ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುನಿರಾಜು ಗೌಡ ವಿರುದ್ಧ ಮುನಿರತ್ನ ಅಸಮಾಧಾನ

|
Google Oneindia Kannada News

ಬೆಂಗಳೂರು, ಮಾರ್ಚ್ 21 : "ರಾಜರಾಜೇಶ್ವರಿ ನಗರಕ್ಕೆ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಸಲು ಮುಂದಿನ ದಿನಗಳಲ್ಲಿ ಯಾವುದೇ ತೊಡಕಿಲ್ಲ ಎಂದು ವಕೀಲರು ಹೇಳಿದ್ದಾರೆ" ಎಂದು ಬಿಜೆಪಿ ನಾಯಕ ಮುನಿರತ್ನ ಹೇಳಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ರಾಜಕೀಯ ದ್ವೇಷಕ್ಕೆ ಒಂದು ವಿಧಾನಸಭಾ ಕ್ಷೇತ್ರವನ್ನು ಬಲಿ ತೆಗೆದುಕೊಳ್ಳಬಾರದು. ರಾಜಕೀಯ, ವೈಯಕ್ತಿಕ ದ್ವೇಷಕ್ಕೆ ಒಂದು ಕ್ಷೇತ್ರದ ಅಭಿವೃದ್ಧಿ ಕುಂಠಿತ ಆಗಬಾರದು" ಎಂದರು.

ಆರ್. ಆರ್. ನಗರ ಉಪ ಚುನಾವಣೆ ಹಾದಿ ಸುಗಮ ಆರ್. ಆರ್. ನಗರ ಉಪ ಚುನಾವಣೆ ಹಾದಿ ಸುಗಮ

"ಒಂದು ಚುನಾವಣೆಯಲ್ಲಿ ಸೋತವರು ಮತ್ತೊಂದು ಚುನಾವಣೆ ತನಕ ಕಾಯುವುದು ಸಹಜ. ಆದರೆ, ಆರ್. ಆರ್. ನಗರದಲ್ಲಿ ನನ್ನ ವಿರುದ್ಧ ವೈಯಕ್ತಿಕ ಟೀಕೆ, ತೇಜೋವಧೆ ಮಾಡಿದ್ದು ಸರಿಯಲ್ಲ" ಎಂದು ಮುನಿರಾಜು ಗೌಡ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಉಪ ಚುನಾವಣೆ; ಸುಪ್ರೀಂ ಮೆಟ್ಟಿಲೇರಲಿದ್ದಾರೆ ಮುನಿರತ್ನಉಪ ಚುನಾವಣೆ; ಸುಪ್ರೀಂ ಮೆಟ್ಟಿಲೇರಲಿದ್ದಾರೆ ಮುನಿರತ್ನ

Muniratna

"ಶಾಸಕ ಸ್ಥಾನಕ್ಕೆ ನಾನು ರಾಜೀನಾಮೆ ಕೊಟ್ಟಿದ್ದು ಬೇರೆಯ ವಿಚಾರ. ಆದರೆ,‌ ವೈಯಕ್ತಿಕ ದ್ವೇಷಕ್ಕೆ ಕೋರ್ಟ್ ಮೆಟ್ಟಿಲೇರೋದು ಸರಿಯಲ್ಲ" ಎಂದು ಮುನಿರತ್ನ ಹೇಳಿದರು.

ಅನರ್ಹ ಶಾಸಕ ಮುನಿರತ್ನ ವಿರುದ್ಧದ ಮತ್ತೊಂದು ದೂರು ಹಿಂಪಡೆದ ಬಿಜೆಪಿ ಕಾರ್ಯಕರ್ತಅನರ್ಹ ಶಾಸಕ ಮುನಿರತ್ನ ವಿರುದ್ಧದ ಮತ್ತೊಂದು ದೂರು ಹಿಂಪಡೆದ ಬಿಜೆಪಿ ಕಾರ್ಯಕರ್ತ

ಆರ್. ಆರ್. ನಗರದ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ 2018ರ ಚುನಾವಣೆಯಲ್ಲಿ ಗೆಲುವು ಕಂಡಿದ್ದರು. ಅವರ ವಿರುದ್ಧ ಸೋತಿದ್ದ ಬಿಜೆಪಿಯ ಮುನಿರಾಜು ಗೌಡ ಮುನಿರತ್ನ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಹೈಕೋರ್ಟ್‌ ಮೊರೆ ಹೋಗಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕ ಸದಸ್ಯ ಪೀಠ ಮುನಿರಾಜು ಗೌಡ ಅರ್ಜಿಯನ್ನು ವಜಾಗೊಳಿಸಿದೆ. ಆದ್ದರಿಂದ, ಆರ್. ಆರ್. ನಗರ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಸಲು ಇದ್ದ ಅಡ್ಡಿ ನಿವಾರಣೆಯಾಗಿದೆ.

English summary
Now all clear for R.R. Nagar assembly seat by elections. Tulasi Muniraju Gowda moved high court against me for personal reasons said Muniratna.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X