ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಭೆಗಳಿಗೆ ಜನ ಸೇರಿಸಲು ಅನರ್ಹ ಶಾಸಕ ಎಂಟಿಬಿ ನಾಗರಾಜ್ ವಿಭಿನ್ನ ತಂತ್ರ

|
Google Oneindia Kannada News

ಹೊಸಕೋಟೆ, ಅಕ್ಟೋಬರ್ 25: ಹೊಸಕೋಟೆಯ ಅನರ್ಹ ಶಾಸಕ ಎಂಟಿಬಿ ನಾಗರಾಜು ಅವರಿಗೆ ಉಪಚುನಾವಣೆಯ ದಿಗಿಲು ಈಗಾಗಲೇ ಪ್ರಾರಂಭವಾಗಿದೆ. ಡಿಸೆಂಬರ್‌ ನಲ್ಲಿ ನಡೆಯಲಿರುವ ಚುನಾವಣೆಗೆ ಈಗಾಗಲೇ ತಯಾರಿ ಆರಂಭಿಸಿದ್ದಾರೆ. ಆದರೆ ಅವರ ಸಭೆಗಳಿಗೆ ಜನರೇ ಬರುತ್ತಿಲ್ಲವಂತೆ.

ಎಂಟಿಬಿ ನಾಗರಾಜು, ತಮ್ಮ ವಿಧಾನಸಭಾ ಕ್ಷೇತ್ರದ ಗ್ರಾಮ ಪಂಚಾಯಿತಿ ಗಳಲ್ಲಿ ಸಭೆ ನಡೆಸುತ್ತಿದ್ದು, ಎಂಟಿಬಿ ಸಭೆಗಳಿಗೆ ಜನರೇ ಬರುತ್ತಿಲ್ಲ. ಆದರೆ ನುರಿತ ರಾಜಕಾರಣಿ ಜೊತೆಗೆ ರಾಜ್ಯದ ಶ್ರೀಮಂತ ರಾಜಕಾರಣಿ ಎಂಟಿಬಿ ನಾಗರಾಜು ತಮ್ಮ ಸಭೆಗೆ ಜನರನ್ನು ಕರೆಸಿಕೊಳ್ಳಲು ತಂತ್ರವೊಂದನ್ನು ಪ್ರಯೋಗಿಸಿದ್ದಾರೆ.

ಹೊಸಕೋಟೆ ಉಪ ಚುನಾವಣೆ; ಕಾಂಗ್ರೆಸ್ ಅಭ್ಯರ್ಥಿ ಅಂತಿಮ?ಹೊಸಕೋಟೆ ಉಪ ಚುನಾವಣೆ; ಕಾಂಗ್ರೆಸ್ ಅಭ್ಯರ್ಥಿ ಅಂತಿಮ?

ಎಂಟಿಬಿ ನಾಗರಾಜು ಸಭೆ ನಡೆಸುವ ಗ್ರಾಮ ಪಂಚಾಯಿತಿ ಕೇಂದ್ರಕ್ಕೆ ಒಳಪಡುವ ಎಲ್ಲ ಎಲ್ಲ ಗ್ರಾಮಗಳಿಗೆ ಟೋಕನ್‌ಗಳನ್ನು ಹಂಚುತ್ತಿದ್ದಾರೆ. ಆ ಟೋಕನ್ ಅನ್ನು ತೋರಿಸಿದರೆ ಸೀರೆ ಮತ್ತು ಕಂಬಳಿ ಯನ್ನು ಉಚಿತವಾಗಿ ಪಡೆಯಬಹುದು.

ಸಭೆಗೆ ಬಂದು ಟೋಕನ್ ತೋರಿಸಿದರೆ ಸೀರೆ

ಸಭೆಗೆ ಬಂದು ಟೋಕನ್ ತೋರಿಸಿದರೆ ಸೀರೆ

ಎಂಟಿಬಿ ನಾಗರಾಜು ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಸಭೆ ನಡೆಸುವ ಸ್ಥಳಕ್ಕೆ ಆ ಟೋಕನ್ ತಂದು ತೋರಿಸಿದರೆ ಒಂದು ಟೋಕನ್‌ಗೆ ಒಂದು ಸೀರೆ ಮತ್ತು ಕಂಬಳಿಯನ್ನು ಉಚಿತವಾಗಿ ನೀಡಲಾಗುತ್ತದೆ. ಹೊಸಕೋಟೆ ಕ್ಷೇತ್ರದ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಎಂಟಿಬಿ ಸಭೆ ನಡೆಸುತ್ತಿದ್ದು ಎಲ್ಲ ಹಳ್ಳಿಗಳಲ್ಲೂ ಸೀರೆ ಟೋಕನ್ ಹಂಚಲಾಗುತ್ತಿದೆ.

ಮಂಜುನಾಥ ಸ್ವಾಮಿ ದೇವರ ಚಿತ್ರ ಇದೆ

ಮಂಜುನಾಥ ಸ್ವಾಮಿ ದೇವರ ಚಿತ್ರ ಇದೆ

ಹಂಚಲಾಗುತ್ತಿರುವ ಟೋಕನ್‌ಗಳ ಮೇಲೆ ಮಂಜುನಾಥ ಸ್ವಾಮಿ ದೇವರ ಚಿತ್ರ ಮುದ್ರಿಸಿ ಭಾವನಾತ್ಮಕವಾಗಿ ಮತದಾರರನ್ನು ಸೆಳೆಯುವ ಯತ್ನ ಮಾಡಲಾಗುತ್ತಿದೆ. 'ಮಕ್ಕಳ ಕೈಯಲ್ಲಿ ಟೋಕನ್ ಕಳುಹಿಸಿದರೆ ಟೋಕನ್ ವಾಪಸ್ ಪಡೆಯಲಾಗುವುದು' ಎಂದು ಟೋಕನ್ ಮೇಲೆ ಸೂಚನೆಯನ್ನೂ ಮುದ್ರಿಸಲಾಗಿದೆ.

ಸಿಎಂ ಕೊಟ್ಟ 'ಉಡುಗೊರೆ' ತಿರಸ್ಕರಿಸಿದ ಶರತ್ ಬಚ್ಚೇಗೌಡ:ಎಂಟಿಬಿಗೆ ಆತಂಕಸಿಎಂ ಕೊಟ್ಟ 'ಉಡುಗೊರೆ' ತಿರಸ್ಕರಿಸಿದ ಶರತ್ ಬಚ್ಚೇಗೌಡ:ಎಂಟಿಬಿಗೆ ಆತಂಕ

ಟೋಕನ್ ಮೇಲೆ ತಮ್ಮ ಹೆಸರು ಬರೆಸಿಕೊಂಡಿದ್ದಾರೆ

ಟೋಕನ್ ಮೇಲೆ ತಮ್ಮ ಹೆಸರು ಬರೆಸಿಕೊಂಡಿದ್ದಾರೆ

ಟೋಕನ್ ಮೇಲೆ ಎಂಟಿಬಿ ಎಂದು ಇಂಗ್ಲಿಷ್‌ನಲ್ಲಿ ದೊಡ್ಡ ಅಕ್ಷರಗಳಲ್ಲಿ ಬರೆಯಲಾಗಿದ್ದು, 'ನೀರು ಮಿತವಾಗಿ ಬಳಸಿ, ಮುಂದಿನ ಪೀಳಿಗೆಗೆ ನೀರು ಉಳಿಸಿ' ಎಂಬ ಕೆಲವು ವಾಕ್ಯಗಳನ್ನು ಮುದ್ರಿಸಲಾಗಿದೆ.

ಎಂಟಿಬಿ ನಾಗರಾಜು ವಿರುದ್ಧ ತೊಡೆ ತಟ್ಟಿದ್ದ ಡಿಕೆಶಿ

ಎಂಟಿಬಿ ನಾಗರಾಜು ವಿರುದ್ಧ ತೊಡೆ ತಟ್ಟಿದ್ದ ಡಿಕೆಶಿ

ಎಂಟಿಬಿ ನಾಗರಾಜು ಅವರಿಗೆ ಬಿಜೆಪಿ ಇಂದ ಟಿಕೆಟ್‌ ಬಹುತೇಕ ಪಕ್ಕಾ ಆಗಿದ್ದು, ಈಗಾಗಲೇ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಎಂಟಿಬಿ ನಾಗರಾಜು ಅನ್ನು ಸೋಲಿಸಲೇಬೇಕೆಂದು ಹಠಕ್ಕೆ ನಿಂತಿರುವ ಕಾರಣ ನಾಗರಾಜು ಹೆಚ್ಚಿನ 'ಶ್ರಮ' ಹಾಕಿ ಪ್ರಚಾರ ನಡೆಸುತ್ತಿದ್ದಾರೆ.

ಸಿದ್ದರಾಮಯ್ಯ ಮಗನ ಸಾವಿಗೆ ಕಾರಣ ಯಾರು? ಎಂಟಿಬಿ ನಾಗರಾಜ್ ಸ್ಪೋಟಕ ಹೇಳಿಕೆಸಿದ್ದರಾಮಯ್ಯ ಮಗನ ಸಾವಿಗೆ ಕಾರಣ ಯಾರು? ಎಂಟಿಬಿ ನಾಗರಾಜ್ ಸ್ಪೋಟಕ ಹೇಳಿಕೆ

ಎಂಟಿಬಿ ನಾಗರಾಜು ಎದುರಾಳಿ ಶರತ್ ಬಚ್ಚೇಗೌಡ

ಎಂಟಿಬಿ ನಾಗರಾಜು ಎದುರಾಳಿ ಶರತ್ ಬಚ್ಚೇಗೌಡ

ಎಂಟಿಬಿ ನಾಗರಾಜು ಗೆ ಬಿಜೆಪಿ ಟಿಕೆಟ್ ಪಕ್ಕಾ ಆಗಿರುವ ಕಾರಣ ಬಿಜೆಪಿ ಇಂದ ಕಳೆದ ಬಾರಿ ಸ್ಪರ್ಧಿಸಿದ್ದ ಶರತ್ ಬಚ್ಚೇಗೌಡ ಪಕ್ಷೇತರವಾಗಿ ಸ್ಪರ್ಧಿಸಲು ಅಭಿಯಾಗುತ್ತಿದ್ದು, ಅವರೂ ಸಹ ಕ್ಷೇತ್ರ ಪ್ರವಾಸ ಮಾಡಿ, ಸ್ವಾಭಿಮಾನಿ ಸಭೆಗಳನ್ನು ನಡೆಸುತ್ತಿದ್ದಾರೆ. ಹೊಸಕೋಟೆ ಕ್ಷೇತ್ರ ಉಪಚುನಾವಣೆ ಕದನ ಭಾರಿ ಕುತೂಹಲ ಮೂಡಿಸಿರುವುದಂತೂ ನಿಜ.

English summary
Disqualified MTB Nagaraju new idea to gather people to his election campaign. He distrubuting saree and blanket.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X