ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿಗೆ ಮತ ಹಾಕದ ಮುಸ್ಲಿಮರು ದೇಶದ್ರೋಹಿಗಳು ಎಂದ ಈಶ್ವರಪ್ಪ

|
Google Oneindia Kannada News

Recommended Video

ಮುಸ್ಲಿಂ ಭಾಂದವರಲ್ಲಿ ಈಶ್ವರಪ್ಪ ಮತಯಾಚನೆ | K. S. Eshwarappa | Oneindia Kannada

ಬೆಂಗಳೂರು, ಸೆಪ್ಟೆಂಬರ್ 16: "ರಾಷ್ಟ್ರೀಯವಾದಿ ಮುಸ್ಲಿಮರು ಬಿಜೆಪಿಗೆ ಮತ ನೀಡಿದ್ದಾರೆ. ಆದರೆ ಯಾರು ಪಾಕಿಸ್ತಾನದ ಪರ ಇದ್ದಾರೋ ಅವರು ಬಿಜೆಪಿಗೆ ಮತ ಹಾಕಿಲ್ಲ" ಎಂದು ಗ್ರಾಮೀಣಾಭಿವೃದ್ಧಿ ಸಚಿವ- ಬಿಜೆಪಿಯ ಹಿರಿಯ ಮುಖಂಡ ಈಶ್ವರಪ್ಪ ಭಾನುವಾರ ಹೇಳುವ ಮೂಲಕ ವಿವಾದದ ಕಿಚ್ಚು ಹೊತ್ತಿಸಿದ್ದಾರೆ.

ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ ಅವರು, ಈ ಸರಕಾರ ನಾವು ರಚಿಸುವ ಮುಂಚೆ ಕಾಂಗ್ರೆಸ್ ನ ಕೆಲವು ಶಾಸಕರು ನನ್ನ ಬಳಿ ಬಂದಿದ್ದರು. ಅವರಿಗೂ ಬಿಜೆಪಿ ಸೇರಬೇಕು ಎಂದು ಬಯಸಿದ್ದರು. ಆದರೆ ಅವರ ಕ್ಷೇತ್ರದಲ್ಲಿ ಐವತ್ತು ಸಾವಿರ ಮುಸ್ಲಿಮರ ಮತಗಳಿವೆ ಎಂಬ ಆತಂಕ ಅವರದಾಗಿತ್ತು. ಇದು ಹಿಜಡಾ ನಡವಳಿಕೆ ಎಂದಿದ್ದಾರೆ.

ನಿಮಗೆ ಹತ್ತು ಸಾವಿರ ರೂ ಪರಿಹಾರ ಕೊಟ್ಟಿದ್ದೇ ಹೆಚ್ಚು: ಈಶ್ವರಪ್ಪನಿಮಗೆ ಹತ್ತು ಸಾವಿರ ರೂ ಪರಿಹಾರ ಕೊಟ್ಟಿದ್ದೇ ಹೆಚ್ಚು: ಈಶ್ವರಪ್ಪ

ನಾನು ಅವರಿಗೆ ಹೇಳಿದೆ, ನನ್ನ ಕ್ಷೇತ್ರದಲ್ಲಿ ಜಾತಿಯ ಬೆಂಬಲಿವಿಲ್ಲ. ಐವತ್ತು ಸಾವಿರದಷ್ಟು ಮುಸ್ಲಿಮರು ನನ್ನ ಕ್ಷೇತ್ರದಲ್ಲಿ ಇದ್ದಾರೆ. ಆದರೆ ನಾನು ಎಂದಿಗೂ ಅವರ ಮತ ಕೇಳಿಲ್ಲ. ಆದರೂ ನಲವತ್ತೇಳು ಸಾವಿರ ಮತಗಳಿಂದ ನಾನು ಗೆಲ್ಲಲು ಸಾಧ್ಯವಾಗುತ್ತಿದೆ ಎಂದು ಈಶ್ವರಪ್ಪ ಹೇಳಿದ್ದಾರೆ.

Muslims Who Were Not Voted For BJP, Favor Of Pakistan, Said KS Eshwarappa

ಮಾಧ್ಯಮಗಳು ಇದನ್ನು ಬರೆಯಲಿ ಎಂಬ ಕಾರಣಕ್ಕೇ ಹೇಳ್ತಿದ್ದೀನಿ. ರಾಷ್ಟ್ರೀಯವಾದಿ ಮುಸ್ಲಿಮರು ಬಿಜೆಪಿಗೆ ಮತ ಹಾಕುತ್ತಾರೆ. ಪಾಕಿಸ್ತಾನದ ಪರ ಇರುವವರು ಹಾಗೂ ದೇಶದ್ರೋಹಿಗಳು ಬಿಜೆಪಿಗೆ ಮತ ಹಾಕುವವರು ಬಿಜೆಪಿಗೆ ಮತ ಹಾಕಲು ಎರಡು ಸಲ ಯೋಚಿಸುತ್ತಾರೆ ಎಂದಿದ್ದಾರೆ.

ಸಚಿವ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನ ವಿಧಾನಪರಿಷತ್ ಸದಸ್ಯ ರಿಜ್ವಾನ್ ಅರ್ಷದ್, ಸಚಿವರೊಬ್ಬರು ಈ ರೀತಿ ಏಕೆ ಮಾತನಾಡುತ್ತಾರೆ. ಅಧಿಕಾರಕ್ಕಾಗಿ ಇವರು ದೇಶವನ್ನೇ ನಾಡ ಮಾಡುತ್ತಾರಾ? ಬೇರೆ ಪಕ್ಷಕ್ಕೆ ಮತ ಹಾಕಿದ ಮುಸ್ಲಿಮರು ದೇಶಕ್ಕೆ ವಿರುದ್ಧವಾಗಿ ಹಾಗೂ ಪಾಕಿಸ್ತಾನದ ಪರ ಇದ್ದಾರೆ ಎನ್ನುತ್ತಿದ್ದಾರೆ. ಬಿಜೆಪಿಯು ದೇಶದ ಜತೆಗೆ ಇದೆ ಎಂದು ಹೋಲಿಸುವುದು ಸರಿಯೆ? ಎಂದು ಪ್ರಶ್ನಿಸಿದ್ದಾರೆ.

English summary
Rural development minister, BJP leader KS Eshwarappa said, Muslims who were not voted BJP, they in favor of Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X