ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶ್ವ ಹೃದಯ ದಿನದಂದು ವಿಶಿಷ್ಟ ಆಚರಣೆ ಮೈಸೂರು ವ್ಯಕ್ತಿಗೆ ಹೃದಯಕಸಿ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್, 30: ಎಮ್. ಎಸ್. ರಾಮಯ್ಯದಲ್ಲಿರುವ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ 40 ವರ್ಷದ ವ್ಯಕ್ತಿಗೆ ಯಶಸ್ವಿ ಹೃದಯಕಸಿ ಮಾಡುವ ಮೂಲಕ ವಿಶ್ವ ಹೃದಯ ದಿನವನ್ನು ಆಚರಿಸಲಾಯಿತು. ಮೂಲತಃ ಮೈಸೂರಿನವರಾದ 40 ವರ್ಷದ ವ್ಯಕ್ತಿ, ನಗರದಲ್ಲಿರುವ ಎಮ್. ಎಸ್. ರಾಮಯ್ಯದಲ್ಲಿರುವ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಹೃದಯಬೇನೆ ತೊಂದರೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇವರಿಗೆ ಇಸೆಮಿಕ್ ಡಿಲೆಟೆಡ್ ಕಾರ್ಡಿಯೊಮಯೋಪತಿ ಎಂಬ ತೀವ್ರ ಹೃದಯ ಕಾಯಿಲೆ ಇತ್ತು.

ಇವರಿಗೆ ಸಂರ್ಪೂಣ ಮೌಲ್ಯಮಾಪನ ಮಾಡಿದ ವೈದ್ಯರ ತಂಡ, ಇವರನ್ನು ಹೃದಯಕಸಿಗೆ ಒಳಗಾಗುವಂತೆ ಸೂಚಿಸಿದರು. ರೋಗಿಯು, ನಾಲ್ಕು ತಿಂಗಳ ಹಿಂದೆಯೆ ಹೊಂದಾಣಿಕೆಯಾಗುವ ಹೃದಯಕ್ಕಾಗಿ ನೊಂದಾಯಿಸಿಕೊಂಡಿದ್ದರು. 26 ವರ್ಷದ ಯುವಕನ ಹೃದಯವನ್ನು, ಮೈಸೂರು ನಗರ ನಿವಾಸಿಯಾದ 40 ವರ್ಷದ ವ್ಯಕ್ತಿಗೆ ಹೃದಯನ್ನು ಕಸಿ ಮಾಡಲಾಗಿದೆ.

ದಾನಿಯು 26 ವರ್ಷದ ಯುವಕನಾಗಿದ್ದು, ರಸ್ತೆ ಅಪಘಾತದಲ್ಲಿ ತಲೆಗೆ ಗಾಯಗೊಂಡು ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ, ಯುವಕನ ಮಿದುಳು ನಿಷ್ಕ್ರಿಯಗೊಂಡಿತು. ತದನಂತರ ಆಸ್ಪತ್ರೆಯ ವೈದ್ಯರು ಅಂಗಾಂಗದಾನಕ್ಕೆ ಯುವಕನ ಪೋಷಕರ ಮನವೊಲಿಸಿದರು. ಅಂಗಾಂಗ ದಾನಕ್ಕೆ ಮನೆಯವರು ಒಪ್ಪಿಗೆ ಸೂಚಿಸಿದ್ದರು.

MS Ramaiah Narayana Heart Centre heart transplant surgery World Heart Day

ನಂತರ ಅವರ ಹೃದಯವನ್ನು ಸಂಗ್ರಹಿಸಿ ಬೆಂಗಳೂರಿನ ಎಮ್. ಎಸ್. ರಾಮಯ್ಯದಲ್ಲಿರುವ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಇಸೆಮಿಕ್ ಡಿಲೆಟೆಡ್ ಕಾರ್ಡಿಯೊಮಯೋಪತಿ ಎಂಬ ತೀವ್ರ ಹೃದಯ ಕಾಯಿಲೆಯಿಂದ ಬಳಲುತ್ತಿದ್ದ 40 ವರ್ಷದ ವ್ಯಕ್ತಿಗೆ ಕಸಿ ಮಾಡಲಾಗಿದೆ. ಹೃದಯವನ್ನು ಭಾನುವಾರ ಬೆಳಗಿನ ಜಾವ 2:00 ಗಂಟೆ ಸಮಯದಲ್ಲಿ ನಾರಾಯಣ ಹಾರ್ಟ್ ಸೆಂಟರ್ ಗೆ ರವಾನಿಸಲಾಯಿತು.

MS Ramaiah Narayana Heart Centre heart transplant surgery World Heart Day

ಹೃದಯ ಕಸಿಯನ್ನು ಎಮ್. ಎಸ್. ರಾಮಯ್ಯದಲ್ಲಿರುವ ನಾರಾಯಣ ಹಾರ್ಟ್ ಸೆಂಟರ್ ನ ವೈದ್ಯರಾದ ಡಾ. ರವಿ ಶಂಕರ್ ಶೆಟ್ಟಿ, ಹಿರಿಯ ಕಾರ್ಡಿಯೋವ್ಯಾಸ್ಕುಲರ್ ಹಾಗು ಹೃದಯ ಕಸಿ ಶಸ್ತ್ರಚಿಕಿತ್ಸಕರು, ಯು. ಎಮ್. ನಾಗಮಲ್ಲೇಷ್ , ಹಿರಿಯ ಕಂಸಲ್ಟಂಟ್, ಹಾರ್ಟ್ ಫೇಲ್ಯೂರ್ ಹಾಗು ಹೃದಯ ಕಸಿ ವಿಭಾಗ, ನಾರಾಯಣ ಹೆಲ್ತ್ ಸಿಟಿಯ ಹಿರಿಯ ಕಾರ್ಡಿಯೋತೋರಾಸಿಕ್ ಕಸಿ ಶಸ್ತ್ರಚಿಕಿತ್ಸಕರಾದ ಡಾ. ವರುಣ್ ಶೆಟ್ಟಿ, ಡಾ. ಪ್ರಶಾಂತ್ ರಾಮಮೂರ್ತಿ, ಎಮ್. ಎಸ್. ರಾಮಯ್ಯದಲ್ಲಿರುವ ನಾರಾಯಣ ಹಾರ್ಟ್ ಸೆಂಟರ್‍ನ ಅರಿವಳಿಕೆ ತಜ್ಞರು, ಮತ್ತು ಡಾ. ಗುರು ಪೋಲಿಸ್ ಪಾಟಿಲ್ ತಂಡ ಯಶಸ್ವಿಯಾಗಿ ನೆರವೇರಿಸಿದ್ದಾರೆ.

English summary
MS Ramaiah Narayana Heart Centre– a unit managed by Narayana Health, celebrated World Heart Day by successfully performing a heart transplant surgery.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X