• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಾಗ ಪಂಚಮಿ ನಿಮಿತ್ತ ಹೊಸಕೆರಹಳ್ಳಿಯಲ್ಲಿ ನಾಗಾರಾಧನೆ

By Mahesh
|

ಬೆಂಗಳೂರು, ಜುಲೈ, 25 : ಹಬ್ಬಗಳ ಮಾಸ ಆರಂಭವಾಗುತ್ತಿದೆ. ನಾಡಿಗೆ ದೊಡ್ಡದು ಎಂದು ಕರೆಸಿಕೊಳ್ಳುವ ನಾಗರ ಪಂಚಮಿಯೂ ಜುಲೈ 27 ಗುರುವಾರ ಎದುರಾಗಿದೆ.

ಆಚಾರ್ಯ ರಾಘವೇಂದ್ರ ಹೆಗಡೆ ನೇತೃತ್ವದಲ್ಲಿ ಹೊಸಕೆರೆಹಳ್ಳಿ ದತ್ತಾತ್ರೇಯ ನಗರದ ದತ್ತಾತ್ರೇಯ ದೇವಾಲಯದಲ್ಲಿ ನಾಗರ ಪಂಚಮಿ ನಿಮಿತ್ತ ಆಶ್ಲೇಷಾ ಬಲಿ, ನಾಗ ತನು ತರ್ಪಣ, ನಾಗ ಸುಬ್ರಹ್ಮಣ್ಯಾರಾಧನೆ ನಡೆಯಲಿದೆ.

ದೃಷ್ಟಿ ದೋಷ, ಚರ್ಮ ರೋಗ, ಸಂತಾನ ಹೀನತೆ, ಕುಟುಂಬದ ಸಾಮರಸ್ಯ, ಸಂಪತ್ತು ವೃದ್ಧಿ ಮುಂತಾದ ಕಾರಣಗಳ ಪರಿಹಾರಕ್ಕೋಸ್ಕರ ಭಕ್ತರು ಆದಿಶೇಷನ ಕೃಪೆಗೆ ಪಾತ್ರರಾಗಬಹುದು.

ಬೆಳಗ್ಗೆ 8 ಗಂಟೆಯಿಂದ ಧಾರ್ಮಿಕ ಕಾರ್ಯಕ್ರಮ ಆರಂಭವಾಗಲಿದೆ. ಭಕ್ತರು ನಾಗ ದೇವತೆಯ ಕೃಪೆಗೆ ಪಾತ್ರರಾಗಲು ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಪ್ರಧಾನ ಆಚಾರ್ಯ ರಾಘವೇಂದ್ರ ಹೆಗಡೆ 9986201603 ಮತ್ತು 8618640463 ಸಂಪರ್ಕಿಸಬಹುದು.

ನಾಗರಪಂಚಮಿ ಅಥವಾ ಪಂಚಮಿ ಹಬ್ಬ ವಿಶೇಷವಾಗಿ ಹಾವಿನ ಹುತ್ತಕ್ಕೆ ಹಾಲೆರೆಯುವುದು ಸಂಪ್ರದಾಯ. ಆ ಹಾಲನ್ನು ನಾಗರ ಹಾವು ಸೇವಿಸುತ್ತದೆ ಎನ್ನುವುದು ಬಲವಾದ ನಂಬಿಕೆ. ಈ ಹಬ್ಬವನ್ನು ಶ್ರಾವಣಮಾಸ ಆರಂಭವಾದ 5ನೇ ದಿನಕ್ಕೆ ಆಚರಿಸುತ್ತಾರೆ.

ನಾಗರ ಪಂಚಮಿ ದಿನದಂದು ಮಹಿಳೆಯರು ನಾಗರ ಪ್ರತಿಮೆಗೆ ವಿವಿಧ ರೀತಿಯಲ್ಲಿ ಪೂಜಾ ಕಾರ್ಯಗಳನ್ನು ಮಾಡುತ್ತಾರೆ. ಜತೆಗೆ ನೂತನವಾಗಿ ಮದುವೆಯಾಗಿರುವ ಹೆಣ್ಣು ಮಕ್ಕಳು ತವರಿಗೆ ಬಂದು ಪಂಚಮಿ ಹಬ್ಬವನ್ನು ಆಚರಿಸುವುದು ರೂಢಿ. ಈ ಹಬ್ಬವನ್ನು ಸಹೋದರ-ಸಹೋದರಿಯರ ಹಬ್ಬ ಎಂದು ಕರೆಯಲಾಗುತ್ತದೆ. ತಂಗಿಯರು ತಮ್ಮ ಅಣ್ಣನಿಗೆ ಪ್ರೀತಿಯಿಂದ ಹಾರೈಸುವುದು. ಅಣ್ಣನಾದವನು ತಂಗಿಗೆ ಪ್ರೀತಿಯ ಪ್ರತೀಕವಾಗಿ ಉಡುಗೊರೆ ನೀಡುವುದು ಹಲವು ಕಡೆಗಳಲ್ಲಿ ಕಂಡು ಬರುವ ಆಚರಣೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru: Nagara Panchami a festival of the worship of snakes will celebrate on July 27, 2017. Numbers of religious programmes will held at Bengaluru. Acharya Raghavendra Hegde conducting Ashelsha Bali and Nagaradhane at Hosakerehalli Dattatreya Temple. For more information please contact 9986201603.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more