ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಿಡಿದ ಪಟ್ಟು ಬಿಡದ ಎಂಟಿಬಿ ನಾಗರಾಜ್, ಗುರಿ ತಲುಪುವಲ್ಲಿ ಕೊನೆಗೂ ಯಶಸ್ವಿ?

|
Google Oneindia Kannada News

ಹಲವು ಸುತ್ತಿನ ಆಪರೇಷನ್ ಕಮಲ ಕೊನೆಗೂ ಕೈಗೂಡಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಆರಂಭದ ದಿನಗಳಲ್ಲಿ ಹೊಸಕೋಟೆಯ ಪರಾಜಿತ ಅಭ್ಯರ್ಥಿ ಎಂ.ಟಿ.ಬಿ ನಾಗರಾಜ್ ಅವರ ಒತ್ತಡ, ಬಿಎಸ್ವೈ ಮೇಲೆ ಹೇಗಿತ್ತು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ.

Recommended Video

ಆಂಧ್ರ ಮುಖ್ಯಮಂತ್ರಿ ಜಗನ್ ಗೆ ಎಚ್ಚರಿಕೆ ಕೊಟ್ಟ ಪ್ರಮೋದ್ ಮುತಾಲಿಕ್..! | Pramod Mutalik

ಸಚಿವರನ್ನಾಗಿ ಮಾಡಿ ಎನ್ನುವ ಎಂಟಿಬಿ ಅವರ ಒತ್ತಡ ತಾಳಲಾರದೇ ಖುದ್ದು ಮುಖ್ಯಮಂತ್ರಿಗಳೇ ಅವರ ಗರುಡಾಚಾರ್ ಪಾಳ್ಯದಲ್ಲಿರುವ ನಿವಾಸಕ್ಕೆ ಭೇಟಿಯಾಗಿ ಸಮಾಧಾನ ಮಾಡಿ ಬಂದಿದ್ದರು.

MLC ಚುನಾವಣೆ ಬಗ್ಗೆ ಮಹತ್ವದ ನಿರ್ಧಾರ ಪ್ರಕಟಿಸಿದ ಬಿಎಸ್ವೈ ಪುತ್ರ ಬಿವೈ ವಿಜಯೇಂದ್ರMLC ಚುನಾವಣೆ ಬಗ್ಗೆ ಮಹತ್ವದ ನಿರ್ಧಾರ ಪ್ರಕಟಿಸಿದ ಬಿಎಸ್ವೈ ಪುತ್ರ ಬಿವೈ ವಿಜಯೇಂದ್ರ

ಹಾಗೋ, ಹೀಗೋ ತಮ್ಮ ರಾಜಕೀಯ ಅನುಭವದಿಂದ ಎಲ್ಲವನ್ನೂ ಒಂದು ಹಂತಕ್ಕೆ ಸರಿದಾರಿಗೆ ತಂದಿದ್ದ ಯಡಿಯೂರಪ್ಪನವರು, ಸಚಿವ ಸ್ಥಾನದ ಆಕಾಂಕ್ಷಿಗಳನ್ನು ಜೂನ್ ವರೆಗೆ ಸಮಾಧಾನವಾಗಿರುವಂತೆ ಸೂಚಿಸಿದ್ದಾರೆ.

ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದಲ್ಲೂ ಸಚಿವರಾಗಿದ್ದ ಎಂ.ಟಿ.ಬಿ, ಕೊರೊನಾ ಹಾವಳಿಯ ನಡುವೆಯೂ, ಸಚಿವರಾಗಲು ಇನ್ನೊಂದು ಬಾಗಿಲಿನ ಮೂಲಕ ಪ್ರಯತ್ನ ನಡೆಸುತ್ತಲೇ ಇದ್ದರು. ಅದು, ಕೈಗೂಡುವ ಸಮಯ ಬಂದಂತಿದೆ:

ಆರು ವಿಧಾನಪರಿಷತ್ ಸ್ಥಾನಗಳ ಚುನಾವಣೆ

ಆರು ವಿಧಾನಪರಿಷತ್ ಸ್ಥಾನಗಳ ಚುನಾವಣೆ

ಇನ್ನೊಂದು ತಿಂಗಳ ಅವಧಿಯಲ್ಲಿ ಒಟ್ಟು ಆರು ವಿಧಾನಪರಿಷತ್ ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದೆ. ಇದರಲ್ಲಿ ಯಡಿಯೂರಪ್ಪ ಕೊಟ್ಟ ಮಾತಿನಂತೆ ಮತ್ತು ತಮ್ಮ ಸರಕಾರ ಅಧಿಕಾರಕ್ಕೆ ಬರಲು ಕಾರಣರಾದ ಎಚ್.ವಿಶ್ವನಾಥ್, ಎಂಟಿಬಿ ನಾಗರಾಜ್ ಮತ್ತು ಆರ್. ಶಂಕರ್ ಅವರಿಗೆ ಸ್ಥಾನ ಕಲ್ಪಿಸಬೇಕಿದೆ.

ಆನ್‌ಲೈನ್‌ನಲ್ಲಿ ನರೇಂದ್ರ ಮೋದಿ 2.0 ಸರ್ಕಾರದ ಮೊದಲ ವಾರ್ಷಿಕೋತ್ಸವಆನ್‌ಲೈನ್‌ನಲ್ಲಿ ನರೇಂದ್ರ ಮೋದಿ 2.0 ಸರ್ಕಾರದ ಮೊದಲ ವಾರ್ಷಿಕೋತ್ಸವ

ಬಿಎಸ್ವೈ ಪುತ್ರ ಬಿ.ವೈ.ವಿಜಯೇಂದ್ರ

ಬಿಎಸ್ವೈ ಪುತ್ರ ಬಿ.ವೈ.ವಿಜಯೇಂದ್ರ

ಇದರ ಜೊತೆಗೆ, ಬಿಎಸ್ವೈ ಪುತ್ರ ಬಿ.ವೈ.ವಿಜಯೇಂದ್ರ, ಗೋ.ಮಧುಸೂಧನ್, ಸಿ.ಪಿ.ಯೋಗೇಶ್ವರ್ ಅವರು ಕೂಡಾ ಪರಿಷತ್ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಯೋಗೇಶ್ವರ್ ಅವರ ಪಾತ್ರವೂ ಮುಖ್ಯವಾಗಿತ್ತು. ಈ ವಿಚಾರವನ್ನು ಮುಂದಿಟ್ಟು ಕೊಂಡು, ಯೋಗೇಶ್ವರ್, ಪರಿಷತ್ ಸ್ಥಾನಕ್ಕೆ ಪ್ರಯತ್ನಿಸುತ್ತಿದ್ದಾರೆ. ಆದರೆ, ವಿಜಯೇಂದ್ರ, ಪರಿಷತ್ ಸ್ಥಾನಕ್ಕೆ ಲಾಬಿ ನಡೆಸುತ್ತಿಲ್ಲ ಎನ್ನುವ ಹೇಳಿಕೆಯನ್ನು ನೀಡಿದ್ದಾರೆ.

ಡಿ.ಕೆ.ಶಿವಕುಮಾರ್ ಮತ್ತು ಯೋಗೇಶ್ವರ್

ಡಿ.ಕೆ.ಶಿವಕುಮಾರ್ ಮತ್ತು ಯೋಗೇಶ್ವರ್

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಯೋಗೇಶ್ವರ್ ನಡುವೆ ರಾಜಕೀಯ ವೈಷಮ್ಯ ಇರುವುದರಿಂದ, ಒಕ್ಕಲಿಗ ಸಮುದಾಯದ ನಾಯಕರನ್ನಾಗಿ ಯೋಗೇಶ್ವರ್ ಅವರನ್ನು ಮುನ್ನಲೆಗೆ ತರಲು, ಬಿಜೆಪಿ ಹಿರಿಯರು ಪ್ರಯತ್ನಿಸುತ್ತಿದ್ದಾರೆ. ಆದರೆ, ಆಪರೇಷನ್ ಕಮಲದ ಮೂಲಕ ಬಿಜೆಪಿ ಸೇರಿರುವ ಮೂವರಿಗೆ ಸ್ಥಾನ ಕಲ್ಪಿಸಲೇ ಬೇಕಿದೆ. ಹಾಗಾಗಿ, ಯೋಗೇಶ್ವರ್ ಅವರಿಗೆ ಸದ್ಯ ಪರಿಷತ್ ಸ್ಥಾನ ಸಿಗುವುದು ಕಷ್ಟ ಎಂದೂ ಹೇಳಲಾಗುತ್ತಿದೆ.

ಹಿಡಿದ ಹಠ ಬಿಡದ ಎಂಟಿಬಿ ನಾಗರಾಜ್ ಮೇಲುಗೈ

ಹಿಡಿದ ಹಠ ಬಿಡದ ಎಂಟಿಬಿ ನಾಗರಾಜ್ ಮೇಲುಗೈ

ಯಾರಿಗೆ ಸ್ಥಾನ ಸಿಗಲಿ, ಬಿಡಲಿ, ಇಬ್ಬರು ಬಿಜೆಪಿ ನಾಯಕರಾದ ಎಂ.ಟಿ.ಬಿ ನಾಗರಾಜ್ ಮತ್ತು ಎಚ್.ವಿಶ್ವನಾಥ್ ಅವರಿಗೆ ಪರಿಷತ್ ಸ್ಥಾನ ಕಲ್ಪಿಸಿ, ಸಚಿವರನ್ನಾಗಿ ಮಾಡುವುದು ಬಹುತೇಕ ಖಚಿತ. ಆ ಮೂಲಕ, ಬಿಎಸ್ವೈ ಮೇಲೆ ಒತ್ತಡ ಹೇರುತ್ತಲೇ ಬರುತ್ತಿರುವ ಎಂಟಿಬಿ, ಸಚಿವ ಸ್ಥಾನದ ಗುರಿಯನ್ನು ಮುಟ್ಟುವತ್ತು ಸಾಗುತ್ತಿದ್ದಾರೆ.

English summary
BJP Leader MTB Nagaraj May Get Karnataka Upper House Birth By June 2020,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X