ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಗೀತಾಸಕ್ತರಿಗಾಗಿ ಮ್ಯೂಸಿಕ್‌ಟೆಕ್‌ನಿಂದ ಮುಕ್ತ ವೇದಿಕೆ

By Nayana
|
Google Oneindia Kannada News

ಬೆಂಗಳೂರು, ಮೇ 4: ಮ್ಯೂಸಿಕ್ ಟೆಕ್ ಕಮ್ಯೂನಿಟಿ ಇಂಡಿಯಾ ಸಂಗೀತ ಕ್ಷೇತ್ರದ ಆಸಕ್ತರಿಗಾಗಿ ಮುಕ್ತ ವೇದಿಕೆ ಕಲ್ಪಿಸುತ್ತಿದ್ದು, ಮೇ 5 ರಂದು ಸಂಗೀತದಲ್ಲಿ ಆಸಕ್ತಿ ಹೊಂದಿದ, ಸಂಗೀತ ತಾಂತ್ರಿಕತೆ, ರಚನೆ, ವಿನ್ಯಾಸ, ಅಭಿವೃದ್ಧಿ, ಸಂಶೋಧನೆ ಹೀಗೆ ಸಂಗೀತ ಸಂಬಂಧಿ ಯಾವುದೇ ಅಭಿರುಚಿ ಹೊಂದಿದವರಿಗೆ ಮುಕ್ತ ಪಾಲ್ಗೊಳ್ಳುವಿಕೆ ಅವಕಾಶ ಕಲ್ಪಿಸಿದೆ.

ನೀವು ಮ್ಯುಸಿಶಿಯನ್, ಡೆವಲಾಪರ್, ಕಲಾವಿದ, ನಿರ್ದೇಶಕನಾಗುವ ಅಭಿರುಚಿ ನಿಮ್ಮಲ್ಲಿದ್ದರೆ ಮ್ಯೂಸಿಕ್ ಟೆಕ್ ಮುಕ್ತ ಅವಕಾಶವನ್ನು ಕಲ್ಪಿಸಿಕೊಡುತ್ತಿದೆ. ಮೇ 5 ರಂದು ಸಂಜೆ 4.30ಕ್ಕೆ ಮ್ಯೂಸಿಕ್ ತಂತ್ರಜ್ಞಾನದ ಕುರಿತು ನುರಿತ ತಜ್ಞರು ಉಪನ್ಯಾಸ ನೀಡಲಿದ್ದಾರೆ.

Music tech community hosts meet upon music world!

5ರಿಂದ 5.30ವರೆಗೆ ಮ್ಯೂಸಿಕ್ ಟೆಕ್ ಕಮ್ಯುನಿಟಿ ಇಂಡಿಯಾ ಕುರಿತು ಮಾಹಿತಿ ದೊರೆಯಲಿದೆ. 5.30ರಿಂದ 6ಗಂಟೆಯವರೆಗೆ ಮುಕ್ತ ಚರ್ಚೆಗೆ ಅವಕಾಶವಿರುತ್ತದೆ. ಪ್ರವೇಶ ಉಚಿತವಾಗಿರುತ್ತದೆ. ಇಂದಿರಾನಗರದ 91 ಸಪ್ರಿಂಗ್ ಬೋರ್ಡ್‌, 80 ಅಡಿ ರಸ್ತೆಯಲ್ಲಿರುವ ಮ್ಯೂಸಿಕ್ ಟೆಕ್ ಕಮ್ಯುನಿಟಿ ಇಂಡಿಯಾದಲ್ಲಿ ನಡೆಯಲಿದೆ.

English summary
Music Tech community India is providing an open forum for music connected people through direction, production, developing, designing many more on May 5 at Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X