ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುತ್ತೋಟ್‌ ಫೈನಾನ್ಸ್‌ನಲ್ಲಿ 77 ಕೆಜಿ ಚಿನ್ನ ದರೋಡೆ; ಇಬ್ಬರ ಬಂಧನ

|
Google Oneindia Kannada News

ಬೆಂಗಳೂರು, ಜನವರಿ 01 : ಬೆಂಗಳೂರಿನ ಮುತ್ತೋಟ್ ಫೈನಾನ್ಸ್‌ನಲ್ಲಿ ದರೋಡೆ ಮಾಡಿದ್ದ ಗುಂಪಿನಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಆರೋಪಿಗಳಿಂದ 8 ಕೆಜಿ ಚಿನ್ನ ವಶಕ್ಕೆ ಪಡೆದುಕೊಳ್ಳಲಾಗಿದ್ದು, ಉಳಿದ ಇಬ್ಬರಿಗಾಗಿ ಹುಡುಕಾಟ ನಡೆದಿದೆ.

ಚಿನ್ನ, ಬೆಳ್ಳಿಯಲ್ಲ, ಈರುಳ್ಳಿ ಕಳುವಾಗಿದ್ದಕ್ಕೆ ಪೊಲೀಸ್ ಠಾಣೆಯಲ್ಲಿ ಕೇಸ್! ಚಿನ್ನ, ಬೆಳ್ಳಿಯಲ್ಲ, ಈರುಳ್ಳಿ ಕಳುವಾಗಿದ್ದಕ್ಕೆ ಪೊಲೀಸ್ ಠಾಣೆಯಲ್ಲಿ ಕೇಸ್!

ಬೆಂಗಳೂರಿನ ಪುಲಿಕೇಶಿ ನಗರ ಪೊಲೀಸರ ವಿಶೇಷ ತಂಡ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದೆ. ಫ್ರೇಜರ್ ಟೌನ್‌ನಲ್ಲಿರುವ ಮುತ್ತೋಟ್ ಫೈನಾನ್ಸ್‌ನಲ್ಲಿ ಇಬ್ಬರೂ ಭದ್ರತಾ ಸಿಬ್ಬಂದಿಯಾಗಿದ್ದರು. ಡಿಸೆಂಬರ್ 24ರಂದು ದರೋಡೆ ಮಾಡಿ 77 ಕೆಜಿ ಚಿನ್ನ ದರೋಡೆ ಮಾಡಲಾಗಿತ್ತು.

ಬೆಂಗಳೂರು: 16 ಕೋಟಿ ಮೌಲ್ಯದ 70 ಕೆಜಿ ಚಿನ್ನ ಕದ್ದ ಐನಾತಿ ಕಳ್ಳರುಬೆಂಗಳೂರು: 16 ಕೋಟಿ ಮೌಲ್ಯದ 70 ಕೆಜಿ ಚಿನ್ನ ಕದ್ದ ಐನಾತಿ ಕಳ್ಳರು

ಮುತ್ತೋಟ್ ಫೈನಾನ್ಸ್‌ ಶೌಚಾಲಯದ ಗೋಡೆ ಕೊರೆದು 77 ಕೆಜಿ ಚಿನ್ನ ದರೋಡೆ ಮಾಡಿ ಪಿಜಿಯಲ್ಲಿ ಇಡಲಾಗಿತ್ತು. ಇದರಲ್ಲಿ ಇಬ್ಬರು ಭದ್ರತಾ ಸಿಬ್ಬಂದಿಗಳಿಗೆ 8 ಕೆಜಿ ಚಿನ್ನವನ್ನು ಹಂಚಿಕೆ ಮಾಡಲಾಗಿತ್ತು. ನೇಪಾಳ-ಭಾರತ ಗಡಿ ಪ್ರದೇಶದಲ್ಲಿ ಇಬ್ಬರನ್ನು ಬಂಧಿಸಲಾಗಿದೆ.

ಗಿನ್ನಿಸ್ ದಾಖಲೆ ಸೇರಿದ ಚೀನಾದ ಚಿನ್ನ ಲೇಪಿತ ಶೌಚಾಲಯ ಗಿನ್ನಿಸ್ ದಾಖಲೆ ಸೇರಿದ ಚೀನಾದ ಚಿನ್ನ ಲೇಪಿತ ಶೌಚಾಲಯ

12 ಜನರ ತಂಡದಿಂದ ದರೋಡೆ

12 ಜನರ ತಂಡದಿಂದ ದರೋಡೆ

12 ಜನರ ತಂಡ ಫ್ರೇಜರ್ ಟೌನ್‌ನಲ್ಲಿರುವ ಮುತ್ತೋಟ್ ಫೈನಾನ್ಸ್‌ ದರೋಡೆ ಮಾಡಿದೆ. ಎಲ್ಲಾ ಆರೋಪಿಗಳು ನೇಪಾಳ ಮೂಲದವರು. ಮುತ್ತೋಟ್ ಫೈನಾನ್ಸ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿರುವ ಇಬ್ಬರನ್ನು ಸೇರಿಸಿಕೊಂಡು ಈ ದರೋಡೆ ಮಾಡಲಾಗಿದೆ. ದರೋಡೆಗೆ ಸಹಕಾರ ನೀಡಿದ ಇಬ್ಬರಿಗೆ ತಲಾ 8 ಕೆಜಿ ಚಿನ್ನವನ್ನು ನೀಡಲಾಗಿದೆ.

ಕದ್ದ ಚಿನವನ್ನು ಪಿಜಿಯಲ್ಲಿಟ್ಟರು

ಕದ್ದ ಚಿನವನ್ನು ಪಿಜಿಯಲ್ಲಿಟ್ಟರು

ಫ್ರೇಜರ್ ಟೌನ್‌ನಲ್ಲಿರುವ ಮುತ್ತೋಟ್ ಫೈನಾನ್ಸ್‌ನಲ್ಲಿ ಡಿಸೆಂಬರ್ 23ರ ರಾತ್ರಿ ಕಳ್ಳತನ ಮಾಡಲಾಗಿತ್ತು. ದರೋಡೆ ಮಾಡಿದ ಚಿನ್ನವನ್ನು ಪಿಜಿಗೆ ತೆಗೆದುಕೊಂಡು ಹೋಗಿ ಹಂಚಿಕೊಂಡರು. ಎಲ್ಲರೂ ಅಲ್ಲಿಂದ ಪರಾರಿಯಾಗಿ ದೆಹಲಿಯಲ್ಲಿ ಪುನಃ ಭೇಟಿಯಾಗುವ ಯೋಜನೆ ರೂಪಿಸಿ ಬೆಂಗಳೂರು ಬಿಟ್ಟು ಪರಾರಿಯಾದರು. ಈಗ ಇಬ್ಬರು ಆರೋಪಿಗಳಿಂದ 8 ಕೆಜಿ ಚಿನ್ನ ವಶಕ್ಕೆ ಪಡೆಯಲಾಗಿದೆ.

ಚಿನ್ನ ಸಾಗಣೆ ಮಾಡಲು ಕಷ್ಟವಾಗಿತು

ಚಿನ್ನ ಸಾಗಣೆ ಮಾಡಲು ಕಷ್ಟವಾಗಿತು

ಮುತ್ತೋಟ್ ಫೈನಾನ್ಸ್‌ನಿಂದ 77 ಕೆಜಿ ಚಿನ್ನವನ್ನು ದರೋಡೆ ಮಾಡಲಾಗಿತ್ತು. ಆದರೆ, ಚಿನ್ನವನ್ನು ಬೆಂಗಳೂರಿನಿಂದ ಹೊರಗೆ ಸಾಗಣೆ ಮಾಡುವುದು ಕಷ್ಟವಾಗಿದೆ. ಆದ್ದರಿಂದ, ಸ್ವಲ್ಪ ಚಿನ್ನವನ್ನು ಮಾತ್ರ ತೆಗೆದುಕೊಂಡು ಎಲ್ಲಾ ಆರೋಪಿಗಳು ಪರಾರಿಯಾಗಿದ್ದಾರೆ. ಇಬ್ಬರು ಆರೋಪಿಗಳು ಸಿಕ್ಕಿದ್ದು ಉಳಿದ 10 ಜನರಿಗಾಗಿ ಹುಡುಕಾಟ ನಡೆದಿದೆ.

16 ಕೋಟಿ ಮೌಲ್ಯದ ಚಿನ್ನಾಭರಣ

16 ಕೋಟಿ ಮೌಲ್ಯದ ಚಿನ್ನಾಭರಣ

ಫ್ರೇಜರ್ ಟೌನ್‌ನಲ್ಲಿರುವ ಮುತ್ತೋಟ್ ಫೈನಾನ್ಸ್‌ ದರೋಡೆಗೆ ಭದ್ರತಾ ವೈಫಲ್ಯವೇ ಕಾರಣವಾಗಿದೆ. 16 ಕೋಟಿ ಮೌಲ್ಯದ ಚಿನ್ನಾಭರಣ ದರೋಡೆ ಪ್ರಕರಣ ಪತ್ತೆ ಹಚ್ಚಲು ವಿಶೇಷ ತಂಡವನ್ನು ರಚನೆ ಮಾಡಲಾಗಿದೆ.

English summary
Bengaluru Pulikeshi Nagar police special team arrested two in connection with the Muthoot finance robbery case. 77 kg gold robbed from Muthoot finance by 12 people gang.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X