ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುನಿರತ್ನಗೆ ಸಂಕಷ್ಟ: ಕೇಸ್ ವಾಪಸ್ ಪಡೆಯಲು ಒಪ್ಪದ ಮುನಿರಾಜು

|
Google Oneindia Kannada News

ಬೆಂಗಳೂರು, ನವೆಂಬರ್ 15: ಕೇಸ್ ವಾಪಸ್ ಪಡೆಯಲು ಮುನಿರಾಜು ಒಪ್ಪದ ಕಾರಣ ಮುನಿರತ್ನಗೆ ಸಂಕಷ್ಟ ಎದುರಾಗಿದೆ.

ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಿಜೆಪಿ ಪರಾಜಿತ ಅಭ್ಯರ್ಥಿ ಪಿ. ಮುನಿರಾಜುಗೌಡ ಅವರನ್ನು ಮನವೊಲಿಸುವ ಪ್ರಯತ್ನ ಕಗ್ಗಂಟಾಗಿ ಪರಿಣಮಿಸಿದ್ದು, ಅನರ್ಹ ಶಾಸಕ ಮುನಿರತ್ನ ಅವರು ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರೂ ಮುನಿರಾಜುಗೌಡ ಅವರು ಮಾತ್ರ ತಮ್ಮ ಹಠವನ್ನು ಸಡಿಲಿಸುತ್ತಿಲ್ಲ.

ಬೇಕಾದರೆ ಕಚೇರಿಯಲ್ಲಿ ಕಸ ಗುಡಿಸುತ್ತೇನೆ

ಬೇಕಾದರೆ ಕಚೇರಿಯಲ್ಲಿ ಕಸ ಗುಡಿಸುತ್ತೇನೆ

ಬೇಕಾದರೆ ಪಕ್ಷದ ಕಚೇರಿಯಲ್ಲಿ ಕಸ ಗುಡಿಸುತ್ತೇನೆ ಆದರೆ ತಮ್ಮ ನಿಲುವಿನಿಂದ ಹಿಂದೆ ಸರಿಯುವುದಿಲ್ಲ ಎಂದು ಮುನಿರಾಜುಗೌಡ ಹೇಳಿದ್ದಾರೆ.ಪ್ರಕರಣ ನ್ಯಾಯಾಲಯದಲ್ಲೇ ಇತ್ಯರ್ಥಗೊಳ್ಳಲಿ. ಕೋರ್ಟ್ ತೀರ್ಪು ಏನೇ ಬಂದರೂ ಅದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ನಾನಾಗಿಯೇ ಕೇಸ್ ವಾಪಸ್ ಪಡೆಯುವುದಿಲ್ಲ ಎಂದು ಹೇಳಿದ್ದಾರೆ.

'ಸ್ಫೋಟಕ್ಕೂ ಮುನ್ನ 10ಕ್ಕೂ ಹೆಚ್ಚು ಮಕ್ಕಳು ಅಲ್ಲೇ ಆಡುತ್ತಿದ್ದರು''ಸ್ಫೋಟಕ್ಕೂ ಮುನ್ನ 10ಕ್ಕೂ ಹೆಚ್ಚು ಮಕ್ಕಳು ಅಲ್ಲೇ ಆಡುತ್ತಿದ್ದರು'

ನಿಗಮದ ಅಧ್ಯಕ್ಷ ಸ್ಥಾನ ನಯವಾಗಿ ತಿರಸ್ಕಾರ

ನಿಗಮದ ಅಧ್ಯಕ್ಷ ಸ್ಥಾನ ನಯವಾಗಿ ತಿರಸ್ಕಾರ

ತಮಗೆ ನೀಡಿರುವ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನವನ್ನು ನಯವಾಗಿಯೇ ತಿರಸ್ಕರಿಸಿರುವ ಮುನಿರಾಜುಗೌಡ ಅವರು ನ್ಯಾಯಾಲಯದಲ್ಲಿರುವ ಮುನಿರತ್ನ ವಿರುದ್ಧದ ಪ್ರಕರಣವನ್ನು ವಾಪಸ್ ಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಹೈಕೋರ್ಟ್‌ನಲ್ಲಿರುವ ಪ್ರಕರಣ ಇತ್ಯರ್ಥಗೊಳ್ಳಬೇಕು

ಹೈಕೋರ್ಟ್‌ನಲ್ಲಿರುವ ಪ್ರಕರಣ ಇತ್ಯರ್ಥಗೊಳ್ಳಬೇಕು

ಮುನಿರತ್ನ ವಿರುದ್ಧದ ಹೈಕೋರ್ಟ್‌ನಲ್ಲಿರುವ ಪ್ರಕಟಣ ಇತ್ಯರ್ಥಗೊಳ್ಳಬೇಕು ಅಥವಾ ವಾಪಸ್ ಪಡೆಯಬೇಕು. ಆಗ ಮಾತ್ರ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ಉಪಚುನಾವಣೆಗೆ ದಾರಿ ಸುಗಮವಾಗಲಿದೆ. ಆದರೆ ಮುನಿರಾಜುಗೌಡ ಅವರ ಬಿಗಿ ನಿಲುವಿನಿಂದಾಗಿ ಮುನಿರತ್ನ ಬಿಜೆಪಿ ಸೇರಿದರೂ ಆತಂಕದಿಂದಲೇ ಓಡಾಡಿಕೊಂಡಿದ್ದಾರೆ.

ಯಡಿಯೂರಪ್ಪ ನಿವಾಸದಲ್ಲಿ ಸಮಾಲೋಚನೆ

ಯಡಿಯೂರಪ್ಪ ನಿವಾಸದಲ್ಲಿ ಸಮಾಲೋಚನೆ

ಮುನಿರತ್ನ, ಆರ್ ಆಶೋಕ್ ಸೇರಿದಂತೆ ಹಲವರು ಮುಖ್ಯಮಂತ್ರಿಗಳ ನಿವಾಸದಲ್ಲಿ ಸಭೆ ನಡೆಸಿದ್ದಾರೆ. ಬುಧವಾರ ಸುಪ್ರೀಂಕೋರ್ಟ್ ತೀರ್ಪು ಬೆನ್ನಲ್ಲೇ ಮುನಿರಾಜುಗೌಡ ಅವರಿಗೆ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆ ಸಿಎಂ ಕಚೇರಿಯಿಂದ ಅಧಿಸೂಚನೆ ಹೊರಬಿದ್ದಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ.

English summary
Munirathna was in trouble because Muniraju refused to return the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X