದ್ದು, ಹಂತ ಹಂತವಾಗಿ ಇದು ಮುಂದುವರೆಯಲಿದೆ.

English summary
Namma Hiriyaru a initiative taken by Bengaluru South Division police to help senior citizens problems.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X