ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಲಪಾಡ್ ಪ್ರಕರಣ : ಮಲ್ಯ ಆಸ್ಪತ್ರೆಗೆ ಎನ್.ಎ.ಹ್ಯಾರೀಸ್ ಭೇಟಿ

|
Google Oneindia Kannada News

ಬೆಂಗಳೂರು, ಫೆಬ್ರವರಿ 28 : ಶಾಂತಿನಗರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಎನ್.ಎ.ಹ್ಯಾರೀಸ್ ಮಲ್ಯ ಆಸ್ಪತ್ರೆಗೆ ಭೇಟಿ ನೀಡಿ ವಿದ್ವತ್ ಆರೋಗ್ಯ ವಿಚಾರಿಸಿದರು. ವಿದ್ವತ್ ಮೇಲೆ ಹ್ಯಾರೀಸ್ ಪುತ್ರ ನಲಪಾಡ್ ಹಲ್ಲೆ ನಡೆಸಿ 12 ದಿನಗಳು ಕಳೆದಿವೆ.

ಬುಧವಾರ ಎನ್‌.ಎ.ಹ್ಯಾರೀಸ್ ಮಲ್ಯ ಆಸ್ಪತ್ರೆಗೆ ಭೇಟಿ ನೀಡಿ ವಿದ್ವತ್ ಆರೋಗ್ಯ ವಿಚಾರಿಸಿದರು. ವಿದ್ವತ್ ತಂದೆ ಲೋಕನಾಥ್ ಅವರ ಜೊತೆ ಮಾತುಕತೆ ನಡೆಸಿದರು. ಕಳೆದ ಗುರುವಾರ ರಾತ್ರಿಯೂ ಹ್ಯಾರೀಸ್ ಪತ್ನಿ ಜೊತೆ ಆಸ್ಪತ್ರೆಗೆ ಭೇಟಿ ನೀಡಿದ್ದರು.

ನಲಪಾಡ್ ಪ್ರಕರಣಕ್ಕೆ 1 ವಾರ, 7 ಬೆಳವಣಿಗೆಗಳುನಲಪಾಡ್ ಪ್ರಕರಣಕ್ಕೆ 1 ವಾರ, 7 ಬೆಳವಣಿಗೆಗಳು

ವಿದ್ವತ್‌ಗೆ ಇನ್ನು ಒಂದು ವಾರಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಯಲಿದೆ ಎಂದು ಲೋಕನಾಥ್ ಹ್ಯಾರೀಸ್ ಅವರಿಗೆ ಮಾಹಿತಿ ನೀಡಿದ್ದಾರೆ. ವಿದ್ವತ್ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಪೊಲೀಸರ ಮುಂದೆ ಇನ್ನೂ ಹೇಳಿಕೆಯನ್ನು ನೀಡಿಲ್ಲ.

NA Haris visited Mallya hospital meets Vidvath

ಮಂಗಳವಾರ ಮೊಹಮ್ಮದ್ ನಲಪಾಡ್ ಜಾಮೀನು ಅರ್ಜಿಯ ಸಂದರ್ಭದಲ್ಲಿ ವಾದ ಮಂಡನೆ ಮಾಡಿದ್ದ ಹಿರಿಯ ವಕೀಲ ಸೆಬಾಸ್ಟಿಯನ್ ವಿದ್ವತ್ ಶೇ 90ರಷ್ಟು ಗುಣವಾಗಿದ್ದಾರೆ ಎಂದು ವಾದ ಮಂಡಿಸಿದ್ದರು.

ಮೊಹಮ್ಮದ್ ನಲಪಾಡ್ ಜಾಮೀನು ಅರ್ಜಿಯ ವಿಚಾರಣೆ 63ನೇ ಸೆಷನ್ಸ್ ಕೋರ್ಟ್‌ನಲ್ಲಿ ಪೂರ್ಣಗೊಂಡಿದ್ದು, ಮಾರ್ಚ್ 2ರಂದು ತೀರ್ಪು ಪ್ರಕಟವಾಗಲಿದೆ. ಎಲ್ಲಾ 7 ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

ನಲಪಾಡ್ ಗ್ಯಾಂಗ್ ದಾಳಿಗೆ ನಲುಗಿದ ವಿದ್ವತ್ ಯಾರು?ನಲಪಾಡ್ ಗ್ಯಾಂಗ್ ದಾಳಿಗೆ ನಲುಗಿದ ವಿದ್ವತ್ ಯಾರು?

English summary
Shanthinagar Congress MLA NA Harris on February 28 visited Mallya hospital, Bengaluru and met Vidvath, his father Lokanath. Vidvath attacked by Mohammed Nalapad and recovering in hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X