ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ!

|
Google Oneindia Kannada News

ಬೆಂಗಳೂರು, ಅ. 20: ಕೇಂದ್ರ ಚುನಾವಣಾ ಆಯೋಗದ ಕರ್ನಾಟಕದ ಮುಖ್ಯಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು ಮಂಡಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿದೆ.

ನೂರನೇ ಘಟಿಕೋತ್ಸವವನ್ನು ಆಚರಿಸಿಕೊಂಡ ರಾಜ್ಯದ ಮೊದಲ ವಿಶ್ವವಿದ್ಯಾನಿಲಯವಾಗಿರುವ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು ಡೆವಲಪ್ಮೆಂಟ್ ಸ್ಟಡಿ ವಿಭಾಗದ ಡಾ. ಶ್ರೀಜಯ್ ದೇವರಾಜ್ ಅರಸ್ ಅವರ ಮಾರ್ಗದರ್ಶನದಲ್ಲಿ ಮಹಾಪ್ರಬಂಧ ಮಂಡಿಸಿದ್ದರು.

Mysuru university awarded phd to ceo karnataka sanjeev kumar

ಹಿರಿಯ ಐಎಎಸ್ ಅಧಿಕಾರಿ ಆಗಿರುವ 58 ವರ್ಷದ ಸಂಜೀವ್ ಕುಮಾರ್ ಅವರು ಪ್ರಸ್ತುತ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವಾಗಲೇ ಉನ್ನತ ಅಧ್ಯಯನ ಮಾಡಿದ್ದಾರೆ. ಡಾ. ಶ್ರೀಜಯ್ ದೇವರಾಜ್ ಅರಸ್ ಅವರ ಮಾರ್ಗದರ್ಶನದಲ್ಲಿ 'MGNREGA, Rights, Processes and Sustainble Livelihood: A Critical Study in Karnataka' ಎಂಬ ಸಂಶೋಧನಾ ಪ್ರಬಂಧವನ್ನು ಮಂಡಿಸಿದ್ದರು. ನಿನ್ನೆ (ಅ. 19) ನಡೆದ ಮೈಸೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿದೆ.

Mysuru university awarded phd to ceo karnataka sanjeev kumar
English summary
The University of Mysore has conferred a doctorate on the Research Thesis presented by Sanjeev Kumar, Chief Electoral Officer of the Central Election Commission, Karnataka. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X