• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಾಂತಿನಗರದ ಜಪಾನಿ ಹೋಟೆಲ್ ವಿರುದ್ಧ ಸಂಸದ ಕಿಡಿ

By Mahesh
|
Google Oneindia Kannada News

ಬೆಂಗಳೂರು, ಜೂ.27: ಸರ್ವಜನಾಂಗದ ಶಾಂತಿಯ ತೋಟ ಎನಿಸಿರುವ ಕನ್ನಡ ನಾಡಿನ ರಾಜಧಾನಿ ಬೆಂಗಳೂರಿನ ಶಾಂತಿನಗರದ ಹೋಟೆಲ್ ವೊಂದರ ಮೇಲೆ ಸಂಸದ ರಾಜೀವ್ ಚಂದ್ರಶೇಖರ್ ಕಿಡಿಕಾರಿದ್ದಾರೆ. ಕಳೆದ ಕೆಲವು ದಿನಗಳಿಂದ ಸದ್ದು ಮಾಡಿದ್ದ ಜಪಾನಿ ಹೋಟೆಲ್ ವಿರುದ್ಧ ಸಂಸದ ರಾಜೀವ್ ಅವರು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.

ಶಾಂತಿನಗರದ Uno-In ಜಪಾನಿ ಹೋಟೆಲ್ ನಲ್ಲಿ ಭಾರತಿಯರಿಗೆ ಪ್ರವೇಶ ನಿರಾಕರಿಸಿದ ಸುದ್ದಿಯನ್ನು ಬೆಂಗಳೂರು ಮಿರರ್ ಇತ್ತೀಚೆಗೆ ಪ್ರಕಟಿಸಿತ್ತು. ಈ ಬಗ್ಗೆ ರೇಡಿಯೋ ಮಿರ್ಚಿ 98.3 ಎಫ್ಎಂ ವಾಹಿನಿಯ 'ಹಾಯ್ ಬೆಂಗಳೂರು' ಕಾರ್ಯಕ್ರಮದಲ್ಲಿ ಆರ್ ಜೆ ಸ್ಮಿತಾ ದೀಕ್ಷಿತ್ ಕೂಡಾ ಬೆಂಗಳೂರಿಗರ ಗಮನ ಸೆಳೆದರು.

ವಿವಾದಿತ ಹೋಟೆಲ್ ವಿರುದ್ಧ ನಿರೀಕ್ಷೆಯಂತೆ ಜನಾಭಿಪ್ರಾಯ ಸಿಕ್ಕಿತು. ಆದರೆ, ವಿಷಯ ಮುಂದಕ್ಕೆ ಹೋಗಲಿಲ್ಲ. ಈ ಸುದ್ದಿ ಬಗ್ಗೆ ತಿಳಿದ ಜನಾನುರಾಗಿ ಸಂಸದ ರಾಜೀವ್ ಚಂದ್ರಶೇಖರ್ ಅವರು 'ಘಟನೆ ಬಗ್ಗೆ ತೀವ್ರ ವಿಷಾದವಿದೆ. ಯಾವುದೇ ಹೊಟೆಲ್ ಆಗಲಿ ಅತಿಥಿಗಳನ್ನು ರಾಷ್ಟ್ರೀಯತೆ ಆಧಾರದ ಮೇಲೆ ವರ್ಣ ಬೇಧ ಮಾಡುವಂತಿಲ್ಲ' ಎಂದಿದ್ದಾರೆ.

ಈ ಸಂಬಂಧ ಸಂಸದ ರಾಜೀವ್​ ಚಂದ್ರಶೇಖರ್​​ ಈಗಾಗಲೇ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ಜಾತಿ, ಧರ್ಮ, ರಾಷ್ಟ್ರೀಯತೆಯ ಹೆಸರಿನಲ್ಲಿ ತಾರತಮ್ಯ ಮಾಡುವುದನ್ನು ಬಲವಾಗಿ ವಿರೋಧಿಸಿದ್ದಾರೆ.

'ನಾವೇನು ಪ್ರಜಾಪ್ರಭುತ್ವದಲ್ಲಿದ್ದೇವಾ ಅಥವಾ ಇನ್ನೂ ಬ್ರಿಟಿಷ್ ರಾಜ್ಯಭಾರವಿದೆಯೇ? ಈ ಹಿಂದೆ Indians and dogs not allowed ಎಂದು ಬ್ರಿಟಿಷರು ಹಾಕಿದ್ದ ಫಲಕ ಕಿಚ್ಚು ಎಬ್ಬಿಸಿತ್ತು. ಈಗ Indians not allowed ಎಂಬುದನ್ನು ಯಾವ ರೀತಿಯಿಂದಲೂ ಸಹಿಸಲು ಸಾಧ್ಯವಿಲ್ಲ' ಎಂದು ಬಿ ಪ್ಯಾಕ್ ಸದಸ್ಯ, ಮಣಿಪಾಲ್ ವಿದ್ಯಾಸಂಸ್ಥೆ ಚೇರ್ಮನ್ ಮೋಹನ್ ದಾಸ್ ಪೈ ಖಂಡಿಸಿದ್ದಾರೆ.

English summary
Rajya sabha Member Rajeev Chandrasekhar says no hotel can deny entry to a guest on grounds of religion, nationality or race. He was upset with news on racist Japanese hotel Uno- In in shanthinagar, Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X