ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶ್ವ ಪರಿಸರ ದಿನದಂದು ಕನ್ನಡ ಕವಿಗಳ ’ಹಸಿರು ಸಿರಿಯ’ ಹಾಡುಗಳು

|
Google Oneindia Kannada News

ಜೂನ್ 5, ವಿಶ್ವ ಪರಿಸರ ದಿನ ಪ್ರಯುಕ್ತ, ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಒಂದು ವಿಧಾನ. ಪ್ರತಿ ವರ್ಷ ಯೂನೈಟೆಡ್ ನೇಶನ್ಸ್ ಅವರು ಒಂದು ವಿಷಯದ ಮೇಲೆ ವಿಶ್ವ ಪರಿಸರ ದಿನವನ್ನು ಆಚರಿಸುತ್ತಾರೆ.

2019ನೇ ಸಾಲಿನ ವಿಷಯ 'ವಾಯು ಮಾಲಿನ್ಯ'. ವಾಯು ಮಾಲಿನ್ಯ ವಿಚಾರವಾಗಿ ಕುರಿತು ಹೆಚ್ಚಿನ ಮಟ್ಟದಲ್ಲಿ ಜಾಗೃತಿ ಮೂಡಿಸಲು ಗ್ರೀನ್ ಪಾಥ್ ಹಾಗು ಐರಿಸ್ ಮೀಡಿಯಾ #EatToBeat ಎನ್ನುವ ಒಂದು ಸಂಗೀತ (ಈ ಹಸಿರು ಸಿರಿಯಲಿ) ಹಾಗು ಆಹಾರ ಉತ್ಸವವನ್ನು ಜೂನ್ 5 ರಂದು ಗ್ರೀನ್ ಪಾಥ್ ಹೋಟೆಲ್, ಮಲ್ಲೇಶ್ವರಂ ಆವರಣದಲ್ಲಿ ಹಮ್ಮಿಕೊಂಡಿದೆ. 'ಈ ಹಸಿರು ಸಿರಿಯಲಿ' ಎಂಬ ಸಂಗೀತೋತ್ಸವದಲ್ಲಿ ಅಂಜಲಿ ಹಳಿಯಾಳ್, ರಾಜಶೇಖರ್ ನುಲಿ ಹಾಗು ತಂಡದವರು ಹಾಡಲಿದ್ದಾರೆ.

Music programme on world environment day Green Path Hotel Malleswaram

ಸಂಜೆ 6.30 ರಿಂದ 9 ಘಂಟೆಯ ವರೆಗೆ ನಡೆಯುಲಿರುವ ಈ ಕಾರ್ಯಕ್ರಮದಲ್ಲಿ ಪ್ರಕೃತಿಗೆ ಸಂಬಂಧ ಪಟ್ಟ ಹಾಗು ಕನ್ನಡದ ಕವಿಗಳ ರಚನೆಯ ಜನಪ್ರಿಯ ಭಾವಗೀತೆಗಳನ್ನು ಪ್ರಸ್ತುತ ಪಡಿಸುತ್ತಾರೆ.

ಮಧು ಬನದ ಜಾಡಿನಲ್ಲಿ (ದೊಡ್ಡರಂಗೇಗೌಡರು), ಈ ಬಾನು ಈ ಚುಕ್ಕಿ (ಎನ್ ಎಸ್ ಲಕ್ಷ್ಮೀ ನಾರಾಯಣ ಭಟ್ಟರು), ಮುಗಿಅಲ್ ಮಾರಿಗೆ (ಬೇಂದ್ರೆ), ಈ ಘಳಿಗೆಯೇ ಮೈತಾಳೀತೋ (ನಿಸಾರ್ ಅಹಮದ್), ಗಿಡ ಮರವೆಲ್ಲಾ ಹೀಗೆ ಇರಲಿ (ಶಿವಾನಂದ್ ಬೇಕಲ್), ದೋಣಿ ಸಾಗಲಿ ಮುಂದೆ ಹೋಗಲಿ (ಕುವೆಂಪು) ಕಾರ್ಯಕ್ರಮದಲ್ಲಿ ಪ್ರಸ್ತುತ ಪಡಿಸುವ ಹಾಡುಗಳಲ್ಲಿ ಕೆಲವು.

Music programme on world environment day Green Path Hotel Malleswaram

ಸಂಗೀತ ಉತ್ಸವಕ್ಕೆ ಉಚಿತ ಪ್ರವೇಶವಾಗಿದ್ದು, ಅಲ್ಲೇ ನಡೆಯುವ ಆಹಾರ ಉತ್ಸವಕ್ಕೆ ನಿಗಧಿತವಾದ ಬೆಲೆಯೊಂದಿಗೆ ಮಿಲ್ಲೆಟ್ಸ್ (ಧಾನ್ಯಗಳು) ಇಂದ ಮಾಡಿರುವ ಆಹಾರವನ್ನು ಹಾಗು ಗ್ರೀನ್ ಪಾಥ್ ಅವರೇ ಸಾವಯವವಾಗಿ ಬೆಳೆಸಿರುವ ತರಕಾರಗಳು ಹಣ್ಣುಗಳ ತಿನುಸುಗಳನ್ನು ಸವಿಯುವ ಅವಕಾಶ.

Music programme on world environment day Green Path Hotel Malleswaram

ಎಚ್ ಆರ್ ಜಯರಾಮ್ ಅವರು ನಡೆಸುತ್ತಿರುವ ಗ್ರೀನ್ ಪಾಥ್ ರೆಸ್ಟೊರೆಂಟ್ ನಲ್ಲಿ ಸಾವಯವವಾಗಿ ತಮ್ಮ ಭೂಮಿಯಲ್ಲೇ ಬೆಳೆದ ಮಿಲ್ಲೆಟ್ಸ್, ಹಣ್ಣು ತರಕಾರಿಗಳಿಂದ ಇಂದ ತಿನುಸುಗಳನ್ನು ತಯಾರಿಸುತ್ತಾರೆ. ಇದರ ಮೂಲಕ ಹೆಚ್ಚಾಗಿ ಮಿಲ್ಲೆಟ್ಸ್ ಅನ್ನು ಬಳಸಲು ಉತ್ತೇಜಿಸುತ್ತಿದ್ದಾರೆ. ಮಿಲ್ಲೆಟ್ಸ್ ಅಲ್ಲದೆ ಬೇರೆ ಉತ್ತರ, ದಕ್ಷಿಣ ತಿನಿಸುಗಳೂ ದೊರೆಯುತ್ತವೆ.

English summary
Music programme on world environment day is organised at Green Path Hotel, Malleswaram, Bengaluru.Anjali Haliyal and Rajashekar Nuli music team will enthrall the audience.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X