ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅತಿ ಹೆಚ್ಚು ಕಾರು ಹೊಂದಿರುವ ನಗರ ಮುಂಬೈ, ಬೆಂಗಳೂರಿಗೆ ಯಾವ ಸ್ಥಾನ

|
Google Oneindia Kannada News

ಬೆಂಗಳೂರು, ಮಾರ್ಚ್ 25: ವಾಣಿಜ್ಯನಗರ ಮುಂಬೈ ವಾಹನ ದಟ್ಟಣೆ ಸುದ್ದಿಯಲ್ಲಿ ಮೊದಲ ಸ್ಥಾನದಲ್ಲಿದೆ. ಪ್ರತಿ ಕಿಲೋಮೀಟರ್‌ಗೆ ದೇಶದಲ್ಲಿ ಅತಿ ಹೆಚ್ಚು ಕಾರು ಸಾಂಧ್ರತೆ ಇರುವ ನಗರ ಎನ್ನುವ ಕುಖ್ಯಾತಿಗೆ ಪಾತ್ರವಾಗಿದೆ. ಪ್ರತಿ ಕಿ.ಮೀಗೆ 510 ಕಾರುಗಳಿವೆ ಎಂದು ವರದಿಯಲ್ಲಿ ದಾಖಲಾಗಿದೆ.

ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

ಅತಿ ಕಡಿಮೆ ಕಾರು ದಟ್ಟೆಣೆ ಇರುವ ನಗರಗಳ ಪೈಕಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಪ್ರತಿ ಕಿ.ಮೀ 148 ಕಾರುಗಳು ಬೆಂಗಳೂರಿನಲ್ಲಿವೆ ಎನ್ನುವ ವಿಷಯ ಬಹಿರಂಗಗೊಂಡಿದೆ.

ಫುಟ್‌ಪಾತ್ ಮೇಲೆ ಬೈಕ್ ಸಂಚಾರಕ್ಕೆ ಬಿತ್ತು ಬ್ರೇಕ್ ಫುಟ್‌ಪಾತ್ ಮೇಲೆ ಬೈಕ್ ಸಂಚಾರಕ್ಕೆ ಬಿತ್ತು ಬ್ರೇಕ್

2016ರಲ್ಲಿ ನಡೆದ ಸಮೀಕ್ಷೆಯಲ್ಲಿ 430 ಕಾರುಗಳಿದ್ದವು ಕಳೆದ ಎರಡು ವರ್ಷಗಳಲ್ಲಿ ಪ್ರತಿ ಕಿ.ಮೀ 80 ಕಾರುಗಳು ಹೆಚ್ಚಾಗಿವೆ. ನಂತರ ಸ್ಥಾನದಲ್ಲಿ ಮಹಾರಾಷ್ಟ್ರದ ಪುಣೆ ಪ್ರತಿ ಕಿ.ಮೀಗೆ 359ಕಾರುಗಳನ್ನು ಹೊಂದಿದೆ.

Mumbai car density 3 times that of Bengaluru

ಇದನ್ನು ಬಿಟ್ಟರೆ ಕೊಲ್ಕತ್ತ, ಚೆನ್ನೈ, ಬೆಂಗಳೂರು, ದೆಹಲಿ ನಂತರದ ಸ್ಥಾನದಲ್ಲಿದೆ. ಕೊಲ್ಕತ್ತದಲ್ಲಿ 319, ಚೆನ್ನೈನಲ್ಲಿ 297, ದೆಹಲಿಯಲ್ಲಿ 108, ಬೆಂಗಳೂರಿನಲ್ಲಿ ಪ್ರತಿ ಕಿ.ಮೀಗೆ 149 ಕಾರುಗಳಿವೆ ಎಂದು ವರದಿ ತಿಳಿಸಿದೆ.

ಬೆಂಗಳೂರಿನ ಬಸವಳಿದ ಬೀದಿಗೆ ಐದೂವರೆ ಲಕ್ಷ ಹೊಸ ವಾಹನ ಬೆಂಗಳೂರಿನ ಬಸವಳಿದ ಬೀದಿಗೆ ಐದೂವರೆ ಲಕ್ಷ ಹೊಸ ವಾಹನ

ಕಾರಿನ ಸಾಂಧ್ರತೆ ಹೆಚ್ಚಾಗಿರುವುದು ಮುಂಬೈ, ಒಉಣೆಯಂತಹ ಮಹಾನಗರಗಳಿಗೆ ತಲೆನೋವಾಗಿದೆ. ಪಾರ್ಕಿಂಗ್ ಸಮಸ್ಯೆಯೂ ಕೂಡ ವಿಪರೀತವಾಗಿದೆ. ಈ ರೀತಿಯ ಕಾರು ಖರೀದಿ ಪ್ರಕ್ರಿಯೆಗೆ ತಡೆ ಹಾಕದಿದ್ದರೆ ಮುಂಬೈ ಹಾಗೂ ಪುಣೆ ನಗರಗಳು ವಾಹನ ದಟ್ಟಣೆ ಹಾಗೂ ವಾಯುಮಾಲಿನ್ಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎಂದು ಸಮೀಕ್ಷೆ ತಿಳಿಸಿದೆ.

English summary
Mumbai is the most car-congested city in India. The density of private cars in Mumbai soared 18percent in just two years to 510 cars for every kilometre of road. This has resulted in huge traffic jams, pollution and unauthorised parking.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X