ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ರಸ್ತೆ-ಕೆಂಗೇರಿ ಮೆಟ್ರೋ ಮಾರ್ಗ ಆ. 29 ರಂದು ಉದ್ಘಾಟನೆ

|
Google Oneindia Kannada News

ಬೆಂಗಳೂರು, ಆಗಸ್ಟ್‌ 21: ಬಹುನಿರೀಕ್ಷಿತ ಬೆಂಗಳೂರು ದಕ್ಷಿಣ ವಲಯದ ಮೈಸೂರು ರಸ್ತೆ-ಕೆಂಗೇರಿ ಮೆಟ್ರೋ ಮಾರ್ಗದಲ್ಲಿ ಮೆಟ್ರೋ ಸಂಚಾರವು ಆಗಸ್ಟ್ 29 ರಂದು (ಭಾನುವಾರ) ಮಧ್ಯಾಹ್ನ 12 ಗಂಟೆಗೆ ಉದ್ಘಾಟನೆ ನಡೆಯಲಿದೆ.

''ಕೇಂದ್ರ ನಗರ ಅಭಿವೃದ್ದಿ ಸಚಿವ ಹರ್ದೀಪ್ ಸಿಂಗ್ ಪುರಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಮೈಸೂರು ರಸ್ತೆ-ಕೆಂಗೇರಿ ಮಾರ್ಗ ಮೆಟ್ರೋ ಸಂಚಾರವನ್ನು ಆಗಸ್ಟ್ 29 ರಂದು (ಭಾನುವಾರ) ಮಧ್ಯಾಹ್ನ 12 ಗಂಟೆಗೆ ಉದ್ಘಾಟನೆ ನಡೆಸಲಿದ್ದಾರೆ,'' ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ತಿಳಿಸಿದ್ದಾರೆ.

ಜೂನ್ 21ರಿಂದ ಮೆಟ್ರೋ ಸಂಚಾರ ಆರಂಭ; ಪ್ರಯಾಣಿಕರಿಗೆ ಮಾರ್ಗಸೂಚಿ ಪ್ರಕಟಜೂನ್ 21ರಿಂದ ಮೆಟ್ರೋ ಸಂಚಾರ ಆರಂಭ; ಪ್ರಯಾಣಿಕರಿಗೆ ಮಾರ್ಗಸೂಚಿ ಪ್ರಕಟ

ಲೋಕಾರ್ಪಣೆಗೆ ಸಿದ್ದವಾಗುತ್ತಿರುವ ಬೆಂಗಳೂರು ದಕ್ಷಿಣ ವಲಯದ ಮೈಸೂರು ರಸ್ತೆ-ಕೆಂಗೇರಿ ಮೆಟ್ರೋ ಮಾರ್ಗವನ್ನು ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (ಸಿಎಂಆರ್‌ಎಸ್) ಆಗಸ್ಟ್ 11 ಮತ್ತು 12 ರಂದು ಪರಿಶೀಲನೆ ನಡೆಸಿದ್ದಾರೆ.

Mysore Road - Kengeri Metro line will be inaugurated on Aug 29 at 12 PM

ಪರಿಶೀಲನೆಯ ಬಳಿಕ ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (ಸಿಎಂಆರ್‌ಎಸ್) ಮೈಸೂರು ರಸ್ತೆ-ಕೆಂಗೇರಿ ಮೆಟ್ರೋ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರಕ್ಕೆ ಗ್ರೀನ್‌ ಸಿಗ್ನಲ್‌ ನೀಡಿದ್ದಾರೆ. ಹಾಗೆಯೇ ಗ್ರೀನ್‌ ಸಿಗ್ನಲ್‌ ನೀಡುವ ಮೂಲಕ ಯೋಜನೆಯ ಉದ್ಘಾಟನೆಗೆ ರಾಜ್ಯ ಮತ್ತು ಕೇಂದ್ರ ನಾಯಕರೊಂದಿಗೆ ಸಮನ್ವಯ ಸಾಧಿಸುವಂತೆ ಅಧಿಕಾರಿಗಳಿಗೆ ಪ್ರೇರೇಪಣೆ ನೀಡಿದ್ದರು.

ಮೈಸೂರು ರಸ್ತೆ-ಕೆಂಗೇರಿ ಮೆಟ್ರೋ ಮಾರ್ಗವನ್ನು ಮೆಟ್ರೋ ರೈಲು ಸುರಕ್ಷತೆಯ ಪರಶೀಲನೆಯ ಬಳಿಕ ಮೆಟ್ರೋ ಸಂಚಾರಕ್ಕೆ ಅನುಮೋದನೆ ದೊರೆತರೆ ಎರಡು ವಾರಗಳಲ್ಲಿ ಮೆಟ್ರೋ ರೈಲು ಸಂಚಾರವನ್ನು ಮೈಸೂರು ರಸ್ತೆ-ಕೆಂಗೇರಿ ಮೆಟ್ರೋ ಮಾರ್ಗದಲ್ಲಿ ಆರಂಭ ಮಾಡಲು ಅಧಿಕಾರಿಗಳು ಸಿದ್ದರಾಗಿದ್ದರು. ಇತ್ತೀಚೆಗೆ ಅನುಮೋದನೆ ದೊರೆತ ಹಿನ್ನೆಲೆ ಈಗ ಮೆಟ್ರೋ ರೈಲು ಸಂಚಾರ ಮಾರ್ಗ ಉದ್ಘಾಟನೆ ದಿನಾಂಕ ನಿಗದಿ ಮಾಡಲಾಗಿದೆ.

ಬೆಂಗಳೂರು ಮೆಟ್ರೋ ಕಾರ್ಡಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು! ಬೆಂಗಳೂರು ಮೆಟ್ರೋ ಕಾರ್ಡಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು!

ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ್ದ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್, "ಇಂದು (ಸೋಮವಾರ) ಸಂಜೆ ಮೈಸೂರು ರಸ್ತೆ-ಕೆಂಗೇರಿ ಮೆಟ್ರೋ ಮಾರ್ಗದಲ್ಲಿ ಮೆಟ್ರೋ ಕಾರ್ಯಾಚರಣೆ ಆರಂಭಕ್ಕೆ ನಾವು ಷರತ್ತುಬದ್ಧ ಅನುಮೋದನೆಯನ್ನು ಸ್ವೀಕರಿಸಿದ್ದೇವೆ," ಎಂದು ತಿಳಿಸಿದ್ದರು. ಹಾಗೆಯೇ ಮಾಧ್ಯಮಗಳು ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭದ ಬಗ್ಗೆ ಪ್ರಶ್ನೆಗಳನ್ನು ಕೇಳಿದಾಗ, "ನಾವು ಕೇಂದ್ರ ಸಚಿವರುಗಳು ಹಾಗೂ ರಾಜ್ಯ ಸಚಿವರುಗಳ ಸಂಪರ್ಕ ಮಾಡುತ್ತೇವೆ. ಎಲ್ಲವೂ ನಾವು ಅಂದುಕೊಂಡತ್ತೆ ನಡೆದರೆ ಸಾಕು," ಎಂದು ಆಶಾವಾದ ವ್ಯಕ್ತಪಡಿಸಿದ್ದರು.

ಇನ್ನು ಈ ಹಿಂದೆ ವರಮಹಾಲಕ್ಷ್ಮಿ ಹಬ್ಬದ ಶುಭ ದಿನದಂದು ಕಾರ್ಯಾಚರಣೆ ಆರಂಭಿಸುವ ಬಗ್ಗೆ ಮಾತುಗಳು ಕೇಳಿ ಬಂದಿದ್ದವು. "ಆದರೆ ಕಡಿಮೆ ಅವಧಿಯಲ್ಲಿ ರಾಜ್ಯ ಮತ್ತು ಕೇಂದ್ರ ನಾಯಕರನ್ನು ಒಗ್ಗೂಡಿಸುವುದು ಕಷ್ಟವಾಯಿತು," ಎಂದು ಮೂಲಗಳು ತಿಳಿಸಿದೆ.

(ಒನ್‌ ಇಂಡಿಯಾ)

Recommended Video

ಮೈದಾನದಲ್ಲಿ Ganguly ಹಾಗೂ Virat ನಡುವೆ ಗುಸು ಗುಸು ಮಾತು | Oneindia Kannada

English summary
Bengaluru Metro's Mysuru Road-Kengeri Line will be inaugurated on Aug 29 (Sunday) at 12 noon. Union Minister Hardeep Singh Puri & CM B S Bommai to launch says BMRCL MD Anjum Parwez.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X