ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜನವರಿ 22ಕ್ಕೆ ಬೆಂಗಳೂರು ಬಂದ್; ಬೇಡಿಕೆಗಳು

|
Google Oneindia Kannada News

ಬೆಂಗಳೂರು, ಜನವರಿ 20: ಜನವರಿ 22ರ ಶುಕ್ರವಾರ ಬೆಂಗಳೂರು ಬಂದ್‌ಗೆ ಕರೆ ನೀಡಲಾಗಿದೆ. ಕರ್ನಾಟಕ ಮುಸ್ಲಿಂ ಸಂಘಟನೆಗಳ ಒಕ್ಕೂಟ ಕರೆ ನೀಡಿರುವ ಬಂದ್‌ಗೆ 22ಕ್ಕೂ ಹೆಚ್ಚು ಮುಸ್ಲಿಂ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಮುಸ್ಲಿಂ ಸಂಘಟನೆಗಳ ಒಕ್ಕೂಟ ಬೆಂಗಳೂರು ಬಂದ್‌ಗೆ ಕರೆ ನೀಡಿದೆ. "ಶಾಂತಿಯುತವಾಗಿ ಬಂದ್ ನಡೆಯಲಿದೆ" ಎಂದು ಸಂಘಟನೆಗಳ ಒಕ್ಕೂಟದ ಸಮನ್ವಯಕಾರ ಮಸೂದ್ ಅಬ್ದುಲ್ ಖಾದರ್ ಹೇಳಿದ್ದಾರೆ.

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ; ತನಿಖೆ ಆರಂಭಿಸಲಿದೆ ಎನ್‌ಐಎ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ; ತನಿಖೆ ಆರಂಭಿಸಲಿದೆ ಎನ್‌ಐಎ

ಯಾವುದೇ ರೀತಿಯಲ್ಲಿ ಗುಂಪುಗೂಡಿ ಪ್ರತಿಭಟನೆ ನಡೆಸುವುದಿಲ್ಲ. ಸ್ವಯಂ ಪ್ರೇರಿತವಾಗಿ ಬೆಂಗಳೂರಿನಲ್ಲಿ ಇರುವ ಮುಸ್ಲಿಂಮರು ಉದ್ಯಮಗಳನ್ನು ಬಂದ್ ಮಾಡಿ ಮನೆಯಲ್ಲಿ ಇರಲಿದ್ದಾರೆ. ಬೆಳಗ್ಗೆಯಿಂದ ಸಂಜೆ 5 ಗಂಟೆ ತನಕ ವ್ಯಾಪಾರ ಬಂದ್ ಮಾಡಲಿದ್ದಾರೆ.

ಡಿಜೆ ಹಳ್ಳಿ ಗಲಭೆ ಪ್ರಕರಣ: ಮೂರು ಎಸ್‌ಡಿಪಿಐ ಕಚೇರಿಗಳ ಮೇಲೆ ಸಿಸಿಬಿ ದಾಳಿಡಿಜೆ ಹಳ್ಳಿ ಗಲಭೆ ಪ್ರಕರಣ: ಮೂರು ಎಸ್‌ಡಿಪಿಐ ಕಚೇರಿಗಳ ಮೇಲೆ ಸಿಸಿಬಿ ದಾಳಿ

Muslim Sanghatanegala Okkuta Called For Bandh On January 22

ಕರ್ನಾಟಕ ಮುಸ್ಲಿಂ ಸಂಘಟನೆಗಳ ಒಕ್ಕೂಟ ಕರೆ ನೀಡಿರುವ ಬಂದ್‌ಗೆ 22ಕ್ಕೂ ಹೆಚ್ಚು ಮುಸ್ಲಿಂ ಸಂಘಟನೆಗಳು ಬೆಂಬಲವನ್ನು ಘೋಷಣೆ ಮಾಡಿವೆ.

ಡಿಜೆ ಹಳ್ಳಿ ಗಲಭೆ: ಆರೋಪಿಗಳ ಮೇಲೆ SC-ST ಕಾಯ್ದೆಯಡಿ ಎಫ್ಐಆರ್ ಡಿಜೆ ಹಳ್ಳಿ ಗಲಭೆ: ಆರೋಪಿಗಳ ಮೇಲೆ SC-ST ಕಾಯ್ದೆಯಡಿ ಎಫ್ಐಆರ್

ಬೇಡಿಕೆಗಳು

* ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ವ್ಯಾಪ್ತಿಯಲ್ಲಿ ನಡೆದ ಗಲಭೆ ಸಂಬಂಧ ಬಂಧನಕ್ಕೆ ಒಳಗಾಗಿರುವ ಅಮಾಯಕರನ್ನು ತಕ್ಷಣ ಬಿಡುಗಡೆ ಮಾಡಬೇಕು.

* ಲವ್ ಜಿಹಾದ್ ವಿರುದ್ಧ ಮತ್ತು ಕೃಷಿ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸಬೇಕು

* ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಸಂಬಂಧ ಬಂಧಿಸಲಾಗಿರುವ ಎಸ್‌ಡಿಪಿಐ ಮುಖಂಡ ಮುಜಾಮ್ಮಿಲ್ ಪಾಷಾ ಸೇರಿದಂತೆ 421 ಜನರನ್ನು ಬಿಡುಗಡೆ ಮಾಡಬೇಕು.

Recommended Video

ಪೊಲೀಸರು ಎಲ್ಲಿ ತಡೆಯುತ್ತಾರೋ ಅಲ್ಲಿಯೇ ಪ್ರತಿಭಟನೆ ಮಾಡಿ- ಡಿಕೆ ಶಿವಕುಮಾರ್ ಕರೆ | Oneindia Kannada

* ಗೋ ಹತ್ಯೆ ನಿಷೇಧ ಕಾಯ್ದೆಯನ್ನು ವಾಪಸ್ ಪಡೆಯಬೇಕು.

English summary
Karnataka Muslim Sanghatanegala Okkuta called for Bengaluru bandh on January 22, 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X