ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನನ್ನ ಮಗುವಿನ ವಯಸ್ಸು ಕೂಡ ಅದೇ ಎಂದ 'ಮಹಾ ದಾನಿ' ಮಾತು ಕೇಳಿ

|
Google Oneindia Kannada News

ಬೆಂಗಳೂರು, ಜೂನ್ 9: ಅಕ್ಯುಟ್ ಲಿಂಫೋಬ್ಲಾಸ್ಟಿಕ್ ಲ್ಯುಕೇಮಿಯಾದಿಂದ (ಗಂಭೀರ ಸ್ವರೂಪದ ಕ್ಯಾನ್ಸರ್) ಬಳಲುತ್ತಿರುವ ಮಗುವಿಗೆ ನಲವತ್ತೆರಡು ವರ್ಷದ ಹಿರಿಯ ಟೇಬಲ್ ಟೆನಿಸ್ ಆಟಗಾರ ಹರ್ ಪ್ರೀತ್ ಸಿಂಗ್ ಬಮ್ರಾ ಅವರು ರಕ್ತ ಕಾಂಡ ಕೋಶವನ್ನು ದಾನ ಮಾಡಿದ್ದಾರೆ. ಕಳೆದ ಮಾರ್ಚ್ ನಲ್ಲಿ ಶಸ್ತ್ರಚಿಕಿತ್ಸೆ ನಡೆದಿತ್ತು. ಬಮ್ರಾ ಅವರು ದಾನಿ ಎಂದು ನೋಂದಣಿ ಮಾಡಿದ ಆರು ವರ್ಷದ ನಂತರ ದಾನ ಮಾಡಿದ್ದಾರೆ.

ರಕ್ತ ಕಾಂಡ ಕೋಶ ದಾನ ಮಾಡಿದ ವಾರದ ನಂತರ ಬೆಂಗಳೂರಿನಲ್ಲಿ ಬಮ್ರಾ ಟೇಬಲ್ ಟೆನಿಸ್ ಪಂದ್ಯಾವಳಿ ಆಡಿ, ಅದರಲ್ಲಿ ಎರಡನೇ ಸ್ಥಾನ ಪಡೆದಿದ್ದರು. ಈ ರೀತಿ ದಾನದಿಂದ ಆತನ ಸಾಮರ್ಥ್ಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂಬುದನ್ನು ಉದಾಹರಿಸಲು ಹೀಗೆ ಹೇಳಿದ್ದಾರೆ.

ಕಿದ್ವಾಯಿ ಆಸ್ಪತ್ರೆಯ ಧರ್ಮಶಾಲೆ ನವೀಕರಿಸಿದ ಇನ್ಫೋಸಿಸ್ಕಿದ್ವಾಯಿ ಆಸ್ಪತ್ರೆಯ ಧರ್ಮಶಾಲೆ ನವೀಕರಿಸಿದ ಇನ್ಫೋಸಿಸ್

ದಾತ್ರಿ ಎಂಬ ಸಂಸ್ಥೆಯ ಬಳಿ ಬಮ್ರಾ ನೋಂದಣಿ ಮಾಡಿಸಿದ್ದರು. ಆರು ವರ್ಷದ ಮಗುವಿಗೆ ಬಮ್ರಾ ಅವರ ರಕ್ತ ಕೋಶ ಹೊಂದಾಣಿಕೆ ಆಗುತ್ತದೆ ಎಂದು ಕರೆ ಹೋಗಿದೆ. ಅದು ಬಿಟ್ಟರೆ ಬೇರೆ ಯಾವ ಮಾಹಿತಿಯನ್ನು ಬಯಲು ಮಾಡಿಲ್ಲ. "ನನಗೂ ಅದೇ ವಯಸ್ಸಿನ ಮಗು ಇದೆ. ಆದ್ದರಿಂದ ಈ ರೀತಿ ದಾನ ಮಾಡಿರುವುದಕ್ಕೆ ಸಂತೋಷವಾಗಿದ್ದೇನೆ" ಎಂದಿದ್ದಾರೆ ಬಮ್ರಾ. ಈ ದಾನದಿಂದ ಬಮ್ರಾ ಅವರ ಜೀವನದಲ್ಲಿ ಯಾವುದೇ ಪ್ರತಿಕೂಲ ಪರಿಣಾಮ ಆಗಿಲ್ಲ.

Cancer

ಬಮ್ರಾರಂಥ ವ್ಯಕ್ತಿಗಳು ದಾನ ಮಾಡಿದ ಮೇಲೆ ಆಟ ಆಡುವುದರಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ. ದೈಹಿಕ ಸಾಮರ್ಥ್ಯ, ಚೈತನ್ಯ ಏನೂ ಕಡಿಮೆ ಆಗುವುದಿಲ್ಲ. ಹಲವರಿಗೆ ಅವರು ಮಾದರಿ ಎಂದು ವೈದ್ಯರು ಹೇಳುತ್ತಾರೆ.

English summary
My child age is also the same, says blood stem cells donor Harpreeth Singh Bamrah, from Bengaluru. Here is an interesting story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X