ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

KIAL: ಹೊರ ರಾಜ್ಯದ ವಾಹನಗಳಿಗೆ ಸೂಪರ್ ಫಾಸ್ಟ್ ಎಂಟ್ರಿ ಕೊಡಿಸುವ ಕಾಮಗಾರಿಗಳಿವು

|
Google Oneindia Kannada News

ಬೆಂಗಳೂರು, ಮೇ30:ಬೆಂಗಳೂರು ನಗರ ಸಂಚಾರ ನಿಯಂತ್ರಣಕ್ಕಾಗಿ ಮೆಗಾ ಪ್ಲಾನ್ ಯೋಜನೆಗಳು ಪ್ರಗತಿಯಲ್ಲಿದೆ. ಸಿಲಿಕಾನ್ ಸಿಟಿಯಲ್ಲಿನ ಸಂಚಾರವನ್ನು 2024 ವೇಳೆಗೆ ಶೇ 20% ತಗ್ಗಿಸುವುದಾಗಿದೆ. KRDCL ನಿಂದ ಸಾಗಿರುವ ರಸ್ತೆಗಳ ಅಭಿವೃದ್ದಿ ಕಾರ್ಯ 2024ಕ್ಕೆ‌ ಕಾಮಗಾರಿ ಪೂರ್ಣಗೊಳ್ಳುವ ಭರವಸೆ ಮೂಡಿದೆ. ಹೊರ ರಾಜ್ಯದ ವಾಹನ ನಗರಕ್ಕೆ ಪ್ರವೇಶಿಸದೇ ನೇರವಾಗಿ ವಿಮಾನ ನಿಲ್ದಾಣಕ್ಕೆ ಸಂಪರ್ಕವನ್ನು ನೀಡುವ ರಸ್ತೆಗಳ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ.

ನಗರದ ಟ್ರಾಫಿಕ್‌ಗೆ ಕಡಿವಾಣ ಹಾಕುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ. ಈ ಯೋಜನೆ ಪೂರ್ಣಗೊಂಡರೆ ಶೇ 20 ಸಂಚಾರ ದಟ್ಟಣೆಗೆ ಕಡಿವಾಣ ಬೀಳಲಿದೆ. ಹೊರರಾಜ್ಯದಿಂದ ಬರುವ ವಾಹನಗಳು ನಗರವನ್ನು ಪ್ರವೇಶಿಸದೇ ನೇರವಾಗಿ ವಿಮಾನ ನಿಲ್ದಾಣಕ್ಕೆ ಸಂಪರ್ಕರನ್ನು ನೀಡಲಿರುವ ಯೋಜನೆ 72 ಸಾವಿರ ಕೋಟಿ ವೆಚ್ಚದಲ್ಲಿ ಸಪೋರ್ಟಿಂಗ್ ರಸ್ತೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಬೆಂಗಳೂರು ಸುತ್ತಲಿನ 154 ಕಿ.ಮೀ ಉದ್ದದ ರಸ್ತೆ ಅಭಿವೃದ್ದಿ ಕಾರ್ಯ ನಡೆಯುತ್ತಿದೆ.

ಈ ಯೋಜನೆಯಲ್ಲಿ ಯಾವುದೇ ಹೊಸರಸ್ತೆಯನ್ನು ನಿರ್ಮಾಣ ಮಾಡುತ್ತಿಲ್ಲ, ಬದಲಾಗಿ ಇರುವ ರಸ್ತೆಗೆ ಅಭಿವೃದ್ದಿ. ಈಗಿರುವ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳನ್ನು ಎರಡು ಪಥದಿಂದ ನಾಲ್ಕು ಪಥಗಳಿಗೆ ವಿಸ್ತರಣೆ ಮಾಡಲಾಗುತ್ತಿದೆ. ಮೇಲ್ಸೇತುವೆ ಮತ್ತು ಅಂಡರ್ ಪಾಸ್‌ಗಳನ್ನು ನಿರ್ಮಿಸಿ ಸಿಗ್ನಲ್ ಫ್ರೀ ಕಾರಿಡಾರ್‌ಗಳಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಕಳೆದ 5 ತಿಂಗಳಿಂದ ಕಾಮಗಾರಿ ಆರಂಭ ಗೊಂಡಿದ್ದು, ಶೇ.50 ರಷ್ಟು ಅಭಿವೃದ್ಧಿ ಕೆಲಸ ಪೂರ್ಣವಾಗಿದೆ.

ಯಾವ ಯಾವ ನಗರದ ಕಡೆಯಿಂದ ಸಂಪರ್ಕ

ಯಾವ ಯಾವ ನಗರದ ಕಡೆಯಿಂದ ಸಂಪರ್ಕ

KRDCL ನಿಂದ ಸಾಗಿದ ರಸ್ತೆಗಳ ಅಭಿವೃದ್ದಿ ಕಾರ್ಯದಲ್ಲಿ ಮೈಸೂರು, ತುಮಕೂರು, ಹಾಸನ, ಆನೇಕಲ್, ಸೇರಿದಂತೆ ರಾಜ್ಯದ ವಿವಿಧ ಭಾಗದಿಂದ ಏರ್‌ಪೂರ್ಟ್‌ಗೆ ಬರುವವರಿಗೆ ಸೀಟಿ ಪ್ರವೇಶಿಸದೆ ನೇರ ಸಂಪರ್ಕವನ್ನು ಕಲ್ಪಿಲಾಗುತ್ತಿದೆ. 1.92 ಕಿಲೋ ಮೀಟರ್‌ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಮಾಡಲಾಗುತ್ತಿದೆ. KRDCL ನಿಂದ ಸಾಗಿದ ರಸ್ತೆಗಳ ಅಭಿವೃದ್ದಿ ಕಾರ್ಯ 2024 ಕ್ಕೆ‌ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

KRDCL ನ ಸಿಇ ರವೀಂದ್ರನಾಥ್ ಮಾಹಿತಿ

KRDCL ನ ಸಿಇ ರವೀಂದ್ರನಾಥ್ ಮಾಹಿತಿ

ವಾಹನ ದಟ್ಟಣೆ ತಪ್ಪಿಸುವ ಉದ್ದೇಶದಿಂದ 1.92 ಕಿ ಮೀ. ಉದ್ದದ ಎಲಿವೇಟೆಡ್ ಕಾರಿಡಾರ್‌ ಅನ್ನು 182.16 ಕೋಟಿ ವೆಚ್ಚದಲ್ಲಿ ನಿಲ್ದಾಣ ಮಾಡಲಾಗುತ್ತಿದೆ.2024ರ ಜೂನ್ ವೇಳೆಗೆ ಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿದೆ. ಹೆಚ್ಚುವರಿಯಾಗಿ ರಾಜ್ಯ ಸರ್ಕಾರದಿಂದ 587.20 ಕೋಟಿ ರು. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಗೊಲ್ಲಹಳ್ಳಿ, ರಾಮಾನು ಕುಂಟೆ, ನಾರಾಯಣಪುರ, ಕಾಡುಗೋಡಿ ಬಳ್ಳಿ ರೈಲ್ವೆ ಮೇಲ್ವೇತುವೆ, ಬಸವನಹಳ್ಳಿ ಬಳಿ ವರ್ತೂರು ಕೋಡಿ ಸೇರಿದಂತೆ ಒಟ್ಟು ಮೂರು ಅಭಿವೃದ್ಧಿ ಕಾರ್ಯ ಆರಂಭ ಎಂದು KRDCL ನ ಮುಖ್ಯ ಎಂಜಿನಿಯರ್ ರವೀಂದ್ರನಾಥ್ ಮಾಹಿತಿ ನೀಡಿದ್ದಾರೆ.

ಸಂಚಾರದಟ್ಟಣೆಯಿಲ್ಲದ ಪ್ರಯಾಣ

ಸಂಚಾರದಟ್ಟಣೆಯಿಲ್ಲದ ಪ್ರಯಾಣ

ಬೆಂಗಳೂರಿನ ಹೊರಭಾಗದದಲ್ಲಿರುವ ಬೂದಿಗೆರೆ ಕ್ರಾಸ್‌ನಿಂದ ಏರ್ಪೋರ್ಟ್ , ನೆಲಮಂಗಲದಿಂದ ಮಧುರೆ ಕೆಡೆ ಮತ್ತು ಮಧುರೆಯಿಂದ (NH 74) ದೇವನಹಳ್ಳಿ ರಸ್ತೆ (NH 7)ಗೆ ಸಂಪರ್ಕ,ಬಿಡದಿಯಿಂದ ಜಿಗಣಿ ಕಡೆಗೆ , ಬನ್ನೇರುಘಟ್ಟದಿಂದ ಆನೇಕಲ್ ಬಳಿಯ ಬೆಸ್ತಮಾನಹಳ್ಳಿ, ಬೆಸ್ತಮಾನಹಳ್ಳಿ (SH-35) ಹೊಸಕೋಟೆಗೆ ರಸ್ತೆ ಸಂಪರ್ಕವನ್ನು ಕಲ್ಪಿಸುವ ಮೂಲಕ ನಗರದ ಸಂಚಾರವನ್ನು ನಿಯಂತ್ರಣಕ್ಕೆ ಯೋಜನೆ ಕಾರ್ಯಗತವಾಗಿದೆ. ಇದರಿಂದಗಾಗಿ ವಿಮಾನ ನಿಲ್ದಾಣ ಮಾತ್ರವಲ್ಲದೇ ಬೇರೆ ಬೇರೆ ಭಾಗಕ್ಕೆ ಅದರಲ್ಲೂ ಬೆಂಗಳೂರು ಹೊರವಲಯಕ್ಕೆ ಸಂಚಾರ ದಟ್ಟಣೆ ಇಲ್ಲದಂತೆ ಸಂಚಾರಿಸಲು ಅನುಕೂಲವಾಗಲಿದೆ.

ರಸ್ತೆ ಉದ್ದ - ಮೊತ್ತ - ಎಲ್ಲಿಂದ ಎಲ್ಲಿಗೆ?

ರಸ್ತೆ ಉದ್ದ - ಮೊತ್ತ - ಎಲ್ಲಿಂದ ಎಲ್ಲಿಗೆ?

• ಪ್ಯಾಕೇಜ್ 1 - 20.11 - 154.01- ಬೂದಿಗೆರೆ ಕ್ರಾಸ್ ನಿಂದ ಏರ್ಪೋರ್ಟ್

• ಪ್ಯಾಕೇಜ್ 2 (ಎ) - 15.25 - 174.37 - ನೆಲಮಂಗಲದಿಂದ ಮಧುರೆ

• ಪ್ಯಾಕೇಜ್ 2 (ಬಿ) - 23.99 - 190.19- ಮಧುರೆಯಿಂದ (NH 74) ದೇವನಹಳ್ಳಿ ರಸ್ತೆ (NH 7)

• ಪ್ಯಾಕೇಜ್ -3 (ಎ) 33.20 -151.29 - ಬಿಡದಿಯಿಂದ ಜಿಗಣಿ

• ಪ್ಯಾಕೇಜ್ 3 (ಬಿ) - 22.98 - 154.48 - ಬನ್ನೇರುಘಟ್ಟದಿಂದ ಆನೇಕಲ್ ಬಳಿಯ ಬೆಸ್ತಮಾನಹಳ್ಳಿ

• ಪ್ಯಾಕೇಜ್ 4 (ಎ) - 39. 28 - 204. - ಬೆಸ್ತಮಾನಹಳ್ಳಿ (SH-35) ಹೊಸಕೋಟೆ

Recommended Video

Nirmala Sitharaman ಅವರು ಬೊಮ್ಮಾಯಿ, ಬಿಎಸ್ವೈ ಜೊತೆಗೆ ನಾಮಪತ್ರ ಸಲ್ಲಿಸಿದರು | OneIndia Kannada

English summary
Multiple mega-projects Is in progress to control Bengaluru City Traffic at least 20 percent by 2024. KRDCL road development works to complete by 2024. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X