ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಡ್ ನಷ್ಟದಿಂದ ಸಾರಿಗೆ ಪಾರಾಗಲು 'ನಮ್ಮ ಕಾರ್ಗೊ' ಪಾರ್ಸೆಲ್ ವ್ಯವಸ್ಥೆ

|
Google Oneindia Kannada News

ಬೆಂಗಳೂರು,ಫೆಬ್ರವರಿ 25: ಕೊರೊನಾ ಸೋಂಕು ಇಡೀ ವಿಶ್ವಕ್ಕೆ ಆರ್ಥಿಕ ನಷ್ಟವನ್ನುಂಟು ಮಾಡಿದೆ.

ಹಾಗೆಯೇ ಸಾರಿಗೆ ಇಲಾಖೆಯು ಕೂಡ ಸಾಕಷ್ಟು ಪೆಟ್ಟು ತಿಂದಿದೆ. ಎಸಿ ಬಸ್‌ಗಳಲ್ಲಿ ಜನರು ಪ್ರಯಾಣ ಮಾಡುತ್ತಿಲ್ಲ. ಸಾಮಾನ್ಯ ಬಸ್‌ಗಳಲ್ಲೂ ಸಂಖ್ಯೆ ಕಡಿಮೆ.
ಹೀಗಾಗಿ ಕಾರ್ಗೊ ಪಾರ್ಸೆಲ್ ವ್ಯವಸ್ಥೆಯನ್ನು ಜಾರಿಗೆ ತರಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ.

ಬಿಎಂಟಿಸಿ ಟಿಕೆಟ್ ದರ ಹೆಚ್ಚಿಸಲು ನಿರ್ಧಾರ: ಡಿಸಿಎಂ ಲಕ್ಷ್ಮಣ ಸವದಿ!ಬಿಎಂಟಿಸಿ ಟಿಕೆಟ್ ದರ ಹೆಚ್ಚಿಸಲು ನಿರ್ಧಾರ: ಡಿಸಿಎಂ ಲಕ್ಷ್ಮಣ ಸವದಿ!

ಸಾರಿಗೆ ಇಲಾಖೆಯಿಂದ ನಮ್ಮ ಕಾರ್ಗೊ ವ್ಯವಸ್ಥೆ ಜಾರಿಯಾಗಲಿದ್ದು, ಫೆಬ್ರವರಿ 26 ರಂದು ವಿಧಾನಸೌಧದೆದುರು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.

ಬಿಎಂಟಿಸಿ ಹೊರತುಪಡಿಸಿ ಉಳಿದೆಲ್ಲಾ ಕಡೆ ಪಾರ್ಸೆಲ್ ವ್ಯವಸ್ಥೆ

ಬಿಎಂಟಿಸಿ ಹೊರತುಪಡಿಸಿ ಉಳಿದೆಲ್ಲಾ ಕಡೆ ಪಾರ್ಸೆಲ್ ವ್ಯವಸ್ಥೆ

ಬಿಎಂಟಿಸಿ ಹೊರತುಪಡಿಸಿ ಕೆಎಸ್‌ಆರ್‌ಟಿಸಿ,ಎನ್‌ಡಬ್ಲ್ಯೂಕೆಆರ್‌ಟಿಸಿ,ಎನ್‌ಇಕೆಆರ್‌ಟಿಸಿ ಸಂಸ್ಥೆಗಳಲ್ಲಿ ಪಾರ್ಸೆಲ್ ವ್ಯವಸ್ಥೆ ಜಾರಿಯಾಗಲಿದೆ.ಒಟ್ಟು 109 ಸ್ಥಳಗಳಲ್ಲಿ ನಮ್ಮ ಕಾರ್ಗೊ ಸೌಲಭ್ಯವಿರಲಿದೆ ಎಂದು ಮಾಹಿತಿ ನೀಡಿದ್ದಾರೆ.

2780 ಕೋಟಿ ರೂ ನಷ್ಟ

2780 ಕೋಟಿ ರೂ ನಷ್ಟ

ಒಟ್ಟು 109 ಸ್ಥಳಗಳಲ್ಲಿ ಈ ಸೌಲಭ್ಯವಿದೆ, ಪಕ್ಕದ ರಾಜ್ಯಗಳಾದ ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ,ಆಂಧ್ರಪ್ರದೇಶ ಮತ್ತು ಗೋವಾಗೆ ಕೂಡ ಈ ವ್ಯವಸ್ಥೆ ಸಿಗಲಿದೆ.ಕೊರೊನಾ ಬಳಿಕ ಸಾರಿಗೆ ಇಲಾಖೆಗೆ 2780 ಕೋಟಿ ರೂ ನಷ್ಟವಾಗಿದೆ. ಕೊರೊನಾ ಮೊದಲು 1508 ಕೋಟಿ ರೂ ನಷ್ಟವಾಗಿದೆ. ಕೊರೊನಾ ಬಳಿಕ ಇಲಾಖೆಗೆ 4 ಸಾವಿರ ಕೋಟಿ ಆದಾಯ ಕೊರತೆ ಉಂಟಾಗಿದೆ.

ಸಮಸ್ಯೆ ಬಗ್ಗೆ ಸಿಬ್ಬಂದಿಯೇ ಬಂದು ಚರ್ಚಿಸಬೇಕು

ಸಮಸ್ಯೆ ಬಗ್ಗೆ ಸಿಬ್ಬಂದಿಯೇ ಬಂದು ಚರ್ಚಿಸಬೇಕು

ಸಮಸ್ಯೆ ಕುರಿತು ಸಿಬ್ಬಂದಿಯೇ ಬಂದು ಚರ್ಚಿಸಬೇಕು, ರೈತ ಸಂಘಕ್ಕೂ ಇದಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ, ಸಾರಿಗೆ ಸಿಬ್ಬಂದಿಗೆ 9 ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆ ಮಾಡಿದ್ದರು.ಕೊರೊನಾಗೆ ಬಲಿಯಾದ ಸಾರಿಗೆ ಸಿಬ್ಬಂದಿ ಕುಟುಂಬಕ್ಕೆ 30 ಲಕ್ಷ ರೂ ಪರಿಹಾರ ನೀಡಲು ತೀರ್ಮಾನಿಸಿದ್ದೇವೆ. ನಾಳೆ ಸಾಂಕೇತಿಕವಾಗಿ ಚೆಕ್ ಹಸ್ತಾಂತರ ಮಾಡಲಾಗುತ್ತದೆ ಎಂದು ಹೇಳಿದರು.

Recommended Video

ಇಂದು ಭಾರತ್ ಬಂದ್-ಡೀಸೆಲ್-ಪೆಟ್ರೋಲ್ ದರ ಹೆಚ್ಚಳ, ಟೋಲ್ ನೀತಿಗೆ ವಿರೋಧ | Oneindia Kannada
ಬಿಎಂಟಿಸಿಗೆ ಆದಾಯ ಕೊರತೆ

ಬಿಎಂಟಿಸಿಗೆ ಆದಾಯ ಕೊರತೆ

ಬಿಎಂಟಿಸಿಗೆ ಆದಾಯದ ಕೊರತೆ ಎದುರಾಗಿದೆ, ಸಂಬಳ ನೀಡಲು 80 ಕೋಟಿ ರೂ ಸರ್ಕಾರದಿಂದ ಪಡೆದಿದ್ದೇವೆ, 556 ಕೋಟಿ ರೂ ಬ್ಯಾಂಕಿನಿಂದ ಸಾಲ ಪಡೆದಿದ್ದೇವೆ, 2980 ಕೋಟಿ ವಿದ್ಯಾರ್ಥಿಗಳ ಬಸ್ ಪಾಸ್ ಹಣ ಬರಬೇಕು ಎಂದು ಹೇಳಿದರು.

English summary
Namma Cargo System Will Be Launched On Feb 26 Infront of Vidhana Soudha says Transport Minister Laxman Savadi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X