ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟ್ವಿಟ್ಟರ್ ಖಾತೆ ಹ್ಯಾಕ್, ಗಾಂಧೀಜಿ ಕೊಲೆ ಸಮರ್ಥನೀಯವಲ್ಲ : ಅನಂತಕುಮಾರ್ ಹೆಗಡೆ

|
Google Oneindia Kannada News

ಗಳೂರು, ಮೇ 17: ಬಿಜೆಪಿಯ 'ಉರಿ ನಾಲಗೆ' ಯ ಮುಖಂಡ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರು ತಮ್ಮ ಮೈಕ್ರೋಬ್ಲಾಗಿಂಗ್ ತಾಣ ಟ್ವಿಟ್ಟರ್ ಖಾತೆ ಹ್ಯಾಕ್ ಅಗಿತ್ತು ಎಂದಿದ್ದಾರೆ.

ಟ್ವೀಟ್ ಗಳಿಂದ ಬೇಸರವಾಗಿದ್ದರೆ ಕ್ಷಮೆಯಾಚಿಸುತ್ತೇನೆ: ಸಂಸದ ನಳೀನ್ ಟ್ವೀಟ್ ಗಳಿಂದ ಬೇಸರವಾಗಿದ್ದರೆ ಕ್ಷಮೆಯಾಚಿಸುತ್ತೇನೆ: ಸಂಸದ ನಳೀನ್

ಮಹಾತ್ಮಾ ಗಾಂಧೀಜಿ ಅವರನ್ನು ಕೊಂದ ನಾಥೂರಮ್ ಗೋಡ್ಸೆ ಪರ ಅನೇಕ ಬಿಜೆಪಿ ನಾಯಕರು ಟ್ವೀಟ್ ಮಾಡಿದ್ದರು. ಅದರಂತೆ ಅನಂತ್ ಕುಮಾರ್ ಹೆಗಡೆ ಅವರು ಕೂಡಾ ಟ್ವೀಟ್ ಮಾಡಿದ್ದರು. ಸದ್ಯ ಟ್ವೀಟ್ ಡಿಲೀಟ್ ಆಗಿದೆ.

ನನ್ನ ಖಾತೆ ಹ್ಯಾಕ್ ಅಗಿದೆ. ಮಹಾತ್ಮಾ ಗಾಂಧೀಜಿ ಅವರ ಕೊಲೆಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವೇ ಇಲ್ಲ, ಕೊಲೆಗಾರನ ಬಗ್ಗೆ ಕರುಣೆ ಇಲ್ಲ, ಗಾಂಧೀಜಿ ಅವರ ಬಗ್ಗೆ ಅಪಾರ ಗೌರವವಿದೆ ಹಾಗೂ ದೇಶಕ್ಕೆ ಗಾಂಧೀಜಿ ಕೊಟ್ಟಿರುವ ಕೊಡುಗೆಯನ್ನು ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ.

ಗೋಡ್ಸೆಗಿಂತ ರಾಜೀವ್ ಗಾಂಧಿ ಕ್ರೂರಿ: ಸಂಸದ ನಳೀನ್ ಟ್ವೀಟ್ ಗೋಡ್ಸೆಗಿಂತ ರಾಜೀವ್ ಗಾಂಧಿ ಕ್ರೂರಿ: ಸಂಸದ ನಳೀನ್ ಟ್ವೀಟ್

ಆದರೆ, ಇದಕ್ಕೂ ಮುನ್ನ ಮೋದಿಲೈ ಎಂದು ಆಕ್ಸ್ ಫರ್ಡ್ ಡಿಕ್ಷನರಿಯಲ್ಲಿ ಹುಡುಕಿ ಎಂದಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನು ತರಾಟೆಗೆ ತೆಗೆದುಕೊಂಡು ಟ್ವೀಟ್ ಮಾಡಿದ್ದಾರೆ.

ಗೊಡ್ಸೆ, ಗಾಂಧೀಜಿ, ರಾಜೀವ್ ಗಾಂಧಿ ಬಗ್ಗೆ ಹೇಳಿಕೆ, ಟ್ವೀಟ್ ಮೂಲಕ ಪ್ರಜ್ಞಾ ಸಿಂಗ್ ಠಾಕೂರ್, ನಳೀನ್ ಕುಮಾರ್ ಕಟೀಲು ಸದ್ಯ ಟ್ರೆಂಡಿಂಗ್ ನಲ್ಲಿದ್ದಾರೆ. ಈ ನಡುವೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಗರಂ ಆಗಿದ್ದು, ವೈಯಕ್ತಿಕ ಅಭಿಪ್ರಾಯಕ್ಕೆ ಆಯಾ ನಾಯಕರೇ ಹೊಣೆ ಎಂದಿದ್ದಾರೆ.

ನನ್ನ ಖಾತೆ ಹ್ಯಾಕ್ ಆಗಿದೆ

ನನ್ನ ಖಾತೆ ನಿನ್ನೆಯಿಂದ ಹ್ಯಾಕ್ ಆಗಿದೆ. ಮಹಾತ್ಮಾ ಗಾಂಧೀಜಿ ಅವರ ಕೊಲೆಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವೇ ಇಲ್ಲ, ಕೊಲೆಗಾರನ ಬಗ್ಗೆ ಕರುಣೆ ಇಲ್ಲ, ಗಾಂಧೀಜಿ ಅವರ ಬಗ್ಗೆ ಅಪಾರ ಗೌರವವಿದೆ ಹಾಗೂ ದೇಶಕ್ಕೆ ಗಾಂಧೀಜಿ ಕೊಟ್ಟಿರುವ ಕೊಡುಗೆಯನ್ನು ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ.

ಕಳೆದವಾರದಿಂದ ಟ್ವಿಟ್ಟರ್ ವರ್ಕ್ ಆಗ್ತಿಲ್ಲ

ಕಳೆದ ಒಂದು ವಾರದಿಂದ ನನ್ನ ಟ್ವಿಟ್ಟರ್ ಖಾತೆ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಈ ಬಗ್ಗೆ ನನ್ನ ಟೈಮ್ ಲೈನ್ ನಲ್ಲಿ ಪೋಸ್ಟ್ ಹಾಕಿದ್ದೆ. ನನ್ನ ಹಳೆ ಪೋಸ್ಟ್ ಡಿಲೀಟ್ ಆಗಿದೆ. ನನ್ನ ಹೆಸರಿನಲ್ಲಿ ಬಂದ ಟ್ವೀಟ್ ಗಳ ಬಗ್ಗೆ ವಿಷಾದವಿದೆ.

ರಾಹುಲ್ ಗೆ ತರಾಟೆ ತೆಗೆದುಕೊಂಡ ಹೆಗಡೆ

ಮೋದಿಲೈ ಎಂದು ಆಕ್ಸ್ ಫರ್ಡ್ ಡಿಕ್ಷನರಿಯಲ್ಲಿ ಹುಡುಕಿ ಎಂದಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನು ತರಾಟೆಗೆ ತೆಗೆದುಕೊಂಡು ಟ್ವೀಟ್ ಮಾಡಿದ್ದಾರೆ. ಅಂತಾರಾಷ್ಟ್ರೀಯ ಮೂರ್ಖ ಕೌಶಲ್ಯ ಮಾಸ್ಟರ್ ನೀವು, ಇದೇ ರೀತಿ ಹುಚ್ಚಾಟ ಮುಂದುವರೆಸಿ ಎಂದು ಗೇಲಿ ಮಾಡಿದ್ದಾರೆ.

ನಳೀನ್ ಕುಮಾರ್ ರಿಂದ ಕ್ಷಮೆಯಾಚನೆ

ನನ್ನ ಟ್ವೀಟ್ ಗಳಿಂದ ಯಾರಿಗಾದರೂ ಅದರಿಂದ ಬೇಸರವಾಗಿದ್ದಲ್ಲಿ ನಾನು ಕ್ಷಮೆಯಾಚಿಸುತ್ತೇನೆ ಎಂದು ಇತ್ತೀಚಿನ ಟ್ವೀಟ್ ನಲ್ಲಿ ಕ್ಷಮೆ ಕೋರಿದ್ದಾರೆ.

English summary
Union Minister Anantkumar Hegde said his twitter accont has been hacked and clarified about Gandhiji's murder tweet. There is no question of justifying Gandhi ji's murder. There can be no sympathy or justification of Gandhi ji's murder.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X