ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಮೇಯರ್ ಚುನಾವಣೆ: ಮತದಾರರ ಪಟ್ಟಿಯಿಂದ ಅನರ್ಹ ಶಾಸಕರ ಹೆಸರು ಔಟ್

|
Google Oneindia Kannada News

Recommended Video

ಅನರ್ಹ ಶಾಸಕರಿಗೆ ಮತ್ತೊಂದು ಆಘಾತ ನೀಡಿದ BBMP | Oneindia Kannada

ಬೆಂಗಳೂರು, ಆಗಸ್ಟ್ 29: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಮುಂಬರುವ ಮೇಯರ್ ಚುನಾವಣೆಯಲ್ಲಿ ಅನರ್ಹ ಶಾಸಕರು ಭಾಗವಹಿಸಲು ಅವಕಾಶವಿಲ್ಲ.

ಅನರ್ಹ ಶಾಸಕರಿಗೆ ಕೊಂಚ ರಿಲೀಫ್ ನೀಡಿದ ಸುಪ್ರೀಂಕೋರ್ಟ್ಅನರ್ಹ ಶಾಸಕರಿಗೆ ಕೊಂಚ ರಿಲೀಫ್ ನೀಡಿದ ಸುಪ್ರೀಂಕೋರ್ಟ್

ಮುಂದಿನ ತಿಂಗಳು ನಡೆಯಲಿರುವ ಮೇಯರ್ ಚುನಾವಣೆಯ ಮತದಾರರ ಪಟ್ಟಿಯಿಂದ ಅನರ್ಹ ಶಾಸಕರ ಹೆಸರನ್ನು ತೆಗೆದುಹಾಕಲಾಗಿದೆ. ಈಗಾಗಲೇ ತಮ್ಮ ಅನರ್ಹತೆ ನಿರ್ಧಾರದ ವಿರುದ್ಧ ಕಾನೂನು ಸಮರ ಸಾರಿರುವ ಶಾಸಕರಿಗೆ ಮತ್ತೊಂದು ಆಘಾತ ಎದುರಾಗಿದೆ.

ಬಿಬಿಎಂಪಿಗೆ ತೆರಿಗೆ ಬಾಕಿ ಉಳಿಸಿಕೊಂಡವರ ಪಟ್ಟಿ ಬಿಡುಗಡೆಬಿಬಿಎಂಪಿಗೆ ತೆರಿಗೆ ಬಾಕಿ ಉಳಿಸಿಕೊಂಡವರ ಪಟ್ಟಿ ಬಿಡುಗಡೆ

ಸೆಪ್ಟೆಂಬರ್ ತಿಂಗಳಲ್ಲಿ ಬಿಬಿಎಂಪಿ ಮೇಯರ್ ಚುನಾವಣೆ ನಡೆಯಲಿದೆ. ಮೇಯರ್ ಆಯ್ಕೆಯಲ್ಲಿ ಬಿಬಿಎಂಪಿ ಸದಸ್ಯರು, ಬೆಂಗಳೂರು ನಗರ ಭಾಗದಿಂದ ಆಯ್ಕೆಯಾದ ವಿಧಾನಸಭೆ ಸದಸ್ಯರು ಮತ್ತು ಸಂಸದರು ಭಾಗವಹಿಸುತ್ತಾರೆ.

Names Of Disqualified 5 MLAs Removed From BBMP Election Voters List

ಇತ್ತೀಚೆಗೆ ಸಮ್ಮಿಶ್ರ ಸರ್ಕಾರದ ವಿರುದ್ಧ ಸಿಡಿದೆದ್ದು ರಾಜೀನಾಮೆ ನೀಡಿದ ಬಳಿಕ ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ರಾಜಕೀಯ ನಾಯಕರ ಪೈಕಿ ಐವರು ಬೆಂಗಳೂರು ನಗರ ವ್ಯಾಪ್ತಿಯ ಶಾಸಕರಾಗಿದ್ದಾರೆ. ಕಾಂಗ್ರೆಸ್‌ನ ಕೆಆರ್ ಪುರದ ಶಾಸಕರಾಗಿದ್ದ ಬೈರತಿ ಬಸವರಾಜ್, ಯಶವಂತಪುರದ ಎಸ್‌ಟಿ ಸೋಮಶೇಖರ್, ಶಿವಾಜಿನಗರದ ರೋಷನ್ ಬೇಗ್ ಮತ್ತು ರಾಜರಾಜೇಶ್ವರಿ ನಗರದ ಎಂ. ಮುನಿರತ್ನ ಹಾಗೂ ಜೆಡಿಎಸ್‌ನ ಮಹಾಲಕ್ಷ್ಮೀ ಲೇಔಟ್‌ ಶಾಸಕರಾಗಿದ್ದ ಗೋಪಾಲಯ್ಯ ಅವರನ್ನು ಅನರ್ಹಗೊಳಿಸಲಾಗಿತ್ತು.

ಬಿಬಿಎಂಪಿ ನೂತನ ಆಯುಕ್ತರಾಗಿ ಬಿಎಚ್ ಅನಿಲ್ ಕುಮಾರ್ ನೇಮಕಬಿಬಿಎಂಪಿ ನೂತನ ಆಯುಕ್ತರಾಗಿ ಬಿಎಚ್ ಅನಿಲ್ ಕುಮಾರ್ ನೇಮಕ

ಈಗ ಬಿಬಿಎಂಪಿ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದೆ. ಈ ಮತದಾರರ ಪಟ್ಟಿಯಿಂದ ಅನರ್ಹಗೊಂಡ ಐವರು ಶಾಸಕರ ಹೆಸರನ್ನು ಕೈಬಿಡಲಾಗಿದೆ. ಜತೆಗೆ ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಸಂಸತ್‌ಗೆ ಆಯ್ಕೆಯಾದ ನೂತನ ಸಂಸದರ ಹೆಸರನ್ನು ಕೂಡ ಸೇರಿಸಲಾಗಿದೆ. ಪರಿಷ್ಕೃತ ಮತದಾರರ ಪಟ್ಟಿಯನ್ನು ಪ್ರಾದೇಶಿಕ ಚುನಾವಣಾ ಆಯುಕ್ತರಿಗೆ ರವಾನಿಸಲಾಗಿದೆ.

English summary
Names of five disqualified MLAs from Bengaluru city are removed from the BBMP election voters list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X