ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರ್‌ಆರ್‌ನಗರದ 13,544 ಮತದಾರರು ಪಟ್ಟಿಯಿಂದ ಹೊರಕ್ಕೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 19: ಜಾಲಹಳ್ಳಿ, ಮನೆಯೊಂದರಲ್ಲಿ 9,746 ಮತದಾರರ ಗುರುತಿನ ಚೀಟಿ ಪತ್ತೆಯಾದ ವಿಷಯಕ್ಕೆ ಸಂಬಂಧಿಸಿದಂತೆ ರಾಜರಾಜೇಶ್ವರಿನಗರದ 13,544 ಮಂದಿ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಯಲು ಚುನಾವಣಾ ಆಯೋಗ ಸೂಚನೆ ನೀಡಿದೆ.

ವಿಧಾನ ಸಭೆ ಚುನಾವಣೆ ವೇಳೆ ಜಾಲಹಳ್ಳಿ ಮನೆಯೊಂದರಲ್ಲಿ ಮತದಾರರ ಗುರುತಿನ ಚೀಟಿ ಪತ್ತೆಯಾಗಿತ್ತು ಅದು ಶಾಸಕ ಮುನಿರತ್ನ ಅವರಿಗೆ ಸೇರಿದ್ದು ಎನ್ನಲಾಗಿತ್ತು.

RR ನಗರ ಕ್ಷೇತ್ರ: 9746 ವೋಟರ್ ಐಡಿ ಪತ್ತೆ, ಆಯೋಗದಿಂದ ತುರ್ತು ಸುದ್ದಿಗೋಷ್ಠಿ RR ನಗರ ಕ್ಷೇತ್ರ: 9746 ವೋಟರ್ ಐಡಿ ಪತ್ತೆ, ಆಯೋಗದಿಂದ ತುರ್ತು ಸುದ್ದಿಗೋಷ್ಠಿ

ಇದೀಗ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವ ಕಾರಣ ಆರ್ಆರ್‌ ನಗರದ ಪತದಾರರ ಪಟ್ಟಿಯಿಂದ ಹೆಸರನ್ನು ಕೈಬಿಡಲಾಗುತ್ತಿದೆ. ಇದರಲ್ಲಿ 9,746 ಮಂದಿ ಅಧಿಕೃತ ಮತದಾರರೇ ಆಗಿದ್ದಾರೆ, ಅಷ್ಟೇ ಅಲ್ಲದೆ ಕೆಲವರು ಮೃತಪಟ್ಟಿದ್ದಾರೆ, ಇನ್ನೂ ಕೆಲವರು ವಿಳಾಸವನ್ನು ಬದಲಿಸಿದ್ದಾರೆ.

Names of 13,544 RR Nagar voters to be removed from rolls

ಚುನಾವಣಾ ಆಯೋಗವು ಪ್ರತಿಯೊಬ್ಬರ ಮನೆಗೆ ತೆರಳಿ ಪರಿಶೀಲನೆ ನಡೆಸುತ್ತಾರೆ. ಈಗಾಗಲೇ ಆರ್‌ಆರ್ ನಗರದ 8,213 ಮಂದಿ ಹೆಸರನ್ನು ತೆಗೆದು ಹಾಕಲಾಗಿದೆ. ಬೆಂಗಳೂರಿನಾದ್ಯಂತ 79,387 ಹೆಸರನ್ನು ತೆಗೆದುಹಾಕಲಾಗಿದೆ.

ಚುನಾವಣಾ ಗುರುತಿನ ಚೀಟಿ ಪತ್ತೆ ಪ್ರಕರಣ: ಮುನಿರತ್ನಗೆ ಜಾಮೀನು ಚುನಾವಣಾ ಗುರುತಿನ ಚೀಟಿ ಪತ್ತೆ ಪ್ರಕರಣ: ಮುನಿರತ್ನಗೆ ಜಾಮೀನು

ರಾಜರಾಜೇಶ್ವರಿ ನಗರ ವ್ಯಾಪ್ತಿಯಲ್ಲಿ ಒಟ್ಟು 4.7 ಲಕ್ಷ ಮಂದಿ ಮತದಾರರಿದ್ದಾರೆ.ಆರ್‌ಆರ್‌ ನಗರದ 380 ಪ್ರದೇಶಗಳಿಗೆ ತೆರಳಿ ಚುನಾವಣಾ ಆಯೋಗದ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.

English summary
Rajarajeshwari Nagar, which courted infamy when 9,746 voter ID cards were seized from a flat during the assembly elections earlier this year, has again hit the headlines ahead of the parliamentary polls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X