ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿದೇಶಕ್ಕೆ ಹಾರಲು ಅನುಮತಿ ಕೋರಿದ ಹ್ಯಾರಿಸ್ ಪುತ್ರ ನಲಪಾಡ್

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 23: ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರಕ್ಕೆ ಭಾರಿ ಸವಾಲಾಗಿದ್ದ ಶಾಂತಿನಗರ ಶಾಸಕ ಎನ್‌ಎ ಹ್ಯಾರಿಸ್ ಪುತ್ರ ನಲಪಾಡ್ ಹಲ್ಲೆ ಪ್ರಕರಣ ಈಗ ಮತ್ತೆ ಸುದ್ದಿಯಲ್ಲಿದೆ.

ಉದ್ಯಮಿ ವಿದ್ವತ್‌ ಮೇಲಿನ ಹಲ್ಲೆ ಪ್ರಕರಣದಲ್ಲಿ 116 ಕಾಲ ಜೈಲು ವಾಸ ಅನುಭವಿಸಿರುವ ನಲಪಾಡ್ ಇದೀಗ ಲಂಡನ್‌ಗೆ ಹಾರಲು ಅನುಮತಿ ಕೋರಿ ಹೈಕೋರ್ಟ್‌ಗೆ ಮೊರೆ ಹೋಗಿದ್ದಾರೆ. ಅರ್ಜಿ ಸ್ವೀಕರಿಸಿರುವ ಹೈಕೋರ್ಟ್‌ ಪ್ರಕರಣದ ಆಗಸ್ಟ್ 27ಕ್ಕೆ ವಿಚಾರಣೆಯನ್ನು ಮುಂದೂಡಿದೆ.

 ಮೊಹಮ್ಮದ್ ನಲಪಾಡ್ ಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್ ಮೊಹಮ್ಮದ್ ನಲಪಾಡ್ ಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್

ಮೊಹಮ್ಮದ್ ನಲಪಾಡ್ ಮತ್ತು ಆತನ ಸ್ನೇಹಿತರು ಫೆ.17ರಂದು ಯು.ಬಿ.ಸಿಟಿಯ ಫರ್ಜಿ ಕೆಫೆಯಲ್ಲಿ ವಿದ್ವತ್ ಮೇಲೆ ಹಲ್ಲೆ ನಡೆಸಿದ್ದರು. ಈ ಪ್ರಕರಣದಲ್ಲಿ ಮೊಹಮ್ಮದ್ ನಲಪಾಡ್ ಮತ್ತು ಇತರ 6 ಆರೋಪಿಗಳನ್ನು ಬಂಧಿಸಲಾಗಿತ್ತು. ಎಲ್ಲರೂ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು. ಈ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ನಡೆಸಿದ್ದರು.

600 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿತ್ತು. ಮೊಹಮ್ಮದ್ ನಲಪಾಡ್, ಅರುಣ್ ಬಾಬು, ಶ್ರೀ ಕೃಷ್ಣ, ಮಂಜುನಾಥ್, ಆಶ್ರಫ್, ಬಾಲಕೃಷ್ಣ, ಅಭಿಷೇಕ್, ನಾಸಿರ್ ಆರೋಪಿಗಳಾಗಿದ್ದಾರೆ. ಇದೀಗ ವಿದೇಶಕ್ಕೆ ತೆರಳಲು ಅನುಮತಿ ಕೋರಿ ನಲಪಾಡ್ ಹೈಕೋರ್ಟ್‌ ಗೆ ಮೊರೆ ಹೋಗಿದ್ದಾನೆ.

 ಏನಿದು ನಲಪಾಡ್ ಪ್ರಕರಣ?

ಏನಿದು ನಲಪಾಡ್ ಪ್ರಕರಣ?

116 ದಿನಗಳಕಾಲ ಜೈಲು ವಾಸ ಅನುಭವಿಸಿ ಜಾಮೀನಿನ ಮೇಲೆ ಬಿಡುಗಡೆಯಾಗರುವ ಮೊಹಮ್ಮದ್ ನಲಪಾಡ್ ಫೆಬ್ರವರಿ 17ರಂದು ಫರ್ಜಿಕೆಫೆಗೆ ಭೇಟಿ ಕೊಟ್ಟಿದ್ದ, ಅಲ್ಲಿ ಉದ್ಯಮಿ ಲೋಕನಾಥ್‌ ಪುತ್ರ ವಿದ್ವತ್‌ ಮೇಲೆ ಹಲ್ಲೆ ನಡೆಸಿದ್ದ ಎಂಬ ಆರೋಪದ ಮೇಲೆ ಜೈಲು ಸೇರಿದ್ದ, ಈ ಹಿನ್ನೆಲೆಯಲ್ಲಿ ಸುಮಾರು ಮೂರು ತಿಂಗಳುಗಳ ಕಾಲ ವಿಚಾರಣೆ ನಡೆಸಿದ ಸಿಸಿಬಿ ಪೊಲೀಸರು ಪ್ರಕರಣದ ಚಾರ್ಜ್ ಶೀಟ್‌ ಸಲ್ಲಿಸಿದ್ದರು. ಜೂನ್‌ 14ರಂದು ಜಾಮೀನು ದೊರೆತಿತ್ತು.

ನಲಪಾಡ್‌ನ ಐವರು ಸಹಚರರಿಗೆ ಸೆಷನ್ಸ್‌ ಕೋರ್ಟ್‌ನಿಂದ ಜಾಮೀನುನಲಪಾಡ್‌ನ ಐವರು ಸಹಚರರಿಗೆ ಸೆಷನ್ಸ್‌ ಕೋರ್ಟ್‌ನಿಂದ ಜಾಮೀನು

 ಮೂರು ಬಾರಿ ನಲಪಾಡ್ ಗೆ ಜಾಮೀನು ನಿರಾಕರಿಸಲಾಗಿತ್ತು

ಮೂರು ಬಾರಿ ನಲಪಾಡ್ ಗೆ ಜಾಮೀನು ನಿರಾಕರಿಸಲಾಗಿತ್ತು

ಆರೋಪಿ ನಲಪಾಡ್​, ಶಾಸಕ ಮೊಹಮ್ಮದ್ ಹ್ಯಾರಿಸ್​ ಪುತ್ರನಾಗಿರೋದ್ರಿಂದ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದೆಂದು ಈ ಹಿಂದೆ ಮೂರು ಬಾರಿ ಜಾಮೀನು ಅರ್ಜಿ ತಿರಸ್ಕಾರವಾಗಿತ್ತು. ಸದ್ಯ ಚಾರ್ಜ್​ಶೀಟ್ ಸಲ್ಲಿಕೆಯಾಗಿದ್ದು ಎಲ್ಲಾ ಸಾಕ್ಷಿಗಳ ಹೇಳಿಕೆ ಚಾರ್ಜ್​ಶೀಟ್​ನಲ್ಲಿ ಉಲ್ಲೇಖವಾಗಿದೆ.

ಮೊಹಮ್ಮದ್ ನಲಪಾಡ್‌ ಪ್ರಕರಣ : ವಿದ್ವತ್ ನೀಡಿದ ಘಟನೆಯ ವಿವರಮೊಹಮ್ಮದ್ ನಲಪಾಡ್‌ ಪ್ರಕರಣ : ವಿದ್ವತ್ ನೀಡಿದ ಘಟನೆಯ ವಿವರ

 ಜೂನ್‌ 14ರಂದು ನಲಪಾಡ್ ಗೆ ಜಾಮೀನು ಸಿಕ್ಕಿತ್ತು

ಜೂನ್‌ 14ರಂದು ನಲಪಾಡ್ ಗೆ ಜಾಮೀನು ಸಿಕ್ಕಿತ್ತು

ಮೊಹಮ್ಮದ್ ನಲಪಾಡ್ 116 ದಿನಗಳ ಜೈಲು ವಾಸ ಬಳಿಕ ಜೂನ್‌ 14ರಂದು ಜಾಮೀನು ದೊರೆತಿತ್ತು. ಲಕ್ಷ ರೂ ಬಾಂಡ್ ನ ಎರಡು ಶ್ಯೂರಿಟಿ, ಪಾಸ್ ಪೋರ್ಟ್ ಅನ್ನು ಕೋರ್ಟಿಗೆ ಒಪ್ಪಿಸುವಂತೆ ಷರತ್ತು ವಿಧಿಸಿ ಜಾಮೀನು ನೀಡಲಾಗಿತ್ತು. ನಲಪಾಡ್ ಪರ ವಕೀಲ ಬಿ ವಿ ಆಚಾರ್ಯ ವಾದ ಮಂಡಿಸಿದ್ದರು. ಜಾಮೀನಿಗಾಗಿ ಹಲವು ಸೆಷೆನ್ಸ್ ಕೋರ್ಟಿನಲ್ಲಿ ನಲಪಾಡ್ ಪರ ಅರ್ಜಿ ಸಲ್ಲಿಸಲಾಗಿತ್ತಾದರೂ, ಎಲ್ಲಾ ಅರ್ಜಿಗಳನ್ನೂ ವಜಾಗೊಳಿಸಲಾಗಿತ್ತು.

 ಹೈಕೋರ್ಟ್‌ ಅನುಮತಿ ಇಲ್ಲದೆ ದೇಶ ಬಿಟ್ಟು ಹೋಗುವಂತಿಲ್ಲ

ಹೈಕೋರ್ಟ್‌ ಅನುಮತಿ ಇಲ್ಲದೆ ದೇಶ ಬಿಟ್ಟು ಹೋಗುವಂತಿಲ್ಲ

ಮೊಹಮ್ಮದ್ ನಲಪಾಡ್ ನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿರುವ ಹೈಕೋರ್ಟ್‌ ಪಾಸ್‌ ಪೋರ್ಟ್‌ ವಶಕ್ಕೆ ಪಡೆದುಕೊಂಡಿತ್ತು, ಜತೆಗೆ 2 ಲಕ್ಷ ರೂ ಬಾಂಡ್ ನ ಎರಡು ಶ್ಯೂರಿಟಿ, ಪಾಸ್ ಪೋರ್ಟ್ ಅನ್ನು ಕೋರ್ಟಿಗೆ ಒಪ್ಪಿಸುವಂತೆ ಷರತ್ತು ವಿಧಿಸಿ ಜಾಮೀನು ನೀಡಲಾಹೈಕೋರ್ಟ್, ಅನುಮತಿ ಇಲ್ಲದೆ ಬೆಂಗಳೂರು ಬಿಟ್ಟು ತೆರಳುವಂತಿಲ್ಲ ಎಂದಿತ್ತು. ಇದೀಗ ಲಂಡನ್‌ ಗೆ ತೆರಳಲು ಅನುಮತಿ ಕೇಳಿದ್ದಾರೆ.

English summary
Mohammed Nalapad, son of congress MLA N.A.Haris has sought permission before high court to visit London to meet his brother. Nalapad was on bail in business man Vidvat assault case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X