ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಡಿಯೂರಪ್ಪ ಅವರನ್ನು ಮತ್ತೆ ಭೇಟಿಯಾದ ಎಂಟಿಬಿ ನಾಗರಾಜ್: ಏನೇನು ಚರ್ಚೆ?

|
Google Oneindia Kannada News

Recommended Video

ಸೋತ ನಾಯಕರಿಗೆ ಸಚಿವ ಸ್ಥಾನ ಕೊಡ್ತಾರಾ ಬಿಎಸ್ ವೈ? | Oneindia Kannada

ಬೆಂಗಳೂರು, ಜನವರಿ 4: ಮುಖ್ಯಮಂತ್ರಿ ಬಿ.ಎಸ್, ಯಡಿಯೂರಪ್ಪ ಅವರನ್ನು ಎಂಟಿಬಿ ನಾಗರಾಜ್ ಭೇಟಿಯಾಗಿದ್ದಾರೆ.

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್​ನಿಂದ ವಲಸೆ ಬಂದ ಅನರ್ಹ ಶಾಸಕರಿಗೆ ಟಿಕೆಟ್ ನೀಡುತ್ತಿರುವುದಕ್ಕೆ ಬಿಜೆಪಿಯ ಹಲವು ನಾಯಕರಲ್ಲಿ ಅಸಮಾಧಾನ ಭುಗಿಲೆದ್ದಿತ್ತು.

ಎಂಟಿಬಿ ನಾಗರಾಜ್ ಕಳೆದೊಂದು ತಿಂಗಳಲ್ಲಿ ಹಲವು ಬಾರಿ ಸಿಎಂ ಮನೆಗೆ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ. ಇಂದು ಮತ್ತೆ ಯಡಿಯೂರಪ್ಪನವರ ಡಾಲರ್ಸ್​ ಕಾಲೋನಿಯ ಮನೆಗೆ ಭೇಟಿ ನೀಡಿದ್ದಾರೆ.

 ಗೆದ್ದವರಿಗೆ ಸ್ಥಾನಮಾನ ಖಚಿತ ಎಂದ ಈಶ್ವರಪ್ಪ ಗೆದ್ದವರಿಗೆ ಸ್ಥಾನಮಾನ ಖಚಿತ ಎಂದ ಈಶ್ವರಪ್ಪ

ಚುನಾವಣೆಯಲ್ಲಿ ಸೋತಿರುವ ತಮಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡುವಂತೆ ಬೇಡಿಕೆಯಿಟ್ಟಿದ್ದಾರೆ. ಇನ್ನೂ ಸಚಿವ ಸಂಪುಟ ವಿಸ್ತರಣೆಯಾಗದ ಹಿನ್ನೆಲೆ ಲಾಬಿ ಮುಂದುವರೆಸಿರುವ ಎಂಟಿಬಿ ನಾಗರಾಜ್ ಹೇಗಾದರೂ ಮಾಡಿ ತಮ್ಮನ್ನು ಸಚಿವರನ್ನಾಗಿ ಮಾಡುವಂತೆ ಮನವಿ ಮಾಡಿದ್ದಾರೆ.

ನಿಯಮಿತ ಸಚಿವ ಸ್ಥಾನಗಳಲ್ಲಿ ಮೂಲ ಬಿಜೆಪಿಗರಿಗೆ ಆದ್ಯತೆ ನೀಡುವುದೋ ಅಥವಾ ತಮ್ಮ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣವಾಗಿರುವ ವಲಸಿಗರಿಗೆ ಅವಕಾಶ ನೀಡುವುದೋ ಎಂಬ ಗೊಂದಲದಲ್ಲಿರುವ ಯಡಿಯೂರಪ್ಪ ಇದ್ದಾರೆ.

 ಕಾಂಗ್ರೆಸ್‌ ಜೆಡಿಎಸ್ ಮೇಲಿನ ಅಸಮಾಧಾನಕ್ಕೆ ರಾಜೀನಾಮೆ

ಕಾಂಗ್ರೆಸ್‌ ಜೆಡಿಎಸ್ ಮೇಲಿನ ಅಸಮಾಧಾನಕ್ಕೆ ರಾಜೀನಾಮೆ

ಕಾಂಗ್ರೆಸ್ ಮತ್ತು ಜೆಡಿಎಸ್​ ನಾಯಕರ ಮೇಲಿನ ಅಸಮಾಧಾನದಿಂದ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅತೃಪ್ತ ಶಾಸಕರು ನಂತರ ಹಲವು ನಾಟಕಗಳ ಬಳಿಕ ಬಿಜೆಪಿ ಸೇರ್ಪಡೆಯಾಗಿದ್ದರು.

 ವಿಧಾನಸಭಾ ಉಪ ಚುನಾವಣೆಯಲ್ಲಿ ಇಬ್ಬರಿಗೆ ಸೋಲು

ವಿಧಾನಸಭಾ ಉಪ ಚುನಾವಣೆಯಲ್ಲಿ ಇಬ್ಬರಿಗೆ ಸೋಲು

ಈ ಬಾರಿಯ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಅನರ್ಹ ಶಾಸಕರ ಪೈಕಿ ಇಬ್ಬರು ಮಾತ್ರ ಸೋಲನ್ನು ಅನುಭವಿಸಿದ್ದರು. ಆ ಇಬ್ಬರು ತಮಗೆ ಸಚಿವ ಸ್ಥಾನ ನೀಡಬೇಕೆಂದು ಸಿಎಂ ಯಡಿಯೂರಪ್ಪನವರ ಬಳಿ ಭಾರೀ ಲಾಬಿ ನಡೆಸುತ್ತಿದ್ದಾರೆ.

 ಯಡಿಯೂರಪ್ಪ ಅನರ್ಹರಿಗೆ ಟಿಕೆಟ್ ನೀಡಿದ್ದರು

ಯಡಿಯೂರಪ್ಪ ಅನರ್ಹರಿಗೆ ಟಿಕೆಟ್ ನೀಡಿದ್ದರು

ಆ ಅಸಮಾಧಾನವನ್ನು ಶಮನ ಮಾಡುವುದರಲ್ಲಿ ಯಶಸ್ವಿಯಾಗಿದ್ದ ಸಿಎಂ ಬಿ.ಎಸ್. ಯಡಿಯೂರಪ್ಪ ಕೊಟ್ಟ ಮಾತಿನಂತೆ 14 ಕ್ಷೇತ್ರಗಳಲ್ಲಿ ಅನರ್ಹ ಶಾಸಕರಿಗೆ ಟಿಕೆಟ್ ನೀಡಿದ್ದರು. ಶಿವಾಜಿನಗರದ ಅನರ್ಹ ಶಾಸಕ ರೋಷನ್ ಬೇಗ್​ಗೆ ಕೊನೆಕ್ಷಣದಲ್ಲಿ ಕೈಕೊಟ್ಟಿದ್ದ ಯಡಿಯೂರಪ್ಪ ಆ ಕ್ಷೇತ್ರದಲ್ಲಿ ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರು.

 ಎಂಟಿಬಿ ನಾಗರಾಜ್ ಶರತ್ ಬಚ್ಚೇಗೌಡ ವಿರುದ್ಧ ಸೋತಿದ್ದರು

ಎಂಟಿಬಿ ನಾಗರಾಜ್ ಶರತ್ ಬಚ್ಚೇಗೌಡ ವಿರುದ್ಧ ಸೋತಿದ್ದರು

ಆದರೆ, ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ವಿರುದ್ಧ ಎಂಟಿಬಿ ನಾಗರಾಜ್ ಮತ್ತು ಹುಣಸೂರಿನಲ್ಲಿ ಎಚ್​.ಪಿ. ಮಂಜುನಾಥ್ ವಿರುದ್ಧ ಎಚ್​. ವಿಶ್ವನಾಥ್ ಪರಾಭವಗೊಂಡಿದ್ದರು. ಸೋಲಿನಿಂದ ಸಚಿವರಾಗುವ ಕನಸು ಕಂಡಿದ್ದ ಈ ಇಬ್ಬರು ಹಿರಿಯ ನಾಯಕರಿಗೆ ನಿರಾಸೆ ಉಂಟಾಗಿತ್ತು. ಆದರೂ ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್ ತಮಗೆ ಸಚಿವ ಸ್ಥಾನ ನೀಡಬೇಕೆಂದು ಭಾರೀ ಲಾಬಿ ನಡೆಸತೊಡಗಿದ್ದಾರೆ.

English summary
MTB Nagaraj And H Vishwanath meet Chief Minister BS Yediyurappa In his residence regarding cabinet expansion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X