ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ರಸ್ತೆ, ಕೆಂಗೇರಿಗೆ ಮೆಟ್ರೋ ಸೇವೆ ಯಾವಾಗ ಆರಂಭ? ಇಲ್ಲಿದೆ ಉತ್ತರ

|
Google Oneindia Kannada News

ಬೆಂಗಳೂರು,ಜನವರಿ 15: ಮೈಸೂರು ರಸ್ತೆ ಹಾಗೂ ಕೆಂಗೇರಿಗೆ ಮೆಟ್ರೋ ಸೇವೆ ಯಾವಾಗ ಆರಂಭಗೊಳ್ಳಲಿದೆ ಎಂಬ ಪ್ರಶ್ನೆ ಇದೀಗ ಉತ್ತರ ಸಿಕ್ಕಿದೆ.

ಜೂನ್ ತಿಂಗಳಲ್ಲಿ ಮೈಸೂರು ರಸ್ತೆ-ಕೆಂಗೇರಿ ಮೆಟ್ರೋ ಸೇವೆ ಆರಂಭಗೊಳ್ಳಲಿದೆ. ಎರಡನೇ ಹಂತದಲ್ಲಿ 72 ಕಿ.ಮೀ ಮೆಟ್ರೋ ಕಾಮಗಾರಿ ನಡೆಯಲಿದೆ.

ಯಲಚೇನಹಳ್ಳಿ- ಅಂಜನಾಪುರ ವಿಸ್ತರಿತ ಮೆಟ್ರೋ ಮಾರ್ಗಕ್ಕೆ ಯಡಿಯೂರಪ್ಪ ಚಾಲನೆಯಲಚೇನಹಳ್ಳಿ- ಅಂಜನಾಪುರ ವಿಸ್ತರಿತ ಮೆಟ್ರೋ ಮಾರ್ಗಕ್ಕೆ ಯಡಿಯೂರಪ್ಪ ಚಾಲನೆ

ಇದರಲ್ಲಿ ಈಗಿರುವ ಮೆಟ್ರೋ ಮಾರ್ಗಗಳ ವಿಸ್ತರಣೆ ಸೇರಿದಂತೆ ಎಲೆಕ್ಟ್ರಾನಿಕ್ ಸಿಟಿಗೆ ಹೊಸ ಮಾರ್ಗ ಇರಲಿದೆ.7.5 ಕಿ.ಮೀಗಳ ಮೈಸೂರು ರಸ್ತೆ-ಕೆಂಗೇರಿ ಮಾರ್ಗವು ಜೂನ್ 2021ಕ್ಕೆಸಾರ್ವಜನಿಕರ ಬಳಕೆಗೆ ಲಭಿಸಲಿದೆ ಎಂದು ಸಚಿವ ಹರ್ದೀಪ್ ಪುರಿ ಭರವಸೆ ನೀಡಿದರು.

 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಯೋಜನೆ

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಯೋಜನೆ

ಹೊರ ವರ್ತುಲ ರಸ್ತೆಯಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಧ್ಯೆಯೇ 56 ಕಿ.ಮೀ ಯೋಜನೆಯ ಪ್ರಸ್ತಾವ ನಮ್ಮ ಮುಂದಿದೆ. ಸಿಲ್ಕ್‌ ಬೋರ್ಡ್-ಕೆಆರ್ ಪುರಂ ಮತ್ತು ಕೆಆರ್‌ ಪುರಂನಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 14,850 ಕೋಟಿ ವೆಚ್ಚವಾಗಲಿದೆ.

ಈ ಯೋಜನೆಗೆ ಖರ್ಚು ಇಲಾಖೆಯು ತಾತ್ವಿಕ ಒಪ್ಪಿಗೆ ನೀಡಿದೆ. ನಮ್ಮ ಸಚಿವಾಲಯ ಕೂಡ ಯೋಜನೆಯನ್ನು ಒಪ್ಪಿಕೊಂಡಿದ್ದು, ಹೂಡಿಕೆ ವಿಭಾಗಕ್ಕೆ ಪ್ರಸ್ತಾವನೆ ಕಳುಹಿಸಿಕೊಟ್ಟಿದೆ. ವಿಶ್ವದರ್ಜೆಯ ಸಾರಿಗೆ ಕಲ್ಪಿಸಲು ಮುಖ್ಯಮಂತ್ರಿಗಳು ಮೆಟ್ರೋ ಯೋಜನೆಗೆ ಒತ್ತು ನೀಡಲಿ ಎಂದು ಹೇಳಿದ್ದಾರೆ.

 ಎಂಜಿ ರಸ್ತೆ ಫೂಟ್ ಓವರ್ ಬ್ರಿಡ್ಜ್ ಲೋಕಾರ್ಪಣೆ

ಎಂಜಿ ರಸ್ತೆ ಫೂಟ್ ಓವರ್ ಬ್ರಿಡ್ಜ್ ಲೋಕಾರ್ಪಣೆ

ಇದೇ ವೇಳೆ ಎಂಜಿ ರಸ್ತೆ ನಿಲ್ದಾಣ ಮತ್ತು ನಾಗಸಂದ್ರ ನಿಲ್ದಾಣದ ಫೂಟ್ ಓವರ್ ಬ್ರಿಡ್ಜ್ ಅನ್ನು ಮುಖ್ಯಮಂತ್ರಿಗಳು ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಎಂ ಕೃಷ್ಣಪ್ಪ ವಹಿಸಿದ್ದರು.

 2025ಕ್ಕೆ 175 ಕಿ.ಮೀ ಮೆಟ್ರೋ ಜಾಲ

2025ಕ್ಕೆ 175 ಕಿ.ಮೀ ಮೆಟ್ರೋ ಜಾಲ

ಜಾಗತಿಕ ಮಟ್ಟದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿಗೆ ಅಗತ್ಯ ಮೂಲಭೂತಸೌಕರ್ಯ, ಸೇವೆ ಕಲ್ಪಿಸುವುದು ನಮ್ಮ ಕರ್ತವ್ಯ. ಇನ್ನೆರೆಡು ಮೂರು ವರ್ಷದಲ್ಲಿ ವಿಶ್ವದರ್ಜೆಯ ಸೌಲಭ್ಯ ಕಲ್ಪಿಸುವುದು ನಮ್ಮ ಗುರಿ. ಇದಕ್ಕಾಗಿ ಮಿಷನ್ 2022 ಮಾಡಿದ್ದೇವೆ. 75ನೇ ಸ್ವಾತಂತ್ರ್ಯೋತ್ಸವ ಆಚರಿಸುವ 2022ಕ್ಕೆ ಬೆಂಗಳೂರಿಗೆ 75 ಕಿ.ಮೀ ಮೆಟ್ರೋ ಜಾಲ ಮತ್ತು 2025ಕ್ಕೆ 175 ಕಿ.ಮೀಗಳ ಮೆಟ್ರೋ ಜಾಲ ನೀಡುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

Recommended Video

Yediyurappa ಮತ್ತು Vijayendra ನ ಮಾಯ ಜಾಲ!!| Oneindia Kannada
 ಉಪನಗರ ರೈಲು ಕಾಮಗಾರಿ ಶೀಘ್ರ ಪ್ರಾರಂಭ

ಉಪನಗರ ರೈಲು ಕಾಮಗಾರಿ ಶೀಘ್ರ ಪ್ರಾರಂಭ

ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಸದಾನಂದ ಗೌಡ ಮಾತನಾಡಿ, ಉಪನಗರ ರೈಲು ಯೋಜನೆಗೆ ಸಂಬಂಧಿಸಿದಂತೆ ಎರಡು ಸಭೆಗಳು ನಡೆದಿದ್ದು, ಶೀಘ್ರದಲ್ಲಿ ಉಪನಗರ ರೈಲಿನ ಕಾಮಗಾರಿ ಶೀಘ್ರವೇ ಸೇವೆ ಪ್ರಾರಂಭಗೊಳ್ಳಲಿದೆ. 2030ರ ಹೊತ್ತಿಗೆ ಬೆಂಗಳೂರಿನ ಜನಸಂಖ್ಯೆ ಮೂರು ಕೋಟಿಯಾಗುವ ಸಂಭವ ಇರುವ ಹಿನ್ನೆಲೆಯಲ್ಲಿ ಮೆಟ್ರೋ ಯೋಜನೆಗೆ ಹೆಚ್ಚಿನ ಮನ್ನಣೆ ನೀಡಬೇಕು ಎಂದರು.

English summary
In June Mysuru Road Kengeri Metro Service Will Resume.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X