ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಿರಿಯ ನಾಗರಿಕರಿಗಾಗಿ ಕೋವಿಡ್ ರಕ್ಷಾ ಸಹಾಯವಾಣಿ ಆರಂಭಿಸಿದ ತೇಜಸ್ವಿ ಸೂರ್ಯ

|
Google Oneindia Kannada News

ಬೆಂಗಳೂರು, ಮಾರ್ಚ್ 13: ಸಂಸದ ತೇಜಸ್ವಿ ಸೂರ್ಯ ಹಿರಿಯ ನಾಗರಿಕರಿಗಾಗಿ ಕೋವಿಡ್ ರಕ್ಷಾ ಸಹಾಯವಾಣಿಯನ್ನು ಆರಂಭಿಸಿದ್ದಾರೆ.

ಕೋವಿಡ್ ರಕ್ಷಾ ವೇದಿಕೆಯನ್ನು 100ಕ್ಕೂ ಅಧಿಕ ವೈದ್ಯರ ಹಾಗೂ 200ಕ್ಕೂ ಅಧಿಕ ಸ್ವಯಂಸೇವಕರ ತಂಡದೊಂದಿಗೆ ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಹಾಗೂ ನಂತರದ ಅವಧಿಯಲ್ಲಿ ನಾಗರಿಕರ ಅನುಕೂಲಕ್ಕಾಗಿ ಆರಂಭಿಸಲಾಗಿತ್ತು.

ಕೋವ್ಯಾಕ್ಸಿನ್ ಕೊರೊನಾ ಲಸಿಕೆ ಹಾಕಿಸಿಕೊಂಡ ಸಿಎಂ ಯಡಿಯೂರಪ್ಪಕೋವ್ಯಾಕ್ಸಿನ್ ಕೊರೊನಾ ಲಸಿಕೆ ಹಾಕಿಸಿಕೊಂಡ ಸಿಎಂ ಯಡಿಯೂರಪ್ಪ

ಅವಧಿಯಲ್ಲಿ ನಾಗರಿಕರ ಅನುಕೂಲಕ್ಕಾಗಿ ಆರಂಭಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಕೋವಿಡ್ -19 ಲಸಿಕಾ ಅಭಿಯಾನವನ್ನು ಯಶಸ್ವಿಯಾಗಿ ಜಾರಿಗೊಳಿಸಲು, ಬೆಂಗಳೂರು ದಕ್ಷಿಣ ಸಂಸದರ ತೇಜಸ್ವಿ ಸೂರ್ಯ ಕೋವಿಡ್ ರಕ್ಷಾ ವೇದಿಕೆ ಆರಂಭಿಸಿದ್ದಾರೆ.

MP Tejasvi Surya Started Covid Raksha Helpline For Senior Citizens

ಸಹಾಯವಾಣಿ 080 6191 4960 ಸಂಖ್ಯೆಗೆ ಕರೆ ಮಾಡಿದಲ್ಲಿ ಹತ್ತಿರದ ಆಸ್ಪತ್ರೆ / ಕೇಂದ್ರದಲ್ಲಿ ಹಿರಿಯ ನಾಗರಿಕರ ಲಸಿಕಾ ನೋಂದಣಿಗೆ ಸಹಾಯ, ತಜ್ಞ ವೈದ್ಯರಿಂದ ಸಮಾಲೋಚನೆಗೆ ಅವಕಾಶವನ್ನು ಕಲ್ಪಿಸಿದ್ದಾರೆ.

ಬೆಂಗಳೂರು ದಕ್ಷಿಣ ಸಂಸದರ ಕಚೇರಿಯು ಇತರ ಸ್ವಯಂಸೇವಕರ ತಂಡದೊಂದಿಗೆ 'ಕೋವಿಡ್ ರಕ್ಷಾ' ವೇದಿಕೆಯ ಮೂಲಕ ಕಾಲ್ ಸೆಂಟರ್ ಅನ್ನು ಪ್ರಾರಂಭಿಸಿದ್ದು, ಈ ಸಹಾಯವಾಣಿಗೆ ಬರುವ ಕರೆಗಳ ಆಧಾರದಲ್ಲಿ ಲಸಿಕಾ ನೋಂದಣಿ ಕಾರ್ಯ ನಡೆಸಲಿದೆ. ಇದರನ್ವಯ, ಹಿರಿಯ ನಾಗರಿಕರಿಗೆ ಹತ್ತಿರದ ಆಸ್ಪತ್ರೆ, ಕೇಂದ್ರದಲ್ಲಿ ಲಸಿಕಾ ನೋಂದಣಿ, ಅಸ್ವಸ್ಥ ನಾಗರಿಕರಿಗೆ ಸಾರಿಗೆ ವ್ಯವಸ್ಥೆ ಹಾಗೂ ಲಸಿಕೆ ಪಡೆದುಕೊಂಡ ನಂತರ ತಜ್ಞ ವೈದ್ಯರಿಂದ ಸಲಹೆ, ಸಮಾಲೋಚನೆಗೆ ಕ್ರಮ ಕೈಗೊಳ್ಳಲಾಗಿದೆ.

Recommended Video

ಅಶ್ವತ್ಥ ನಾರಾಯಣ ಪರ ಡಿವಿಎಸ್ ಬ್ಯಾಟಿಂಗ್ !! | Oneindia Kannada

English summary
MP Tejasvi Surya Started Covid Raksha Helpline For Senior Citizens In Bengaluru. Number Is 080 6191 4960.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X