ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜು.16 ರ 'ಮುನ್ನೋಟ'ದಲ್ಲಿ ಆಲೂರು ವೆಂಕಟರಾಯರ ಸಂಸ್ಮರಣೆ

|
Google Oneindia Kannada News

ಬೆಂಗಳೂರು, ಜುಲೈ 11: ಕರ್ನಾಟಕ ಏಕೀಕರಣ ಎಂದೊಡನೆ ಮೊದಲು ನೆನಪಾಗುವವರು ಆಲೂರು ವೆಂಕಟರಾಯರು.

ಹರಿದು ಹಂಚಿಹೋಗಿದ್ದ ಕನ್ನಡಿಗರನ್ನು ಒಂದಾಗಿಸಲು ಅಗತ್ಯವಿದ್ದ ಚಿಂತನೆಯನ್ನು ಹುಟ್ಟುಹಾಕಿ, ಕರ್ನಾಟಕ ಏಕೀಕರಣ ಚಳವಳಿಗೆ ನಾಂದಿ ಹಾಡಿದ ಆಲೂರು ವೆಂಕಟರಾಯರ (ಜುಲೈ 12, 1880 - ಫೆಬ್ರವರಿ 25,1964) 138 ನೇ ಹುಟ್ಟುಹಬ್ಬ ನಿಮಿತ್ತ ಮಾತುಕತೆ @ಮುನ್ನೋಟ ಕಾರ್ಯಕ್ರಮವನ್ನು 'ಮುನ್ನೋಟ' ತಂಡ ಹಮ್ಮಿಕೊಂಡಿದೆ.

Munnota on July 16th wimm remember Aluru Venkata Rao in Basavanagudi, Bengaluru

ಕನ್ನಡ ಕುಲ ಪುರೋಹಿತ - ಆಲೂರ ವೆಂಕಟರಾಯರುಕನ್ನಡ ಕುಲ ಪುರೋಹಿತ - ಆಲೂರ ವೆಂಕಟರಾಯರು

ಜುಲೈ 16, ಭಾನುವಾರದಂದು ಬಸವನಗುಡಿಯ ಸೌತ್ ಅವೆನ್ಯೂ ಕಾಂಪ್ಲೆಕ್ಸ್ ನಲ್ಲಿ ಬೆಳಿಗ್ಗೆ 11:30 ಕ್ಕೆ ಕಾರ್ಯಕ್ರಮ ನಡೆಯಲಿದೆ. ಕನ್ನಡ ಉಪನ್ಯಾಸಕ ಮತ್ತು ವಿಮರ್ಶಕರಾದ ಡಾ.ಎಚ್.ಎಸ್.ಸತ್ಯನಾರಾಯಣ ಅವರು 'ಆಲೂರು ವೆಂಕಟರಾಯರು ಮತ್ತು ಕರ್ನಾಟಕ ಏಕೀಕರಣ' ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ.

Munnota on July 16th wimm remember Aluru Venkata Rao in Basavanagudi, Bengaluru

ಆಲೂರು ವೆಂಕಟರಾಯರು
1956 ರ ಕರ್ನಾಟಕ ಏಕೀಕರಣದ ಹಿಂದೆ ಸಾವಿರಾರು ಜನರ ಅವಿರತ ಶ್ರಮವಿದೆ. ಕರ್ನಾಟಕಕ್ಕಾಗಿ ಪ್ರತಿಯೊಬ್ಬರೂ ದುಡಿವಂತೆ ಮಾಡಿ, ಏಕೀಕರಣ ಚಳವಳಿಗೆ ಚಿಂತನೆಯ ಚೌಕಟ್ಟನ್ನು ರೂಪಿಸಿದ ಕೀರ್ತಿ, ಕರ್ನಾಟಕ ಕುಲಪುರೋಹಿತ ಎಂದೇ ಖ್ಯಾತರಾದ ಆಲೂರು ವೆಂಕಟರಾಯರಿಗೆ ಸಲ್ಲುತ್ತದು.

1880 ಜುಲೈ 12 ರಂದು ವಿಜಯಪುರದ ಮಾಧ್ವ ಕುಟುಂಬದಲ್ಲಿ ಜನಿಸಿದ ವೆಂಕಟರಾಯರ ತಂದೆ ಭೀಮರಾಯರು ಮತ್ತು ತಾಯಿ ಭಾಗೀರಥಮ್ಮ. ಪುಣೆಯ ಫೆರ್ಗುಸನ್ ಕಾಲೇಜಿನಲ್ಲಿ ಬಿಎ ಮತ್ತು ಎಲ್ ಎಲ್ ಬಿ(ಕಾನೂನು) ಪದವಿ ಪಡೆದ ಅವರು ಲೋಕಮಾನ್ಯ ಬಾಲಗಂಗಾಧರ ತಿಲಕರ ಚಿಂತನೆಗಳಿಂದ ಪ್ರಭಾವಿತರಾದವರು.

ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಧುಮುಕಿದ ಅವರ ಅವಿರತ ಪರಿಶ್ರಮದಿಂದಾಗಿ 1956 ಕರ್ನಾಟಕವೊಂದು ಪ್ರತ್ಯೇಕ ರಾಜ್ಯವಾಗಿ, ಕನ್ನಡಿಗರಿಗೆ ದಕ್ಕಿತು. ವೆಂಕಟರಾಯರ ನನ್ನ ಜೀವನ ಸ್ಮೃತಿಗಳು ಎಂಬ ಆತ್ಮಕಥನವು 'ಜಯಕರ್ನಾಟಕ' ಮಾಸಿಕದಲ್ಲಿ ಧಾರಾವಾಹಿಯಾಗಿ ಪ್ರಕಟವಾಗುತ್ತಿದ್ದುದನ್ನು ಇಲ್ಲಿ ಉಲ್ಲೇಖಿಸಬಹುದು. ಹೆಚ್ಚಿನ ಮಾಹಿತಿಗೆ http://alurtrust.com/contact.html

English summary
A Kannada organisation 'Munnota' is organising a programme to remember Aluru Venkata Rao's contribution in Karnataka Ekikarana movement on his 138th birth (July 12th) anniversary. The programme will be held on July 16th in Basavanagudi, Bengaluru, at 11:30 am.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X