ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಎಂ ಭೇಟಿಯಾದ ತೇಜಸ್ವಿ ಸೂರ್ಯ: ಹತ್ಯೆಗೆ ಸಂಚು ಕುರಿತು ಚರ್ಚೆ

|
Google Oneindia Kannada News

ಬೆಂಗಳೂರು, ಜನವರಿ 18: ಸಂಸದ ತೇಜಸ್ವಿ ಸೂರ್ಯ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ.

ಇಂದು ಮಧ್ಯಾಹ್ನ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ತೇಜಸ್ವಿ ಸೂರ್ಯ ಅವರ ಕಚೇರಿಯನ್ನು ಉದ್ಘಾಟನೆ ಮಾಡಲಿರುವ ಕಾರಣ ಸಿಎಂ ಭೇಟಿ ಮಾಡಿ ಆಹ್ವಾನ ನೀಡಿದ್ದಾರೆ.

ಸಂಸದ ತೇಜಸ್ವಿ , ಸೂಲಿಬೆಲೆ ಕೊಲೆಗೆ ಸಂಚು: ಪೊಲೀಸರಿಂದ ಬಂತು ಆಘಾತಕಾರಿ ಮಾಹಿತಿಸಂಸದ ತೇಜಸ್ವಿ , ಸೂಲಿಬೆಲೆ ಕೊಲೆಗೆ ಸಂಚು: ಪೊಲೀಸರಿಂದ ಬಂತು ಆಘಾತಕಾರಿ ಮಾಹಿತಿ

ಇದೇ ಸಂದರ್ಭದಲ್ಲಿ ಎಸ್‌ಡಿಪಿಐ ಸಂಘಟನೆಗಳು ತೇಜಸ್ವಿ ಸೂರ್ಯ ಹಾಗೂ ಚಕ್ರವರ್ತಿ ಸೂಲಿಬೆಲೆ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎನ್ನುವ ವಿಚಾರದ ಕುರಿತು ಕೂಡ ಅವರು ಚರ್ಚೆ ನಡೆಸಿದ್ದಾರೆ.

ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಿ

ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಿ

ಆದಷ್ಟು ಬೇಗೆ ಎಸ್ ಡಿ ಪಿಐ, ಪಿಎಫ್‌ಐ ಅಂತ ಸಂಘಟನೆಗಳ ಬಗ್ಗೆ ತೆನಿಖೆ ನಡೆಸಿ ಕ್ರಮ ಕೈಗೊಳ್ಳಿ ಎಂದು ತೇಜಸ್ವಿ ಸೂರ್ಯ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ. ಸಿಎಂ ಜೊತೆ ಮಾತುಕತೆ ವೇಳೆ ಗುಪ್ತಚರ ಇಲಾಖೆ ಎಡಿಜಿಪಿ ಕಪಲ್ ಪಂಥ್ ಸಹ ಹಾಜರಿದ್ದರು.

ತೇಜಸ್ವಿ ಸೂರ್ಯ, ಚಕ್ರವರ್ತಿ ಸೂಲಿಬೆಲೆ ಹತ್ಯೆಗೆ ಸಂಚು

ತೇಜಸ್ವಿ ಸೂರ್ಯ, ಚಕ್ರವರ್ತಿ ಸೂಲಿಬೆಲೆ ಹತ್ಯೆಗೆ ಸಂಚು

ತೇಜಸ್ವಿ ಸೂರ್ಯ ಹಾಗೂ ಚಕ್ರವರ್ತಿ ಸೂಇಬೆಲೆ ಅವರು ಪೌರತ್ವ ನಿಷೇಧ ಕಾಯ್ದೆಯ ಪರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಟೌನ್‌ಹಾಲ್ ಎದುರು ಅವರ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎನ್ನುವ ಆತಂಕಕಾರಿ ವಿಚಾರವನ್ನು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದರು.ಡಿಸೆಂಬರ್ 22ರಂದು ಸಿಎಎ ಪರ ನಡೆಯುತ್ತಿದ್ದ ಸಮಾವೇಶದಲ್ಲಿ ಸಿಎಎ ಸಮಾವೇಶದಲ್ಲಿ ಆರು ಮಂದಿ ಎಸ್‌ಡಿಪಿಐ ಕಾರ್ಯಕರ್ತರು ಜನರ ಮೇಲೆ ಹಲ್ಲೆ ನಡೆಸಿದ್ದರು. ಆರು ಮಂದಿಯನ್ನು ಪೊಲೀಸರು ತಕ್ಷಣವೇ ಬಂಧಿಸಿದ್ದರು.

ಹತ್ಯೆಗೆ ಸಂಚು ಆರೋಪ: ತೇಜಸ್ವಿ ಸೂರ್ಯ, ಚಕ್ರವರ್ತಿ ಸೂಲೆಬೆಲೆ ಏನಂದ್ರು?ಹತ್ಯೆಗೆ ಸಂಚು ಆರೋಪ: ತೇಜಸ್ವಿ ಸೂರ್ಯ, ಚಕ್ರವರ್ತಿ ಸೂಲೆಬೆಲೆ ಏನಂದ್ರು?

ಕಾಂಕ್ರೀಟ್‌ ಕಲ್ಲು ಸೂಲಿಬೆಲೆ ಅವರ ಎದೆಗೆ ಬಿದ್ದಿತ್ತು

ಕಾಂಕ್ರೀಟ್‌ ಕಲ್ಲು ಸೂಲಿಬೆಲೆ ಅವರ ಎದೆಗೆ ಬಿದ್ದಿತ್ತು

ಅಷ್ಟು ಪೊಲೀಸ್ ಇದ್ದರು, ಅಷ್ಟೊಂದು ಮಂದಿ ಸಮಾವೇಶದಲ್ಲಿ ಪಾಲ್ಗೊಂಡಿದ್ದರು, ಹೀಗಿರುವಾಗ ಇವರೆಲ್ಲರ ಮಧ್ಯದಿಂದ ಕಾಂಕ್ರೀಟ್ ಕಲ್ಲೊಂದು ಅವರ ಎದೆಗೆ ಬಂದು ಬಿದ್ದಿತ್ತು, ಈ ಘಟನೆ ನಡೆದ ಬಳಿಕ ಪೊಲೀಸರು ಎಚ್ಚೆತ್ತುಕೊಂಡಿದ್ದರು. ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದರು.

ಇಬ್ಬರನ್ನು ಕೊಲ್ಲುವುದೇ ಎದುರಾಳಿಗಳ ಸಂಚಾಗಿತ್ತು

ಇಬ್ಬರನ್ನು ಕೊಲ್ಲುವುದೇ ಎದುರಾಳಿಗಳ ಸಂಚಾಗಿತ್ತು

ನಮ್ಮನ್ನು ಕೊಲ್ಲುವುದೇ ಎದುರಾಳಿಗಳ ಉದ್ದೇಶ ಎನ್ನುವುದು ಅಂದೇ ಸ್ಪಷ್ಟವಾಗಿತ್ತು. ಕಾರ್ಯಕ್ರಮ ಮುಗಿದ ಮೇಲೆ ಪೊಲೀಸರಿಗೆ ನಾವು ಇದನ್ನು ವಿವರಿಸಿದ್ದೆವು. ನಮಗೆ ಯಾರಿಂದಲೂ ಏನೂ ಮಾಡಲು ಸಾಧ್ಯವಾಗಿಲ್ಲ. ಇದಕ್ಕೆ ಪೊಲೀಸರಿಗೆ ಧನ್ಯವಾದ ತಿಳಿಸಲೇ ಬೇಕು ಎಂದರು.

English summary
MP Tejasvi Surya Met Chief Minister Yediyurappa Today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X