ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

10 ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚುತ್ತಿದೆ ದೃಷ್ಟಿದೋಷ, ಪರಿಹಾರವೇನು?

|
Google Oneindia Kannada News

ಬೆಂಗಳೂರು, ಮೇ 29: ಹತ್ತು ವರ್ಷದೊಳಗಿನ ಮಕ್ಕಳಲ್ಲಿ ದೃಷ್ಟಿದೋಷ ಹೆಚ್ಚಾಗುತ್ತಿರುವುದು ಪೋಷಕರಲ್ಲಿ ಆತಂಕ ಉಂಟು ಮಾಡಿದೆ.

ಅಪೊಲೊ ಆಸ್ಪತ್ರೆ ನಡೆಸಿರುವ ಸಮೀಕ್ಷೆಯಲ್ಲಿ ಈ ವಿಷಯ ಬಹಿರಂಗಗೊಂಡಿದೆ. 1227 ಮಕ್ಕಳು 3-4 ವರ್ಷಗಳಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುತ್ತಿದ್ದಾರೆ. 2008 ಹಾಗೂ 2018ರ ಡಾಟಾವನ್ನು ಹೋಲಿಕೆ ಮಾಡಿದರೆ, 7-8 ವರ್ಷದ ಮಕ್ಕಳು ಕನ್ನಡಕವನ್ನು ಧರಿಸುತ್ತಿದ್ದಾರೆ.

ಐದು ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚುತ್ತಿದೆ ಕಣ್ಣಿನ ಕ್ಯಾನ್ಸರ್‌: ಆತಂಕ ಐದು ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚುತ್ತಿದೆ ಕಣ್ಣಿನ ಕ್ಯಾನ್ಸರ್‌: ಆತಂಕ

ಕಳೆದ ಐದು ವರ್ಷಗಳಿಂದ 4-5 ವರ್ಷದ ಮಕ್ಕಳು ಕೂಡ ದೃಷ್ಟಿ ಮಂಜಾಗಿರುವ ಕುರಿತು ವೈದ್ಯರ ಬಳಿ ಬಂದಿದ್ದಾರೆ. ಅತಿ ಹೆಚ್ಚು ಟಿವಿ ವೀಕ್ಷಣೆ, ಮೊಬೈಲ್ , ಲ್ಯಾಪ್‌ಟಾಪ್ ವೀಕ್ಷಣೆಯಿಂದಾಗಿ ಈ ತೊಂದರೆ ಬರುತ್ತಿದೆ ಅದಕ್ಕೆ 'ಮಯೋಫಿಯಾ' ಎಂದು ಹೇಳುತ್ತಾರೆ. ಹೊರಾಂಗಣ ಆಟವನ್ನು ಸಂಪೂರ್ಣವಾಗಿ ಮರೆತೇ ಬಿಟ್ಟಿದ್ದಾರೆ.

Myopiya increase up to 6 percent in children

ಅಪೊಲೊ ಆಸ್ಪತ್ರೆಯ ವೈದ್ಯೆ ಡಾ. ಶಾಲಿನಿ ಶೆಟ್ಟಿ ಹೇಳುವ ಪ್ರಕಾರ, ನಾಲ್ಕೈದು ವರ್ಷದ ಮಕ್ಕಳು ಮಯೋಫಿಯಾದಿಂದ ಬಳಲುತ್ತಿದ್ದು ಚಿಕಿತ್ಸೆಗೆ ಆಸ್ಪತ್ರೆಗೆ ಬಂದಾಗ ನನಗೆ ಶಾಕ್ ಆಗಿತ್ತು. ಬಾಲಕ ಸುಮಾರು ಏಳು ಗಂಟೆಗಳ ಕಾಲ ಲ್ಯಾಪ್‌ಟಾಪ್ ಮುಂದೆ ಕಾಲ ಕಳೆಯುತ್ತಾನೆ ಎಂದು ಪೋಷಕರು ಹೇಳಿದ್ದರು.

ಪೋಷಕರು ಹಾಗೂ ಶಿಕ್ಷಕರು ಆದಷ್ಟು ಮಕ್ಕಳ ಕಣ್ಣಿಗೆ ಹಾನಿಯಾಗದಂತೆ ನೋಡಿಕೊಳ್ಳಬೇಕು. ಹೆಚ್ಚು ಹೊತ್ತು ಮೊಬೈಲ್, ಟಿವಿ ಮುಂದೆ ಕಾಲಕಳೆಯಲು ಬಿಡಬೇಡಿ, ಮನೆಯಿಂದ ಹೊರಗೆ ಕಳುಹಿಸಿ ಸ್ನೇಹಿತರೊಂದಿಗೆ ಆಟವಾಡಿ ಸಮಯ ಕಳೆಯಲು ಬಿಡಿ ಇಲ್ಲವಾದಲ್ಲಿ ನಿಮ್ಮ ಮಕ್ಕಳನ್ನು ಕಳೆದುಕೊಳ್ಳಬೇಕಾದೀತು ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರತಿ ವರ್ಷವೂ 0.5 ಪಾಯಿಂಟ್ಸ್ ಏರುತ್ತಿತ್ತು, ಆದರೆ ಅದು ಈಗ 1.15 ಪಾಯಿಂಟ್ ಅಷ್ಟು ಏರಿಕೆಯಾಗಿದೆ. ಈಗ ಅದು 3 ಪಾಯಿಂಟ್‌ಗೆ ಬಂದು ನಿಂತಿದೆ ಇದೇ ರೀತಿ ಏರಿಕೆಯಾದಲ್ಲಿ ಮಕ್ಕಳು ದೃಷ್ಟಿಯನ್ನು ಶಾಶ್ವತವಾಗಿ ಕಳೆದುಕೊಳ್ಳಬೇಕಾಗಬಹುದು ಎಂದು ಹೇಳಿದ್ದಾರೆ.

English summary
Cases of high myopia extreme nearsightedness leading to visionthreatening complications — are rising among Bengaluru children, a study by a city hospital has found.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X