ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮನೆಯ ಬಳಿ ಸ್ಫೋಟ : ಶಾಸಕ ಮುನಿರತ್ನ ಹೇಳಿದ್ದೇನು?

|
Google Oneindia Kannada News

ಬೆಂಗಳೂರು, ಮೇ 19 : 'ರಾಜಕಾರಣಿ ಮನೆ ಬಳಿ ಸ್ಫೋಟವಾಗಿದೆ ಎನ್ನುವ ಉಹಾಪೋಹ ಬೇಡ. ನಾನು ಈ ಬಗ್ಗೆ ಹೆಚ್ಚಿನ ಮಾತನಾಡುವುದಿಲ್ಲ. ಸಂಪೂರ್ಣ ತನಿಖೆ ಆಗುವ ತನಕ ಕಾಯೋಣ' ಎಂದು ಶಾಸಕ ಮುನಿರತ್ನ ಹೇಳಿದರು.

ರಾಜರಾಜೇಶ್ವರಿ ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಮುನಿರತ್ನ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. 'ವೆಂಕಟೇಶ್ ಧೋಬಿ ಸಮಾಜದವರು. ವೆಂಕಟೇಶ್ ತಂದೆ ಹಾಗೂ ನನ್ನ ತಂದೆ ಬಾಲ್ಯ ಸ್ನೇಹಿತರು. ನಾವು ಕೂಡಾ ಜೊತೆಯಲ್ಲಿ ಬೆಳೆದವರು' ಎಂದರು.

ಶಾಸಕ ಮುನಿರತ್ನ ನಿವಾಸದ ಬಳಿ ಸ್ಫೋಟ, 1 ಸಾವುಶಾಸಕ ಮುನಿರತ್ನ ನಿವಾಸದ ಬಳಿ ಸ್ಫೋಟ, 1 ಸಾವು

'ವೆಂಕಟೇಶ್ ಸಾವನ್ನಪ್ಪಿರುವುದು ನೋವಿನ ಸಂಗತಿ. ನಾನು ಈ ಬಗ್ಗೆ ಹೆಚ್ಚಿಗೆ ಮಾತನಾಡಲ್ಲ. ಘಟನೆಯ ಬಗ್ಗೆ ಸಂಪೂರ್ಣ ತನಿಖೆ ಆಗೋವರೆಗೂ ಕಾಯೋಣ. ರಾಜಕಾರಣಿ ಮನೆ ಬಳಿ ಆಗಿದೆ ಎನ್ನುವ ಉಹಾಪೋಹ ಬೇಡ' ಎಂದು ತಿಳಿಸಿದರು.

ಬೆಂಗಳೂರು : ಪ್ರೀತಿಸಲು ನಿರಾಕರಿಸಿದ ಗಗನಸಖಿ ಕಿವಿ ಕಟ್!ಬೆಂಗಳೂರು : ಪ್ರೀತಿಸಲು ನಿರಾಕರಿಸಿದ ಗಗನಸಖಿ ಕಿವಿ ಕಟ್!

Munirathna clarification on blast near his house

'ವೆಂಕಟೇಶ್ ನಾವು ಒಂದು ಕುಟುಂಬಕ್ಕಿಂತ ಹೆಚ್ಚು. ಘಟನೆಗೆ ಸಂಬಂಧಿಸಿದಂತೆ ಯಾವುದೇ ಊಹಾಪೋಹ ಬೇಡ. ಇಂತಹ ಘಟನೆಗಳು ನಡೆದ ಮಾತ್ರಕ್ಕೆ ಹೇಗೆ ನಡೆಯಿತು ಎಂದು ಪ್ರಶ್ನೆ ಮಾಡಿಕೊಂಡು ಕುರೂವುದು ಬೇಡ' ಎಂದು ಮುನಿರತ್ನ ಹೇಳಿದರು.

ಮೇ 23ರಂದು ಬೆಂಗಳೂರು ನಗರದಲ್ಲಿ ನಿಷೇಧಾಜ್ಞೆ ಜಾರಿಮೇ 23ರಂದು ಬೆಂಗಳೂರು ನಗರದಲ್ಲಿ ನಿಷೇಧಾಜ್ಞೆ ಜಾರಿ

ಬೆಂಗಳೂರಿನ ವೈಯಾಲಿಕಾವಲ್‌ನಲ್ಲಿರುವ ರಾಜರಾಜೇಶ್ವರಿ ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಮುನಿರತ್ನ ಅವರ ನಿವಾಸದ ಬಳಿ ಭಾನುವಾರ ಬೆಳಗ್ಗೆ ಸ್ಫೋಟ ಸಂಭವಿಸಿದೆ. ವೆಂಕಟೇಶ್ (45) ಎನ್ನುವ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ವೈಯಾಲಿಕಾವಲ್‌ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಸ್ಫೋಟಕ್ಕೆ ನಿಖರವಾದ ಕಾರಣ ಏನು? ಎಂಬುದು ಇನ್ನೂ ತಿಳಿದುಬಂದಿಲ್ಲ.

English summary
Rajarajeshwari Nagar MLA Munirathna clarification on blast near his house in Vyalikaval, Bengaluru on Sunday, May 19, 2019. One person dead in blast.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X