ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಗವದ್ಗೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಮುಸ್ಲಿಂ ಬಾಲಕ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 04 : ದ್ವಾಪರ ಯುಗದಲ್ಲಿ ಅರ್ಜುನನಿಗೆ ಬೋಧಿಸಿದ ಭಗವದ್ ಗೀತೆಯನ್ನು ಯಾರು ಬೇಕಾದರೂ ಓದಿ, ಅದರ ಸಾರವನ್ನು ಅಳವಡಿಸಿಕೊಳ್ಳಬಹುದು. ಜ್ಞಾನಕ್ಕೆ ಯಾವ ಕುಲ, ಗೋತ್ರ, ಜಾತಿಯ ಹಂಗಿಲ್ಲ ಎಂಬುದು ಮತ್ತೆ ಸಾಬೀತಾಗಿದೆ.

ಭಗವದ್ ಗೀತೆ ಸ್ಪರ್ಧೆಯಲ್ಲಿ ಓರ್ವ ಮುಸ್ಲಿಂ ಹುಡುಗನೊಬ್ಬ ಪ್ರಥಮ ಸ್ಥಾನ ಪಡೆದು ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾನೆ. ಬೆಂಗಳೂರಿನಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವ ಮುಸ್ಲಿಂ ವಿದ್ಯಾರ್ಥಿ ಶೇಖ್ ಮೊಯಿನುದಿನ್ ಆ ಬಾಲಕ.

ಗೀತಾ ಜಯಂತಿ ಸ್ಮರಣೆಯಲಿ ಲೌಕಿಕ ಸಾಗರದಲ್ಲಿ ಭಗವದ್ಗೀತೆ ಮಂಥನಗೀತಾ ಜಯಂತಿ ಸ್ಮರಣೆಯಲಿ ಲೌಕಿಕ ಸಾಗರದಲ್ಲಿ ಭಗವದ್ಗೀತೆ ಮಂಥನ

ಸಂಜಯ್ ನಗರದ ಇಸ್ಕಾನ್ ಸಂಸ್ಥೆ ಆಯೋಜಿಸಿದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಬೆಂಗಳೂರಿನ ಸುಭಾಷ್ ಮೆಮೋರಿಯಲ್ ಇಂಗ್ಲಿಷ್ ಶಾಲೆಯ ವಿದ್ಯಾರ್ಥಿಯಾಗಿರುವ ಶೇಖ್ ಮೊಯಿನುದಿನ್ ಭಗವದ್ಗೀತೆ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಪ್ರಶಸ್ತಿಯನ್ನು ತಮ್ಮ ಮುಡಿಗೆರಿಸಿಕೊಂಡಿದ್ದಾರೆ.

Muslim student wins Bhagavad Gita competition in Bengaluru

ಭಗವದ್ಗೀತೆ ಬಗ್ಗೆ ಮಕ್ಕಳಲ್ಲಿರುವ ಜ್ಞಾನ ಎಷ್ಟಿದೆ ಎಂಬ ಕುರಿತು ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ 14 ಶಾಲೆಗಳು ಪಾಲ್ಗೊಂಡಿದ್ದವು. ಈ ಸ್ಪರ್ಧೆಯಲ್ಲಿ ವಿಜಯಿಯಾದ ಶೇಖ್ ಮೊಯಿನುದಿನ್ ನಿಗೆ ಅಭಿನಂದನೆಗಳು.

Muslim student wins Bhagavad Gita competition in Bengaluru

ಮೈಸೂರಿನಲ್ಲಿ ಭಗವದ್ಗೀತೆ ಸುಟ್ಟು ಹಾಕಿದ ಯುವ ಹೋರಾಟಗಾರ ಹಾರೋಹಳ್ಳಿ ರವೀಂದ್ರ!ಮೈಸೂರಿನಲ್ಲಿ ಭಗವದ್ಗೀತೆ ಸುಟ್ಟು ಹಾಕಿದ ಯುವ ಹೋರಾಟಗಾರ ಹಾರೋಹಳ್ಳಿ ರವೀಂದ್ರ!

ಮೂರು ವರ್ಷಗಳ ಹಿಂದೆ ಮುಂಬೈನಲ್ಲಿ ಇಸ್ಕಾನ್ ಆಯೋಜಿಸಿದ್ದ ಭಗವದ್ ಗೀತೆ ಸ್ಪರ್ಧೆಯಲ್ಲಿ ಹನ್ನೆರಡು ವರ್ಷದ ಮುಸ್ಲಿಂ ಬಾಲಕಿ ಮರಿಯಮ್ ಆಸಿಫ್ ಸಿದ್ದಿಕಿ ಪ್ರಥಮ ಸ್ಥಾನ ಪಡೆದಿದ್ದಳು. ಇಸ್ಕಾನ್ ಸಂಸ್ಥೆ ಸುಮಾರು 5000 ವಿದ್ಯಾರ್ಥಿಗಳಿಗೆ ಭಗವದ್ ಗೀತೆಯ ಪುಸ್ತಕವನ್ನು ಹಂಚಿ, ನಂತರ ಸ್ಪರ್ಧೆಯನ್ನು ನಡೆಸಿತ್ತು. ಆ ಸ್ಪರ್ಧೆಯಲ್ಲಿ ಮರಿಯಮ್ ವಿಜಯಿಯಾಗಿ ಎಲ್ಲರೂ ಅಚ್ಚರಿಯಾಗುವಂತೆ ಮಾಡಿದ್ದಳು.

English summary
Muslim student Sheikh Moinuddin has won the Bhagavad Gita competition in Bengaluru conducte by ISKCON. More than 14 schools from Bengaluru participated in this competition. 3 years back a muslim girl had won the Gita competition in Mumbai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X