ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಂಜಾನ್ ಉಪವಾಸದ ಬಗ್ಗೆ ಡಬ್ಲ್ಯೂಎಚ್‌ಒ ನೀಡಿದ ಸಲಹೆ ಪಾಲಿಸಬೇಕು

|
Google Oneindia Kannada News

ಬೆಂಗಳೂರು, ಏಪ್ರಿಲ್ 22: ಇಡೀ ಜಗತ್ತನ್ನು ಕೊರೊನಾ ಕಿತ್ತು ತಿನ್ನುತ್ತಿದೆ. ಮತ್ತೊಂದೆಡೆ ರಂಜಾನ್ ಹಬ್ಬದ ಹತ್ತಿರವಾಗ್ತಿದೆ. ದೇಶದ ಹಲವು ಕಡೆ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿರುವ ಘಟನೆಗಳು ವರದಿಯಾಗಿದ್ದು, ಸಹಜವಾಗಿ ಇದು ಆತಂಕ ಸೃಷ್ಟಿಸಿದೆ.

Recommended Video

ಬಾಗಲಕೋಟೆಯ ಲೋಕಾಪುರದಲ್ಲಿ ಜನಮರುಳೋ ಜಾತ್ರೆ ಮರುಳೋ | Bagalkot Market | Oneindia Kannada

ರಂಜಾನ್ ಹಬ್ಬದ ಪ್ರಯುಕ್ತ ಈ ವಾರದಿಂದ ಉಪವಾಸ ಆರಂಭವಾಗುತ್ತಿದೆ. ಈ ಸಲ ಉಪವಾಸ ಮಾಡುವವರಿಗೆ ಡಬ್ಲ್ಯೂ ಎಚ್ ಒ ಉಪಯುಕ್ತ ಸಲಹೆಗಳನ್ನು ನೀಡಿದೆ. ಕೊರೊನಾ ವೈರಸ್‌ ಭೀತಿಯಲ್ಲಿರುವ ಈ ಸಂದರ್ಭದಲ್ಲಿ ಎಲ್ಲರೂ ಉಪವಾಸ ಮಾಡುವುದು ಸೂಕ್ತವಲ್ಲ ಎಂದು ಅಭಿಪ್ರಾಯ ಪಟ್ಟಿದೆ.

Muslim Have To Follow This Rules During Ramzan Roza

ರಂಜಾನ್ ಪ್ರಾರ್ಥನೆ ಕುರಿತು ರಾಜ್ಯಗಳಿಗೆ ಎಚ್ಚರಿಸಿದ ಕೇಂದ್ರ ಸರ್ಕಾರರಂಜಾನ್ ಪ್ರಾರ್ಥನೆ ಕುರಿತು ರಾಜ್ಯಗಳಿಗೆ ಎಚ್ಚರಿಸಿದ ಕೇಂದ್ರ ಸರ್ಕಾರ

ಡಬ್ಲ್ಯೂ ಎಚ್ ಒ ಉಲ್ಲೇಖಿಸಿರುವ ಅಂಶಗಳನ್ನು ಕರ್ನಾಟಕ ಮುಖ್ಯಮಂತ್ರಿ ಅವರ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ಕರ್ನಾಟಕದಲ್ಲಿರುವ ಮುಸ್ಲಿಂರು ಈ ನಿಯಮಗಳನ್ನು ಪಾಲಿಸಿ ಎಂದು ತಿಳಿಸಿದ್ದಾರೆ.

* ಅರೋಗ್ಯವಾಗಿದ್ದರೆ ಮಾತ್ರ ಉಪವಾಸ ಮಾಡಬೇಕು

* ವೈದ್ಯರ ಸಲಹೆ ಇಲ್ಲದೆ ಉಪವಾಸ ಮಾಡುವುದು ಆರೋಗ್ಯಕ್ಕೆ ಅಪಾಯಕಾರಿ

* ಉಸಿರಾಟದ ಸಮಸ್ಯೆ ಇದ್ದರಂತೂ ವೈದ್ಯರ ಸಲಹೆ ಪಡೆಯಲೇಬೇಕು.

* ಮನೆಯಲ್ಲೇ ಪ್ರಾರ್ಥನೆ ಮಾಡಬೇಕು. ಅಲ್ಲಿಯೂ ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಬೇಕು

* ಪ್ರಾರ್ಥನೆಗೆ ಜನ ಸೇರಬಾರದು, ಇಫ್ತಾರ್ ಕೂಟ ಬೇಡ

* ಈ ಸಲಹೆಗಳನ್ನು ಧಾರ್ಮಿಕ ಮುಖಂಡರು ಎಲ್ಲರಿಗೂ ನೀಡಬೇಕು

ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಕಟ್ಟುನಿಟ್ಟಾಗಿ ಸೂಚನೆ ನೀಡಿದೆ. ರಂಜಾನ್ ಪ್ರಯುಕ್ತ ಎಲ್ಲಿಯೂ ಸಾಮೂಹಿಕ ಪ್ರಾರ್ಥನೆ ನಡೆಯಬಾರದು, ಜನರು ಗುಂಪು ಸೇರಬಾರದಂತೆ ಎಚ್ಚರ ವಹಿಸಿ ಎಂದು ಆದೇಶಿಸಿದೆ.

English summary
WHO gave suggestions to Muslim to follow these rules during ramzan roza.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X